This is the title of the web page

4 ಸಾವಿರ ಅತಿಥಿ ಶಿಕ್ಷಕರ ಶೀಘ್ರವೇ ನೇಮಕ

 

ಬೆಂಗಳೂರು : ಶೀಘ್ರವೇ 4 ಸಾವಿರ ಅತಿಥಿ ಶಿಕ್ಷಕರನ್ನು ನೇಮಕಾ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅಗತ್ಯವಿದ್ದ 30,606 ಅತಿಥಿ ಶಿಕ್ಷಕರ ಪೈಕಿ 22 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇನ್ನೂ 4 ಸಾವಿರ ಅತಿಥಿ ಶಿಕ್ಷಕರನ್ನು ಶೀಘ್ರವೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇನ್ನು ರಾಜ್ಯದಲ್ಲಿ ಈಗಾಗಲೇ ಶೇ.70 ರಷ್ಟು ಪುಸ್ತಕ ಶಾಲೆಗಳಿಗೆ ಪೂರೈಕೆಯಾಗಿದ್ದು, ಉಳಿದ ಶಾಲೆಗಳಿಗೆ ಆದಷ್ಟು ಬೇಗ ತಲುಪಿಸಲಾಗುವುದು ಎಂದು ಮಾಹಿತಿ ನೀಡಿದರು.

You might also like
Leave a comment