Please assign a menu to the primary menu location under menu

Crime News

ಭೀಕರ ರಸ್ತೆ ಅಪಘಾತ : 9 ಜನ ಸ್ಥಳದಲ್ಲೇ ಸಾವು 


ತುಮಕೂರು : ಕ್ರೂಸರ್ ಗೆ ಲಾರಿ ಡಿಕ್ಕಿಯಾಗಿ 9 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೆದ್ದಾರಿಯಲ್ಲಿ ನಡೆದಿದೆ.

ಘಟನೆಯಲ್ಲಿ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ರಾಯಚೂರು ಜಿಲ್ಲೆಯವರಾಗಿದ್ದು, ಕ್ರೂಸರ್ ನಲ್ಲಿ 20 ಜನರ ಪೈಕಿ 9 ಜನರು ಮೃತಪಟ್ಟಿದ್ದಾರೆ.

ಕ್ರೂಸರ್ ಓವರ್ ಟೇಕ್ ಮಾಡಲು ಹೋಗಿ ಲಾರಿಗೆ ಢಿಕ್ಕಿಯಾಗಿದೆ. ಗಾಯಗೊಂಡವರನ್ನು ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಸ್ಥಿತಿ ಗಂಭೀರವಾಗಿದೆ.

ಘಟನಾ ಸ್ಥಳಕ್ಕೆ ಕಳ್ಳಂಬೆಳ್ಳ ಹಾಗೂ ಶಿರಾ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.


Samadarshi News

Leave a Reply