This is the title of the web page

ನಿಪ್ಪಾಣಿಯಲ್ಲಿ ಯೋಗ ಮಾಡಿದ 10,000 ಜನ

 

ನಿಪ್ಪಾಣಿ : 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ನಗರದ ಶಿರಪೇವಾಡಿ ಜೊಲ್ಲೆ ಉದ್ಯೋಗ ಸಮೂಹದ ಸಿಬಿಎಸ್ ಸಿ ಶಾಲೆಯ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡ ಆಚರಣೆಯಲ್ಲಿ 10,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿ, ಶಿಕ್ಷಕರು, ಸಾರ್ವಜನಿಕರೂ ಈ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಬಿಜೆಪಿ ಸಂಸದ, ಜೊಲ್ಲೆ ಉದ್ಯೋಗ ಸಮೂಹದ ಮುಖ್ಯಸ್ಥ ಅಣ್ಣಾಸಾಹೇಬ್ ಜೊಲ್ಲೆ ಪ್ರಧಾನಿ ನರೇಂದ್ರ ಮೋದಿ ಭಾರತದ ಯೋಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ದಿನನಿತ್ಯದಲ್ಲಿ ಯೋಗ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಬೇಕು. ಯೋಗ ಮನುಷ್ಯನ ಆರೋಗ್ಯದ ಜೊತೆಗೆ ಮನಸ್ಸು ಶಾಂತಿಗೊಳಿಸುತ್ತದೆ ಎಂದರು.

ಪಥಂಜಲಿ ಯೋಗ ಪೀಠದ ಕರ್ನಾಟಕ ಅಧ್ಯಕ್ಷ ಬಾಬರಲಾಲ ಆರ್ಯ ಅವರು ಮಾತನಾಡಿ ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ಕಾಣಬೇಕಾದರೆ ಪ್ರತಿನಿತ್ಯ ಯೋಗವನ್ನು ಮಾಡಬೇಕು. ನಿಪ್ಪಾಣಿಯಲ್ಲಿ ಜೊಲ್ಲೆ ದಂಪತಿಗಳು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯೋಗ ದಿನಾಚರಣೆ ಯನ್ನು ಆಚರಿಸಿರುವ ಅವರ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಪ್ರಮುಖವಾಗಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಡಿಡಿಪಿಐ ಮೋಹನಕುಮಾರ ಹಂಚ್ಯಾಟೆ, ಎಡಿಎಚ್ ಒ ಡಾ.ಎಸ್.ಎಸ್.ಗಡೇದ, ಡಿವೈಎಸ್ ಪಿ ಬಸವರಾಜ ಎಲಿಗಾರ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಬೀರೇಶ್ವರ ಸೊಸಾಯಿಟಿ ಚೇರಮನ್ ಜಯಾನಂದ ಜಾಧವ, ತಹಶೀಲ್ದಾರ ಮೋಹನ ಭಸ್ಮೆ, ಪ್ರಗತಿಪರ ಕೃಷಿಕ ಶಿವಮೂರ್ತಿ ಫಡಲಾಳೆ, ನ್ಯಾಯವಾದಿ ಅಶೋಕ ಹರಗಾಪೂರೆ, ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ ನೇರ್ಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

You might also like
Leave a comment