Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Crime News

10 ತಿಂಗಳಲ್ಲೇ ಹಾವೇರಿ ಜಿಲ್ಲೆಯಲ್ಲಿ 112 ರೈತರ ಆತ್ಮಹತ್ಯೆ

death

ಹಾವೇರಿ : 10 ತಿಂಗಳಲ್ಲೇ ಬರ, ಅತಿವೃಷ್ಟಿಯ ಕಾರಣ ಬೆಳೆ ನಷ್ಟದಿಂದ ಹಾವೇರಿ ಜಿಲ್ಲೆಯಲ್ಲಿ 112 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿ ಬಹಿರಂಗವಾಗಿದೆ.

ಹಾವೇರಿ ಜಿಲ್ಲೆಯ ಅತಿವೃಷ್ಟಿ, ಪ್ರವಾಹ, ಬೆಳೆಹಾನಿಯಿಂದ ನಲುಗಿ ಹೋಗಿದ್ದು, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸುಮಾರು 70 ಸಾವಿರ ಹೆಕ್ಟೇರಗೂ ಅಧಿಕ ಬೆಳೆಹಾನಿಯಾಗಿದೆ.

ಸಾಲಕ್ಕೆ ಹೆದರಿ ರೈತರು ಆತ್ಮಹತ್ಯೆಗೆ ಹೆಜ್ಜೆ ಇಡುವಂತಾಗಿದೆ. ಜಿಲ್ಲೆಯ ಬಹುತೇಕ ರೈತರು ಬೆಳೆಹಾನಿ ಹಾಗೂ ಸಾಲಬಾಧೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿ ಬಯಲಾಗಿದೆ.

2022 ರ ಜನವರಿಯಲ್ಲಿ 13 ರೈತರು ಆತ್ಮಹತ್ಯೆ ಮಾಡಿಕೊಂಡರೆ, ಫೆಬ್ರವರಿಯಲ್ಲಿ 10, ಮಾರ್ಚ 13, ಏಪ್ರಿಲ್ 10, ಮೇ 10, ಜೂನ್ 9, ಜುಲೈ 8, ಅಗಸ್ಟ 12, ಸೆಪ್ಟೆಂಬರ 20, ಅಕ್ಟೋಬರನಲ್ಲಿ 7 ರೈತರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.


A B Dharwadkar
the authorA B Dharwadkar

Leave a Reply