This is the title of the web page

ನಿಪ್ಪಾಣಿ ಹೊಟೆಲ್ ನಲ್ಲಿ ವೇಶ್ಯಾವಾಟಿಕೆ; ವಿದೇಶಿ ಮಹಿಳೆ ಸೇರಿ 8 ಬಂಧನ

ನಿಪ್ಪಾಣಿ, 27- ನಿಪ್ಪಾಣಿ ನಗರದ ಹೊರವಲಯದ ಹೊಟೇಲ್‌ನಲ್ಲಿ ವಿದೇಶಿ ಮಹಿಳೆ ಸೇರಿದಂತೆ ವೇಶ್ಯಾವಾಟಿಕೆ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಎಂಟು ಜನರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಶನಿವಾರ ತಡರಾತ್ರಿ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಮಾಹಿತಿ ಮೇರೆಗೆ ನಿಪ್ಪಾಣಿ ನಗರ ಪೊಲೀಸ ಠಾಣೆ ಸಿಪಿಐ ಸಂಗಮೇಶ ಶಿವಯೋಗಿ, ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕೃಷ್ಣವೇಣಿ ಗುರ್ಲಹೊಸೂರು ಹಾಗೂ ಸಿಬ್ಬಂದಿ ದಾಳಿಯನ್ನು ನಡೆಸಿ ಸಂಜಯ ಭೈರಪ್ಪ ಮಾಳಿ (35, ಸಂಕೇಶ್ವರ ನಿವಾಸಿ), ಅರುಣ ಜೈಪಾಲ ಶೇಕಣ್ಣವರ (34, ಹುಕ್ಕೇರಿ ನಿವಾಸಿ ) ಖಂಡೋಬಾ ಚವ್ಹಾಣ (35, ಪಿಂಪಲ್ ನಿವಾಸಿ) ಈ ಮೂವರನ್ನು ಹಾಗೂ ಐವರು ಮಹಿಳೆಯರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಸಂಜಯ, ಅರುಣ ಮತ್ತು ಪ್ರಶಾಂತ ಎಂಬುವವರನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

You might also like
Leave a comment