This is the title of the web page

ಅಗ್ನಿಪಥ ಯೋಜನೆ ಕುರಿತು ಸುಳ್ಳು ಸುದ್ದಿ : 35 ವಾಟ್ಸಾಪ್ ಗ್ರೂಪ್ ಬ್ಯಾನ್, 10 ಮಂದಿ ಅರೆಸ್ಟ್ 

 

ನವದೆಹಲಿ : ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯ ವಿರೋಧಿಸಿ ದೇಶದ ಅನೇಕ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ಹಿಂಸಾರೂಪಕ್ಕೆ ತಿರುಗಿತ್ತು. ಈ ನಿಟ್ಟಿನಲ್ಲಿ, ನಿನ್ನೆ ಅಗ್ನಿಪಥ ಯೋಜನೆ ಪರವಾಗಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಸಂದೇಹಗಳನ್ನು ಪರಿಹರಿಸುವ ಪ್ರಯತ್ನ ಮಾಡಲಾಗಿದೆ.

ಇದರ ನಂತರವೂ, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಆರೋಪಿಸಿ ಸರ್ಕಾರವು ಈ ಬಗ್ಗೆ ಕ್ರಮ ಮುಂದಾಗಿದೆ.

ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಹರಡುವುದು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಹರಡಿದ್ದಕ್ಕಾಗಿ ಸರ್ಕಾರವು 35 ವಾಟ್ಸಾಪ್ ಗುಂಪುಗಳನ್ನು ನಿಷೇಧಿಸಿದೆ. ಪ್ರತಿಭಟಿಸಿದ ಮತ್ತು ದುರುದ್ದೇಶಪೂರಿತ ತಪ್ಪು ಮಾಹಿತಿಯನ್ನು ಹರಡಿದ 10 ಜನರನ್ನು ಬಂಧಿಸಲಾಗಿದೆ.

 

You might also like
Leave a comment