Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ವಿಜಯಪುರ ಪಾಲಿಕೆ ಚುನಾವಣೆಯಲ್ಲಿ ಸಿಗದ ಬಹುಮತ; ಯತ್ನಾಳಗೆ ಮುಖಭಂಗ


ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ 35 ಸ್ಥಾನಗಳಲ್ಲಿ 33 ವಾರ್ಡಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಹಾಕಿದ್ದರೂ 17 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಮೇಲುಗೈ ಸಾಧಿಸಿದೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪ್ರತಿಷ್ಠೆಯಾಗಿದ್ದ ಈ ಚುನಾವಣೆಯನ್ನು ಯಾವುದೇ ಸ್ಥಿತಿಯಲ್ಲಿ ಗೆದ್ದುಕೊಳ್ಳಲು ಬಿಜೆಪಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರನ್ನೂ ಸಹ ನೇಮಿಸಿತ್ತು. ಆದರೂ ಗೆಲುವಿನ ಗಡಿ ತಲುಪಲು ವಿಫಲವಾಗಿದೆ. ಆದರೆ ಅಧಿಕಾರ ಸ್ಥಾಪನೆಗೆ ಒಂದೇ ಮತದ ಅವಶ್ಯಕತೆಯಿದ್ದು ಪಕ್ಷೇತರರ ಬಂಬಲದಿಂದ ಸುಲಭವಾಗಿ ಅಧಿಕಾರ ಪಡೆದುಕೊಳ್ಳಬಹುದು.

ಆಡಳಿತ ಪಕ್ಷದ ಸರಕಾರವಿದ್ದೂ ಸಹ ಬಹುಮತ ಪಡೆಯಲು ವಿಫಲವಾಗಿರುವ ಯತ್ನಾಳಗೆ, ವಿಜಯಪುರ ನಗರ ಮುಂದಿನ ವಿಧಾನಸಭೆ ಚುನಾವಣೆ ಕಠಿಣವಾಗುವ ಸಾಧ್ಯತೆಯಿದೆ.

ಎಲ್ಲ 35 ವಾರ್ಡಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ 10 ಸ್ಥಾನಕ್ಕೆ ತೃಪ್ತಿಪಟ್ಟಿದ್ದು, ಜೆಡಿಎಸ್ 20 ಸ್ಥಾನಗಳಲ್ಲಿ ಸ್ಪರ್ಧಿಸಿ ಒಂದು ವಾರ್ಡನಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ.

ಮತ್ತೊಂದೆಡೆ ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಹೈದರಾಬಾದ ಸಂಸದ ಅಸಾದುದ್ದೀನ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಸ್ಪರ್ಧಿಸಿದ ನಾಲ್ಕು ಸ್ಥಾನಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ವಿಧಾನಸಭೆ ಮುಂದಿನ ಚುನಾವಣೆಗೆ ಇತರೆ ರಾಜಕೀಯ ಪಕ್ಷಗಳಿಗೆ ಹೊಸ ಸಂದೇಶ ನೀಡಲು ಮುಂದಾಗಿದೆ.

ಇನ್ನು ಈ ಬಾರಿ ಐವರು ಪಕ್ಷೇತರರು ಗೆಲ್ಲುವ ಮೂಲಕ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ತಮ್ಮ ಬಲ ವೃದ್ಧಿಸಿಕೊಂಡಿದ್ದಾರೆ. ಇದಲ್ಲದೇ ಇತರೆ ಒಂಭತ್ತು ವಾರ್ಡಗಳಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಪೊರಕೆ ಒಂದೂ ಖಾತೆ ತೆರೆಯದೇ ಮೂಲೆ ಸೇರಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದ ಕೆಆರ್ ಎಸ್ ಪಕ್ಷದ ಕಥೆಯೂ ಶೂನ್ಯ ಸಾಧನೆ ಎನಿಸಿದೆ.

35 ಸದಸ್ಯ ಬಲದ ಪಾಲಿಕೆ ಅಧಿಕಾರಕ್ಕೆ ಏರಲು ಸರಳ ಬಹುಮತಕ್ಕೆ 18 ಸದಸ್ಯರ ಅಗತ್ಯವಿದೆ. ಪ್ರಕಟಿತ ಫಲಿತಾಂಶದಿಂದ ಬಿಜೆಪಿ ಸರಳ ಬಹುಮತದೊಂದಿಗೆ ಪಾಲಿಕೆ ಗದ್ದುಗೆ ಏರಲು ಓರ್ವ ಸದಸ್ಯರ ಬೆಂಬಲ ಬೇಕಿದೆ.

ಆದರೆ ಸರ್ಕಾರ ಚುನಾವಣೆ ಪೂರ್ವದಲ್ಲಿ ಪ್ರಕಟಿಸಿರುವ ಮೀಸಲು ಪ್ರಕಾರ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

ಹಾಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದಿನೇಶ ವಿಜಯ ಸಾಧಿಸಿದ್ದು, ಸರ್ಕಾರ ಮೇಯರ್ ಸ್ಥಾನದ ಮೀಸಲು ಬದಲಿಸದಿದ್ದರೆ ಮೇಯರ್ ಸ್ಥಾನ ಸುಲಭವಾಗಿ 10 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಾಲಾಗಲಿದೆ. ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿದೆ.


A B Dharwadkar
the authorA B Dharwadkar

Leave a Reply