Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Crime News

4 ವರ್ಷದ ಮಗುವಿನ ಮೇಲೆ ಪ್ರಾಂಶುಪಾಲರ ಚಾಲಕನಿಂದ ಅತ್ಯಾಚಾರ


ಹೈದರಾಬಾದ: ಶಿಶುವಿಹಾರದಲ್ಲಿ ಓದುತ್ತಿದ್ದ ನಾಲ್ಕು ವರ್ಷದ ಕಂದಮ್ಮನ ಮೇಲೆ ಆ ಶಾಲೆಯ ಪ್ರಾಂಶುಪಾಲರ ಚಾಲಕ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಇಲ್ಲಿಯ ಐಷಾರಾಮಿ ಬಂಜಾರಾ ಹಿಲ್ಸ ಪ್ರದೇಶದ ಡಿಎವಿ ಪಬ್ಲಿಕ್ ಸ್ಕೂಲ್​ನಲ್ಲಿ ಈ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲರ ಚಾಲಕನನ್ನು ಬಂಧಿಸಲಾಗಿದೆ. ಈತ ತನಗೆ ಸತತ ಎರಡು ತಿಂಗಳುಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದುದಾಗಿ ಬಾಲಕಿ ತಿಳಿಸಿದ ನಂತರ ಚಾಲಕನನ್ನು ಹಿಡಿದು ಥಳಿಸಲಾಗಿದೆ.

ಹುಡುಗಿಯ ಪೋಷಕರು ಮಗಳ ನಡವಳಿಕೆಯಲ್ಲಾದ ಬದಲಾವಣೆಯನ್ನು ಗಮನಿಸಿದ್ದರು. ಬಾಲಕಿ ಏನೂ ಮಾತನಾಡದೇ ಖಿನ್ನತೆಗೆ ಒಳಗಾಗಿದ್ದಳು ಹಾಗೂ ಪದೇ ಪದೇ ಅಳುತ್ತಿದ್ದಳು. ಇದನ್ನು ಆಕೆಯ ತಾಯಿ ಗಮನಿಸಿದ್ದರೂ ಬಾಲಕಿ ಏನೂ ಹೇಳಿರಲಿಲ್ಲ. ನಂತರ ಕೇಳಿದಾಗ ಆಕೆ ವಿಷಯ ತಿಳಿಸಿದ್ದಾಳೆ. ಕೂಡಲೇ ಬಾಲಕಿಯ ಹೆತ್ತವರು ಹಾಗೂ ಇತರ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಬಾಲಕಿಯೊಂದಿಗೆ ಪೋಷಕರು ಶಾಲೆಗೆ ಹೋದಾಗ ಬಾಲಕಿ ಚಾಲಕನ ಕಡೆಗೆ ಕೈ ತೋರಿಸಿದಳು. ಆ ನಂತರ ಚಾಲಕನನ್ನು ಥಳಿಸಲಾಗಿದೆ. ಬಾಲಕಿಯನ್ನು ಕೌನ್ಸೆಲಿಂಗ್ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಅವಳು ತನಗಾದ ನೋವನ್ನು ಹೇಳಿಕೊಂಡಿದ್ದಾಳೆ.


Leave a Reply