This is the title of the web page

ನಾವಿಕನಿಗೆ ಕೊರೋನಾ; ಗೋವಾದಲ್ಲಿ ಹಡಗಿನಲ್ಲೇ 2000 ಪ್ರಯಾಣಿಕರು ಬಂಧಿ

ಪಣಜಿ, 4- ಮುಂಬಯಿಯಿಂದ ಸುಮಾರು 2000 ಪ್ರಯಾಣಿಕರನ್ನು ಗೋವಾಗೆ ಕರೆದುಕೊಂಡು ಹೋಗಿದ್ದ ಐಷಾರಾಮಿ ಕೊರ್ಡೇಲಿಯಾ ಕ್ರಿಸೆಸ್ ಕಂಪನಿಯ ಹಡಗು ರವಿವಾರ ರಾತ್ರಿಯಿಂದ ಮರ್ಮಗೋವಾ ಬಂದರಿನಲ್ಲಿ ಲಂಗುರ ಹಾಕಿದೆ.

ಯಾವುದೇ ಪ್ರಯಾಣಿಕರನ್ನು ಹಡಗಿನಿಂದ ಇಳಿಯಲು ಅನುಮತಿ ಸಿಕ್ಕಿಲ್ಲ. ಕಾರಣ ಹಡಗಿನ ನಾವಿಕರಲ್ಲೊಬ್ಬರು ಕೋವಿಡ್ ಸೋಂಕಿತರಾಗಿದ್ದಾರೆ.

” ಹಡಗು ಕಂಪನಿಯು ಖಾಸಗಿ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಗೋವಾ ತಲುಪಿದ ನಂತರ ಹಡಗಿನಲ್ಲಿಯೇ ರವಿವಾರ ರಾತ್ರಿಯಿಂದ ಪ್ರಯಾಣಿಕರ ಕೋವಿಡ್ ಪರೀಕ್ಷೆ ಮಾಡಲಾಗಿದ್ದು ಕೆಲವರಲ್ಲಿ ಕೊರೋನಾ ಕಂಡು ಬಂದಿದ್ದು, ಹಡಗಿನಿಂದ ಯಾರನ್ನೂ ಕೆಳಗೆ ಇಳಿಯಲು ಅನುಮತಿ ನೀಡಿಲ್ಲ. ಎಲ್ಲ ಪ್ರಯಾಣಿಕರ ಪರೀಕ್ಷಾ ವರದಿ ನೆಗೆಟಿವ್ ಬಂದರೆ ಮಾತ್ರ ಹಡಗಿನಿಂದ ಹೊರ ಬರಲು ಅನುಮತಿಸಲಾಗುವದು” ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ ರಾಣೆ ಹೇಳಿದ್ದಾರೆ.

ಎಲ್ಲ ಪ್ರಯಾಣಿಕರೂ ಕೋವಿಡ್ ನ ಎರಡೂ ಲಸಿಕೆ ಪಡೆದುಕೊಂಡಿದ್ದು, ಮುಂಬಯಿಯಲ್ಲಿ ಹಡಗು ಹತ್ತುವದಕ್ಕಿಂತ ಮೊದಲು ಮಾಡಿದ ಟೆಸ್ಟ್ ನಲ್ಲಿ ನೆಗೆಟಿವ್ ಆಗಿ ಕಂಡು ಬಂದಿದ್ದರು. ಈಗ ಮತ್ತೆ ಪ್ರತಿಯೊಬ್ಬರ ಪರೀಕ್ಷಾ ವರದಿ ಬಂದ ನಂತರವಷ್ಟೇ ಹಡಗಿನಿಂದ ಹೊರಹೋಗಲು ಅನುಮತಿ ನೀಡಲಾಗುವದು.

ಆದರೆ ಮರ್ಮಗೋವಾ ಪೋರ್ಟ ಟ್ರಸ್ಟ್ ನ ವೈದ್ಯಾಧಿಕಾರಿ ಡಾ. ಇವ್ಜೆನ್ ಡಿಸೋಜ ಅವರು ” ಹಡಗಿನ ನಾವಿಕರೊಬ್ಬರನ್ನು ಹೊರತುಪಡಿಸಿ ಉಳಿದವರು ನೆಗೆಟಿವ್ ಆಗಿದ್ದು, ಎಲ್ಲರ ಕೋವಿಡ್ ಪರೀಕ್ಷೆ ನಡೆಸಲಾಗಿದೆ, ರೈಪಿಡ್ ಆಂಟಿಜೆನ್ ಹಾಗೂ RT-PCR ಪರೀಕ್ಷೆ ಮಾಡಲಾಗಿದೆ” ಎಂದರು.

You might also like
Leave a comment