This is the title of the web page

ರಾಜ್ಯದಲ್ಲಿ ಇಳಿಕೆ ಕಂಡ ಕೊರೋನಾ; ಬೆಳಗಾವಿಯಲ್ಲಿ 2 ತಿಂಗಳ ಮಗು ಬಲಿ

ಬೆಂಗಳೂರು, 3- ಕೊರೋನಾ ಸೋಂಕು ಇತ್ತೀಚಿಗೆ ಮಕ್ಕಳಲೂ ಕಂಡು ಬರುತ್ತಿದ್ದು, ಬೆಳಗಾವಿಯ ಎರಡು ತಿಂಗಳ ಹಸುಗೂಸು ಬಲಿಯಾಗಿದೆ. ಇಷ್ಟು ಪುಟ್ಟ ಕೂಸು ಸೋಂಕಿಗೆ ಬಲಿಯಾಗಿದ್ದು ರಾಷ್ಟ್ರದಲ್ಲೇ ಮೊದಲನೇ ಪ್ರಕರಣವಾಗಿರಬಹುದು.

ಕೊರೋನಾ ಸೋಂಕಿನಿಂದ ತೀವ್ರವಾಗಿ ಬಾದಿತವಾಗಿರುವ ಕರ್ನಾಟಕಕ್ಕೆ ಬುಧವಾರ ಸ್ವಲ್ಪ ನೆಮ್ಮದಿಯ ದಿನ, ಇಂದು ಸೋಂಕು ಹೊಸದಾಗಿ 20,505 ಜನರಲ್ಲಿ ಕಂಡು ಬಂದಿದ್ದರೆ, ಅದರ ಎರಡರಷ್ಟು ಅಂದರೆ 40,903 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿರುತ್ತಾರೆ. ಅದರಂತೆ 81 ಜನರು ಸೋಂಕಿನಿಂದ ಇಂದು ಮೃತಪಟ್ಟಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಳಗಾವಿಯಲ್ಲಿ 2 ತಿಂಗಳ ಮಗು ಮೃತಪಟ್ಟಿದೆ. ರಾಜ್ಯದಲ್ಲಿ ಸಕಾರಾತ್ಮಕ ದರ 12.55%ಕ್ಕೆ ಇಳಿದಿದೆ. ಕೋವಿಡ್-19 ಮರಣ ಪ್ರಮಾಣ ಶೇ.0.39% ರಷ್ಟಿದೆ.

ಬೆಂಗಳೂರಿನಲ್ಲಿ ಒಟ್ಟು 8,850 ಹೊಸ ಕೇಸ್ ಪತ್ತೆಯಾಗಿದ್ದು, 13 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರನ್ನು ಹೊರತು ಪಡಿಸಿ ಮೈಸೂರಲ್ಲಿ ಅತೀ ಹೆಚ್ಚು, 1,209 ಸೋಂಕು ದಾಖಲಾಗಿದೆ. ಬೆಳಗಾವಿಯಲ್ಲಿ ಕೊರೋನಾ ಹೆಚ್ಚಳ ಮುಂದುವರಿದಿದ್ದು 1060 ಜನರಿಗೆ ಇಂದು ಸೋಂಕು ದೃಢಪಟ್ಟಿದೆ.  ಬೆಂಗಳೂರಿನ ಬಳಿಕ ದಕ್ಷಿಣ ಕನ್ನಡದಲ್ಲಿ 10 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಜಿಲ್ಲಾವಾರು ಸೋಂಕಿನ ಮಾಹಿತಿ :

ಬಾಗಲಕೋಟ 303, ಬಳ್ಳಾರಿ 390, ಬೆಳಗಾವಿ 1,060, ಬೆಂಗಳೂರು ಗ್ರಾಮಾಂತರ 195, ಬೆಂಗಳೂರು ನಗರ 8,850, ಬೀದರ 190, ಚಾಮರಾಜನಗರ 364, ಚಿಕ್ಕಬಳ್ಳಾಪುರ 311, ಚಿಕ್ಕಮಗಳೂರು 89, ಚಿತ್ರದುರ್ಗ 208, ದಕ್ಷಿಣ ಕನ್ನಡ 412, ದಾವಣಗೆರೆ 160, ಧಾರವಾಡ 633, ಗದಗ 131, ಹಾಸನ 590, ಹಾವೇರಿ 411, ಕಲಬುರಗಿ 337, ಕೊಡಗು 543, ಕೋಲಾರ 300, ಕೊಪ್ಪಳ 220, ಮಂಡ್ಯ 579, ಮೈಸೂರು 1,209, ರಾಯಚೂರು 165, ರಾಮನಗರ 79, ಶಿವಮೊಗ್ಗ 715, ತುಮಕೂರು 762, ಉಡುಪಿ 542, ಉತ್ತರ ಕನ್ನಡ 595, ವಿಜಯಪುರ 92 ಮತ್ತು ಯಾದಗಿರಿಯಲ್ಲಿ 70 ಸೋಂಕು ದಾಖಲಾಗಿದೆ.

You might also like
Leave a comment