This is the title of the web page

ಇಂಜಿನೀಯರ ಮನೆಯಲ್ಲಿ ಪತೆಯಾಯ್ತು ಚಿನ್ನದ ತಟ್ಟೆ ಸೇರಿ 2 ಕೆಜಿ ಚಿನ್ನಾಭರಣ!

 

ಉಡುಪಿ, ೧೭- ಇಂದು ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದು, ಉಡುಪಿ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ ಆಗಿರುವ ಹರೀಶ​ ಮನೆಯಲ್ಲಿ 2 ಕೆಜಿ ಚಿನ್ನಾಭರಣ ಪತ್ತೆಯಾಗಿದೆ.

ಎಸಿಬಿ ಡಿವೈಎಸ್​ಪಿ ಮಂಜುನಾಥ​​ ಕವರಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಹರೀಶ್​ ಮನೆಯಲ್ಲಿ ಚಿನ್ನಾಭರಣವಲ್ಲದೇ 5 ಲಕ್ಷ ನಗದು ಹಣ, ದುಬಾರಿ ಬೆಲೆಯ ವಾಚುಗಳು, ಮೂರು ವಾಹನ , ಚಿನ್ನದ ತಟ್ಟೆ, ಚಿನ್ನದ ಡಾಬು, 15ಕ್ಕೂ ಹೆಚ್ಚು ಚಿನ್ನದ ಬಳೆ, 30ಕ್ಕೂ ಹೆಚ್ಚು ಚಿನ್ನದ ಸರ, ನೆಕ್ಲೆಸ್, ಬ್ರಾಸ್ಲೆಟ್ ಹಾಗೂ ಚಿನ್ನದ ಉಂಗುರಗಳು, ದೇವರ ಮೂರ್ತಿ ಪತ್ತೆಯಾಗಿದೆ.

You might also like
Leave a comment