This is the title of the web page

ಟೈಯರ್ ಸ್ಫೋಟಗೊಂಡು ಅಟೋಗೆ ಢಿಕ್ಕಿ ಹೊಡೆದ ಬಸ್ : ೨ ಸಾವು

 

ವಿಜಯನಗರ: ಸಾರಿಗೆ ಬಸ್ ಟೈಯರ್ ಸ್ಪೋಟಗೊಂಡ ಆಟೋಗೆ ಢಿಕ್ಕಿ ಹೊಡೆದಿದೆ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿರುವ ಘಟನೆ ಕೂಡ್ಲಿಗಿ ಬಳಿಯ ಕುಪ್ಪಿನಕೇರಿ ಬಳಿ ನಡೆದಿದೆ.

ದಾವಣಗೆರೆಯಿಂದ ಕೂಡ್ಲಿಗೆ ಮಾರ್ಗವಾಗಿ ಬಳ್ಳಾರಿಗೆ ತೆರಳುತ್ತಿದ್ದಂತ ಸಾರಿಗೆ ಬಸ್ ಟೈಯರ್ ಸ್ಪೋಟಗೊಂಡಿದೆ. ಇದರಿಂದಾಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಢಿಕ್ಕಿ ಹೊಡೆದಿದೆ. ಆಟೋದಲ್ಲಿದ್ದ ಪುಷ್ಪಲತಾ (20) ಮತ್ತು ಮೀನಾಕ್ಷಿ (38) ಎಂಬವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದರಲ್ಲಿದ್ದ ರಮೇಶ, ಗೌಡ್ರು ಈರಣ್ಣ, ಅಭಿಷೇಕ, ಸ್ವಾತಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಬಳ್ಳಾರಿ, ಕೂಡ್ಲಿಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

You might also like
Leave a comment