Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National News

ಗುಜರಾತನಲ್ಲಿ ತೂಗುಸೇತುವೆ ಕುಸಿತ ಪ್ರಕರಣ : 137 ಶವ ಪತ್ತೆ


ಗಾಂಧಿನಗರ: ಹಳೆಯ ಸೇತುವೆಯೊಂದು ನವೀಕರಣಗೊಂಡ ಒಂದು ವಾರದ ನಂತರ ಮುರಿದು ಬಿದ್ದು ನಿನ್ನೆ ಭೀಕರ ದುರಂತವೊಂದು ಸಂಭವಿಸಿತ್ತು. ಘಟನೆಯಿಂದಾಗಿ ಸಾವಿನ ಸಂಖ್ಯೆ ಇದೀಗ 137ಕ್ಕೆ ಏರಿಕೆಯಾಗಿದೆ.

ಅಹಮದಾಬಾದ‌ನಿಂದ 200 ಕಿಮೀ ದೂರದಲ್ಲಿರುವ ತೂಗು ಸೇತುವೆ ನಿನ್ನೆ ಸಂಜೆ 6.42ಕ್ಕೆ ಕುಸಿದು ಬಿದ್ದಿದ್ದು, ಛತ್ ಪೂಜೆಗೆ ಸಂಬಂಧಿಸಿದಂತೆ ಕೆಲವು ಆಚರಣೆಗಳನ್ನು ಮಾಡಲು ಸುಮಾರು 500 ಕ್ಕೂ ಹೆಚ್ಚು ಜನರು ಅದರ ಮೇಲೆ ಜಮಾಯಿಸಿದ್ದ ವೇಳೆ ಈ ಘಟನೆ ನಡೆದಿದೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ರಾಜಕೋಟನ ಬಿಜೆಪಿ ಸಂಸದ ಮೋಹನ್ಭಾಯ ಕಲ್ಯಾಣಜಿ ಕುಂದಾರಿಯಾ ಅವರು, ಈ ದುರಂತದಲ್ಲಿ 137ಕ್ಕೂ ಹೆಚ್ಚು ಶವಗಳನ್ನು ನದಿಯಿಂದ ಹೊರ ತೆಗೆಯಲಾಗಿದೆ. ಅದರಲ್ಲಿ ಹೆಚ್ಚಿನವರು ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಇದ್ದಾರೆ. ಉಳಿದವರನ್ನು ರಕ್ಷಿಸಲಾಗಿದೆ. ಎನ್ ಡಿಆರ್‌ಎಫ್ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇದು ತುಂಬಾ ದುಃಖಕರವಾಗಿದೆ ಎಂದು ಹೇಳಿದ್ದಾರೆ.

ಅಂದಹಾಗೇ, ಗುಜರಾತಿನ ಮೊರ್ಬಿ ಕೇಬಲ್ ಸೇತುವೆ ಮುರಿದು ಬಿದ್ದ ದುರಂತದ ಕುರಿತಂತೆ ಪ್ರತ್ಯಕ್ಷ ದರ್ಶಿ ಅಮಿತ ಪಟೇಲ್ ಹಾಗೂ ಸುಕ್ರಮ ಎಂಬುವರು ಮಾತನಾಡಿ, ದೀಪಾವಳಿ ರಜಾದಿನಗಳು ಮತ್ತು ವಾರಾಂತ್ಯದ ದೃಷ್ಟಿಯಿಂದ ಅನೇಕ ಜನರು ಇಲ್ಲಿಗೆ ಬಂದರು. ಇದು ಪ್ರವಾಸಿ ಸ್ನೇಹಿ ಸ್ಥಳವಾಗಿದೆ. ಸೇತುವೆಯಲ್ಲಿ ಭಾರಿ ಜನಸಂದಣಿಯಿಂದಾಗಿ ಈ ಘಟನೆ ಸಂಭವಿಸಿದೆ ಎಂದಿದ್ದಾರೆ.

ಮೃತದೇಹಗಳನ್ನು ಪಡೆಯುವ ಪ್ರಕ್ರಿಯೆ ಮುಂದುವರೆದಿದೆ. ಸಾವಿನ ಸಂಖ್ಯೆ 140ಕ್ಕೂ ಹೆಚ್ಚು ತಲುಪಲಾಗಿದೆ ಎಂದು ಸ್ಥಳೀಯರ ಮಾತಾಗಿದೆ. ಇಂದು ಮಧ್ಯಾಹ್ನದ ವೇಳೆಗೆ ರಕ್ಷಣಾ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಈ ದುರಂತದಲ್ಲಿ ಸಾವನ್ನಪ್ಪಿರುವ ಸಂಖ್ಯೆ ನಿಖರವಾಗಿ ತಿಳಿಯಲಿದೆ. ರಕ್ಷಣಾ ಕಾರ್ಯಕ್ಕಾಗಿ ಕೇಂದ್ರ ಏಜೆನ್ಸಿಗಳ ಜೊತೆಗೆ ಅಗ್ನಿಶಾಮಕ ದಳ, ಕೋಸ್ಟ ಗಾರ್ಡ, ಗರುಡ ಕಮಾಂಡೋಸ ಮತ್ತು ನೌಕಾಪಡೆಯ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ.


A B Dharwadkar
the authorA B Dharwadkar

Leave a Reply