Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National News

ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದೇ ದಿನ 61 ಕೆಜಿ ಚಿನ್ನ ವಶ, 7 ಜನರ ಬಂಧನ


ಮುಂಬೈ, 14- ಇಲ್ಲಿನ ಶಿವಾಜಿ ಮಹಾರಾಜ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ ಅಧಿಕಾರಿಗಳು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 32 ಕೋಟಿ ರೂ. ಮೌಲ್ಯದ 61 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಇದು ವಿಮಾನ ನಿಲ್ದಾಣದಲ್ಲಿ ಒಂದೇ ದಿನದಲ್ಲಿ ಇಲಾಖೆ ನಡೆಸಿದ ಅತ್ಯಧಿಕ ಮೌಲ್ಯದ ವಶವಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಶುಕ್ರವಾರ ನಡೆದ ದಾಳಿಯಲ್ಲಿ ಐವರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೊದಲ ಕಾರ್ಯಾಚರಣೆಯಲ್ಲಿ, ಟಾಂಜಾನಿಯಾದಿಂದ ಹಿಂದಿರುಗಿದ ನಾಲ್ವರು ಭಾರತೀಯರು 1 ಕೆಜಿ ಚಿನ್ನದ ತುಂಡುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ.

ಅವುಗಳನ್ನು ಬಹು ಪಾಕೆಟ್‌ಗಳೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೆಲ್ಟ್‌ಗಳಲ್ಲಿ ಮರೆಮಾಡಲಾಗಿತ್ತು ಎಂದಿದ್ದಾರೆ. ಈ ಪ್ರಕರಣದಲ್ಲಿ ನಾಲ್ವರು ಪ್ರಯಾಣಿಕರನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅದೇ ರೀತಿ ದುಬೈನಿಂದ ಬಂದಿದ್ದ ಮೂವರು ಪ್ರಯಾಣಿಕರಿಂದ 3.88 ಕೋಟಿ ಮೌಲ್ಯದ 8 ಕೆಜಿ ಚಿನ್ನವನ್ನು ಕಸ್ಟಮ್ಸ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಚಿನ್ನವನ್ನು ಮೇಣದ ರೂಪದಲ್ಲಿ ಸಾಗಿಸುತ್ತಿದ್ದರು. ಅವರು ಧರಿಸಿದ್ದ ಜೀನ್ಸ ಸೊಂಟದ ಭಾಗದಲ್ಲಿ ಚಿನ್ನವನ್ನು ಜಾಣ್ಮೆಯಿಂದ ಮರೆಮಾಡಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಮಹಿಳೆಯರಲ್ಲಿ ಒಬ್ಬರು 60 ರ ಆಸುಪಾಸಿನಲ್ಲಿದ್ದು, ಅವರು ಗಾಲಿಕುರ್ಚಿಯಲ್ಲಿದ್ದರು. ಪ್ರಕರಣದಲ್ಲಿ ಮೂವರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದರು.


Leave a Reply