Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ವಿಜಯಪುರದಲ್ಲಿ ಮತ್ತೆ ಎರಡು ಬಾರಿ ಭೂಕಂಪ 

earthquake

ವಿಜಯಪುರ: ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿಯಿಂದ ಸತತವಾಗಿ ಎರಡು ಬಾರಿ ಭೂಕಂಪನವಾಗಿದೆ. ನಸುಕಿನ ಜಾವ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದೆ. ಹೀಗಾಗಿ ಜನರು ಮತ್ತೆ ಬೆಚ್ಚಿಬಿದ್ದಿದ್ದಾರೆ.

ಬೆಳಗಾವಿ ಜಾವ 4.40 ರ ಸುಮಾರಿಗೆ ಭೂಕಂಪನ ಸಂಭವಿಸಿದೆ. 5 ಗಂಟೆಯಲ್ಲಿ ಎರಡು ಬಾರಿ ಕಂಪಿಸಿದ್ದು, 2.8 ರಿಕ್ಟರ್‌ ತೀವ್ರತೆಯಲ್ಲಿ ದಾಖಲಾಗಿದೆ. ನಸುಕಿನ ಜಾವ ಭೂಮಿ ನಡುಗಿದ ಪರಿಣಾಮ ಜನತೆ ಮನೆಯಿಂದ ಹೊರಗೆ ಬಂದಿದ್ದಾರೆ.

ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದಲ್ಲಿ ಮೊದಲ ಭೂಕಂಪನ ಹಾಗೂ ವಿಜಯಪುರ ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ಎರಡನೇ ಭೂಕಂಪನವಾಗಿದೆ. ಇನ್ನು ಕಳೆದ ಮೂರು ತಿಂಗಳಗಳಲ್ಲಿ ಅನೇಕ ಬಾರಿ ಭೂಮಿ ಕಂಪಿಸಿತ್ತು. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಇದೀಗ ಮತ್ತೆ ಭೂಮಿ ಕಂಪಿಸಿದ್ದು, ಆತಂಕ ಕಾರಣವಾಗಿದೆ.


A B Dharwadkar
the authorA B Dharwadkar

Leave a Reply