ಬಾಬ್ರಿ ಮಸೀದಿ ಪ್ರಕರಣ : ಅಡ್ವಾಣಿ, ಜೋಷಿ, ಭಾರತಿಗೆ ಕ್ಲೀನ್ ಚಿಟ್

ಲಕ್ನೋ , ಸೆ 30- ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯ ತೀರ್ಪು ಹೊರಬಿದ್ದಿದೆ.

ಸಿಬಿಐ ನ್ಯಾಯಾಲಯ ನೀಡಿರುವ ಇಂದಿನ ತೀರ್ಪಿನಲ್ಲಿ ಎಲ್ಲ 32 ಮಂದಿಗೂ ಕ್ಲೀನ್ ಚಿಟ್ ಕೊಡಲಾಗಿದೆ. ಇದು ಉದ್ದೇಶಪೂರ್ವಕ ಕೃತ್ಯವಲ್ಲ, ಆಕಸ್ಮಿಕವಾಗಿ ನಡೆದ ಘಟನೆ ಎಂದು ಕೋರ್ಟ್ ಹೇಳಿದೆ.

ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಸೇರಿದಂತೆ ಎಲ್ಲ 32 ಮಂದಿ ಆರೋಪಿಗಳು ಖುಲಾಸೆಗೊಂಡಿದ್ದಾರೆ. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ 16ನೇ ಶತಮಾನದ ಕಟ್ಟಡ ನೆಲಸಮವಾದ ಸುಮಾರು ಮೂರು ದಶಕಗಳ ನಂತರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿದೆ.

ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಮಾಜಿ ಸಚಿವರಾದ ಉಮಾ ಭಾರತಿ, ಕಲ್ಯಾಣ್ ಸಿಂಗ್ ಸೇರಿದಂತೆ ಈ ಪ್ರಕರಣದ ಆರೋಪಿಗಳಾಗಿದ್ದರು.49 ಆರೋಪಿಗಳ ಪೈಕಿ 32 ಮಂದಿ ಇಂದು ಜೀವಂತವಾಗಿದ್ದಾರೆ.

ಈ ನಡುವೆ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶರಾದ ಯಾದವ್ ಅವರು 2019ರಲ್ಲಿಯೇ ತಮಗೆ ಭದ್ರತೆ ಕೋರಿದ್ದರು. ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕ ಬಿಗಿಭದ್ರತೆ ಮಾಡಲಾಗಿದೆ.

Leave A Reply

Your email address will not be published.

error: Content is protected !!