This is the title of the web page

ಬೆಳಗಾವಿಯಲ್ಲಿ ಮುಸ್ಲಿಮರ ವೇಷ ಧರಿಸಿ ತಿರುಗುತ್ತಿದ್ದ ಅನ್ಯ ಕೋಮಿನ 5 ಯುವಕರು ವಶಕ್ಕೆ

ಬೆಳಗಾವಿ, 16- ಮುಸ್ಲಿಮರ ವೇಷ ಹಾಕಿಕೊಂಡು ಸಂಶಯಾಸ್ಪದವಾಗಿ ತಿರುಗುತ್ತಿದ್ದ ಅನ್ಯ ಕೋಮಿನ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಮಧ್ಯಾಹ್ನ ಈ ಯುವಕರು ಸಂಶಯಾತ್ಮಕವಾಗಿ ಮನೆ ಮನೆಯ ಬಾಗಿಲನ್ನು ನೋಡುತ್ತ ತಿರುಗಾಡುತ್ತಿದ್ದಾಗ ಜನರು ಅವರನ್ನು ಹಿಡಿದು ಪೊಲೀಸ್ ವಶಕ್ಕೆ ನೀಡಿದ್ದಾರೆ.

ಬೆಳಗಾವಿ ನಗರದ ವೀರಭದ್ರ ನಗರ ಜೀರೋ ಕ್ರಾಸ್‍ನಲ್ಲಿ ಆಂಧ್ರ ಮೂಲದ ಐವರು ಯುವಕರು ಮುಸ್ಲಿಂ ಸಮುದಾಯದ ವೇಷಭೂಷಣಗಳನ್ನು ಹಾಕಿಕೊಂಡು ಭಿಕ್ಷೆ ಬೇಡುತ್ತಾ ಮನೆ ಮನೆಗೆ ಸಂಶಯಾಸ್ಪದವಾಗಿ ಓಡಾಡುತ್ತಿದ್ದರು. ಆಗ ಸ್ಥಳೀಯ ಜನರು ಅವರನ್ನು ವಿಚಾರಿಸಿದಾಗ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಜನರು ಅವರನ್ನು ವಿಚಾರಿಸಿದಾಗ, ನಾವು ಆಂಧ್ರ ಮೂಲದವರು. ಹೊಟ್ಟೆಪಾಡಿಗಾಗಿ ಈ ವೇಷ ಹಾಕಿಕೊಂಡು ತಿರುಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಸ್ಥಳಕ್ಕೆ ಮಾರ್ಕೆಟ್ ಪೋಲೀಸರು ಬಂದು ಎಲ್ಲಾ ಯುವಕರನ್ನು ತಮ್ಮ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

You might also like
Leave a comment