ಬೆಳಗಾವಿ

ರಾಮತೀರ್ಥ ನಗರದಲ್ಲಿ ಸಂಭ್ರಮದ ಹೊಸ ವರ್ಷಾಚರಣೆ

ಬೆಳಗಾವಿ, ಜ. 1- ನಗರದ ರಾಮತೀರ್ಥ ನಗರದ ಬಸವೇಶ್ವರ ಬಡಾವಣೆಯಲ್ಲಿ ನೂತನ ವರ್ಷ 2020 ನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ಸ್ಥಳೀಯ ನೂರಾರು ನಿವಾಸಿಗಳು ಸಂಭ್ರಮಾಚರಣೆಯಲ್ಲಿ ನೆರೆದಿದ್ದು ವಿಶೇಷವಾಗಿತ್ತು. ಮಧ್ಯರಾತ್ರಿ 12 ಕ್ಕೆ ‘ಓಲ್ಡ್ ಮ್ಯಾನ್’ ಸುಡುವ ಮೂಲಕ ಜನತೆ ಹೊಸ ವರ್ಷ 2020 ನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರು ಕೇಕ್ ಕತ್ತರಿಸಿ ಹೊಸ ವರ್ಷಕ್ಕೆ ಹಾಯ್ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಠ್ಠಲ ಬಡಿಗೇರ, ಹೊಸ ವರ್ಷ 2020 ಎಲ್ಲರ ಬಾಳಿನಲ್ಲಿ ಸುಖ, ನೆಮ್ಮದಿ ತರಲಿ, ಎಲ್ಲೆಲ್ಲೂ ಸಮೃದ್ಧಿ ಮೂಡಲಿ ಎಂದು ಹಾರೈಸಿದರು.

ಎ.ಬಿ.ಕಾಂಬಳೆ, ಈರಯ್ಯ ಖೋತ, ಬಸವರಾಜ ವರ್ಜನ್ನವರ, ಜಿ.ಎಸ್.ಗವತೆ ವಕೀಲರು, ಡಾ. ಶಿವಾನಂದ ಮುಳಕುರಿ, ರಾಜೇಶ್ವರಿ ವಕ್ಕುಂದ, ಐಶ್ವರ್ಯ ಮುಳಕೂರಿ, ವಿಶ್ವನಾಥ ಪಟ್ಟಣಶೆಟ್ಟಿ, ಶೇಖಪ್ಪ ಪಾಟೀಲ, ಗಿರೀಶ ಗಾಣಿಗೇರ, ವಿರುಪಾಕ್ಷಿ ತಿಗಡಿ, ವಿಶಾಲ ಗೋಟಡಕಿ, ಎ.ಬಿ.ಧಾರವಾಡಕರ ಮುಂತಾದವರು ಉಪಸ್ಥಿತರಿದ್ದರು.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: