ಗದಗ್

ಫೆ.1ರಂದು ಕಪ್ಪತ ಉತ್ಸವ ಗದಗ-2020 ಕಾರ್ಯಕ್ರಮ

ಗದಗ, ಜ.30- ಗದಗ ರಿಂಗ್ ರಸ್ತೆಯಲ್ಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅರಣ್ಯ ಇಲಾಖೆಯು ಕರ್ನಾಟಕ ಮೃಗಾಲಯ ಪ್ರಾಧಿಕಾರದಸಹಯೋಗದಲ್ಲಿ ಫೆ.01ರ ಬೆಳಗ್ಗೆ 9 ಗಂಟೆಗೆ ಕಪ್ಪತ್ತ್ ಉತ್ಸವ್ ಗದಗ-2020 ಕಾರ್ಯಕ್ರಮಹಮ್ಮಿಕೊಂಡಿದೆ. ರಾಜ್ಯದ ಗಣಿ ಭೂ ವಿಜ್ಞಾನ, ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಜಿಲ್ಲಾಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ್ ಇದನ್ನು ಉದ್ಘಾಟಿಸುವರು. ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಪಾಲಕಸಂಜಯ್ ಮೋಹನ್ ಅಧ್ಯಕ್ಷತೆ ವಹಿಸುವವರು.

ಕರ್ನಾಟಕ ಮೃಗಾಲಯ ಪ್ರಾಧಿಕಾರಕಾರ್ಯದರ್ಶಿ ಬಿ.ಪಿ. ರವಿ, ಕಲಬುರಗಿ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ.ವಿ. ಗೀತಾಂಜಲಿ, ಬಳ್ಳಾರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗರಾಜ,ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಬಿ.ಕರುಣಾಕರ್, ಧಾರವಾಡ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಮಂಜುನಾಥ್ ಆರ್..ಚವ್ಹಾಣ್ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ವಿಶೇಷ ಆಹ್ವಾನಿತರಾಗಿರುತ್ತಾರೆ.

ಶಿರಸಿ ಅರಣ್ಯ ಮಹಾವಿದ್ಯಾಲಯದವನ್ಯಜೀವಿ ವಿಭಾಗದ ಸಹಾಯಕ ಉಪನ್ಯಾಸಕ ಶ್ರೀಧರ್ ಡಿ.ಭಟ್, ಹೊಸಪೇಟೆ ವನ್ಯಜೀವಿಹಾಗೂ ಪರಿಸರ ಸಂಸ್ಥೆಯ ಅಧ್ಯಕ್ಷ ಡಾ.ಸಮದ್ ಕೊಟ್ಟೂರ್, ಬಳ್ಳಾರಿಯ ಕೇಂದ್ರವನ್ಯಜೀವಿ ಪಾಲಕ ಡಾ.ಅರುಣ್ ಎಸ್.ಕೆ. ಮೈಸೂರು ಮೃಗಾಲಯದ ಸಹಾಯಕ ನಿರ್ದೇಶಕ ಡಾ.ಕೆ.ಆರ್.ರಮೇಶ್, ಎಫ್‍ಆರ್‍ಎಲ್‍ಎಚ್‍ಡಿಸಂಸ್ಥೆಯ ಶ್ರೀಮತಿ.ಸುಮಾ ಟಿ.ಎಸ್., ಗದU ಗೌರವÀ ವನ್ಯಜೀವಿ ಪಾಲಕಪೆÇ್ರೀ.ಸಿ.ಎಸ್.ಅರಸನಾಳ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ವನ್ಯಜೀವಿ ಸಂರಕ್ಷಣೆಕುರಿತು ಸಂವಾದ, ಉತ್ತರ ಕರ್ನಾಟಕ ಭಾಗದಲ್ಲಿರುವ ವನ್ಯಜೀವಿಗಳ ಕುರಿತು ಮಾಹಿತಿಒದಗಿಸುವರು. ಗದಗ ಮೃಗಾಲಯದ ಬಗ್ಗೆ ಸಾಕ್ಷಚಿತ್ರ ಹಾಗೂಕಪ್ಪತ್ತಗುಡ್ಡದಲ್ಲಿರುವ ವೈವಿದ್ಯತೆಯ ಕುರಿತ ಹಲವಾರು ಚರ್ಚೆಗಳು ಜರುಗುವವುಎಂದು ಗದಗ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ ತಿಳಿಸಿದ್ದಾರೆ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: