Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

Crime News

10ನೇ ತರಗತಿ ವಿದ್ಯಾರ್ಥಿ ಹತ್ಯೆಯಾದದ್ದು ಪಿಯು ವಿದ್ಯಾರ್ಥಿಗಳಿಂದ..!


ಬೆಳಗಾವಿ : ಇಲ್ಲಿಯ ಖಾಸಗಿ ಶಾಲೆಯೊಂದರ ಹತ್ತನೇ ತರಗತಿಯ ವಿದ್ಯಾರ್ಥಿ 16 ವರುಷದ ಪ್ರಜ್ವಲ್ ಕರಿಗಾರ ಹತ್ಯೆಯಾದದ್ದು ಅದೇ ಸಂಸ್ಥೆಯ ಪದವಿಪೂರ್ವ ತರಗತಿಯ ವಿದ್ಯಾರ್ಥಿಗಳಿಂದ ಎಂಬ ಆಘಾತಕರ ಮಾಹಿತಿ ಬಂದಿದೆ.

ಬುಧವಾರ ಶಾಲೆ ಬಿಟ್ಟ ತರುವಾಯ ಪ್ರಜ್ವಲ್ ಬೈಕೊಂದರ ಮೇಲೆ ಹಿಂದೆ ಕುಳಿತು ಹೋಗಿರುವದು ಶಾಲೆಯ ಆವರಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು ಶೀಘ್ರ ವಶ ಪಡೆಯುವ ಸಾಧ್ಯತೆಯಿದೆ. ಪ್ರಜ್ವಲ್ ನನ್ನು ಬೈಕ್ ಮೇಲೆ ಕರೆದುಕೊಂಡು ಹೋದವ ಅದೇ ಕಾಲೇಜಿನ ವಿದ್ಯಾರ್ಥಿ. ಸುಮಾರು ನಾಲ್ಕು ಜನ ವಿದ್ಯಾರ್ಥಿಗಳು ಮತ್ತು ಹೊರಗಿನ ವ್ಯಕ್ತಿಗಳು ಈ ಕೊಲೆ ಮಾಡಿರುವ ಸಾಧ್ಯತೆಯಿದೆ.

ಪ್ರಜ್ವಲ್ ನನ್ನು ಬೆಳಗಾವಿ ತಾಲೂಕಿನ ಸಾಂಬ್ರಾ ಹತ್ತಿರದ ಮುಚಂಡಿ ಗ್ರಾಮದ ಹೊರವಲಯದ ಮಾವಿನ ತೋಪಕ್ಕೆ ಕರೆದುಕೊಂಡು ಹೋಗಿ ಮೈಮೇಲಿನ ಬಟ್ಟೆ ತೆಗೆದು ಚಾಕೂವಿನಿಂದ ಬೆನ್ನು, ಕುತ್ತಿಗೆಯ ಮೇಲೆ ಹೊಡೆದು ಆತ ಕೆಳಗೆ ಬಿದ್ದ ನಂತರ ತಲೆಯ ಮೇಲೆ ದೊಡ್ಡ ಕಲ್ಲನ್ನು ಹಾಕಲಾಗಿತ್ತು. ಗುರುತು ಸಿಗದಷ್ಟು ಆತನ ಮುಖ ಜಜ್ಜಿಹೋಗಿತ್ತು. ಆತ ಧರಿಸಿದ್ದ ಬಟ್ಟೆಯಾಗಲಿ, ಸ್ಕೂಲ್ ಬಾಗ್, ಶೂ ಮುಂತಾದ ಯಾವುದೂ ಕೊಲೆ ನಡೆದ ಸ್ಥಳದಲ್ಲಿ ಕಂಡು ಬಂದಿಲ್ಲ. ಆದರೆ ಆತ ಧರಿಸಿದ್ದ ಪ್ಯಾಂಟಿನ ಬೆಲ್ಟ್ ಮೇಲಿದ್ದ ಸ್ಕೂಲ್ ಬ್ಯಾಚ್ ನಿಂದ ಆತನ ಪತ್ತೆ ಮಾಡಲಾಯಿತು.

ಪ್ರಜ್ವಲ್ ನನ್ನು ಕರೆದುಕೊಂಡು ಹೋದವರು ಬಹುಷಃ ಬುಧವಾರ ರಾತ್ರಿ ಹತ್ಯೆ ಮಾಡಿರುವ ಸಾಧ್ಯತೆಯಿದೆ, ಗುರುವಾರ ಮುಂಜಾನೆ ಶವ ಪತ್ತೆಯಾಗಿತ್ತು.

ಮಗ ಶಾಲೆಯಿಂದ ಸಂಜೆ ಹಿಂದಿರುಗದ ಕಾರಣ ಆತನ ತಂದೆ ಶಿವಾನಂದ ಕರಿಗಾರ್ ಮೊದಲು ಮಾರ್ಕೆಟ್ ಪೊಲೀಸ್ ಸ್ಟೇಷನ್ ಗೆ ನಂತರ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಲೆಯಿದ್ದು ಅಲ್ಲಿಂದಲೇ ಪ್ರಜ್ವಲ್ ಕಾಣೆಯಾಗಿದ್ದರಿಂದ ಕ್ಯಾಂಪ್ ಪೊಲೀಸರಿಗೆ ದೂರು ನೀಡಿದ್ದರು. ಹತ್ಯೆ ನಡೆದ ಸ್ಥಳ ತಮ್ಮ ವ್ಯಾಪ್ತಿಯಲ್ಲಿ ಬರುವದರಿಂದ ಮಾರಿಹಾಳ ಪೊಲೀಸರೂ ತನಿಖೆ ನಡೆಸುತ್ತಿದ್ದಾರೆ.

ಹತ್ಯೆಯಾದ ಪ್ರಜ್ವಲ್ ಹತ್ತನೇ ತರಗತಿಯಲ್ಲಿದ್ದರೂ ಪದವಿ ಪೂರ್ವ ವಿದ್ಯಾರ್ಥಿಗಳೊಂದಿಗೆ ಹೆಚ್ಚು ವಡನಾಟ ಹೊಂದಿದ್ದ. ವಿದ್ಯಾಭ್ಯಾಸದಲ್ಲಿ ಅಷ್ಟೊಂದು ಆಸಕ್ತಿ ಹೊಂದಿರದ ಆತ ತರಗತಿಯ ಸಹಪಾಠಿಗಳೊಂದಿಗೆ ಜಗಳ ಹೊಡೆದಾಟ ಮಾಡುತ್ತಿದ್ದ, ಅಲ್ಲದೇ ಶಿಕ್ಷಕರೊಂದಿಗೂ ಒರಟುತನದಿಂದ ವರ್ತಿಸುತ್ತಿದ್ದ ಎನ್ನಲಾಗಿದೆ.

ಪ್ರಜ್ವಲ್ ನ ತಂದೆ ಗ್ಯಾರೇಜೊಂದರಲ್ಲಿ, ತಾಯಿ ದರ್ಜಿ ಕೆಲಸ ಮಾಡುತ್ತಿದ್ದು, ತಮ್ಮ ಜಿಎ ಹೈಸ್ಕೂಲ್ ನಲ್ಲಿ ಓದುತ್ತಿದ್ದಾನೆ.


A B Dharwadkar
the authorA B Dharwadkar

Leave a Reply