ನನ್ನ ಅಪಹರಣವಾಗಿಲ್ಲ ; ಚಿತ್ರ ಸಾಹಿತಿ ಕಲ್ಯಾಣ ಪತ್ನಿ

ಬೆಳಗಾವಿ, ೩- ಕನ್ನಡ ಚಿತ್ರರಂಗದ ಜನಪ್ರಿಯ ಸಾಹಿತಿ ಕೆ ಕಲ್ಯಾಣ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಅವರು ಬೆಳಗಾವಿಯಲ್ಲಿ ವಾಸವಾಗಿದ್ದ ತಮ್ಮ ಪತ್ನಿ, ಅತ್ತೆ ಹಾಗು ಮಾನವರನ್ನು ಬಾಗಲಕೋಟ ಮೂಲದ ವ್ಯಕ್ತಿಯೊಬ್ಬರು ವಶೀಕರಿಸಿಕೊಂಡು ಅಪಹರಿಸಿದ್ದಾರೆಂದು ಮಾಳಮಾರುತಿ ಪೊಲೀಸ್ ಠಾಣೆಗೆ ಕೆ.ಕಲ್ಯಾಣ ದೂರು ನೀಡಿದ್ದರು.

ಕಾರ್ಯಪ್ರವೃತ್ತರಾದ ಪೊಲೀಸರು ಕಲ್ಯಾಣ ಪತ್ನಿಯನ್ನು ಸಂಪರ್ಕಿಸಿ ಠಾಣೆಗೆ ಕರೆದು ವಿಚಾರಿಸಿದಾಗ ಅವರು ತಮ್ಮನಾಗಲಿ, ತಮ್ಮ ತಂದೆ ತಾಯಿಯನ್ನಾಗಲಿ ಯಾರು ಅಪಹರಿಸಿಲ್ಲ, ಕಲ್ಯಾಣ ಅವರೊಂದಿಗೆ ಕೌಟುಂಬಿಕ ಸಮಸ್ಯೆಯುಂಟಾಗಿ ತಮ್ಮ ತವರು ಮನೆಗೆ ಮರಳಿರುವದಾಗಿಯೂ ತಿಳಿಸಿದ್ದಾರೆ.

ಕಳೆದ ಹತ್ತು ದಿನಗಳ ಹಿಂದೆ ಕಲ್ಯಾಣ ತಮ್ಮ ಪತ್ನಿ ಕಿಡ್ಯಾಪ್ ಆಗಿದ್ದಾರೆ. ಬಾಗಲಕೋಟದ ಶಿವಾನಂದ ವಾಲಿ ಎಂಬವರು ಅವರನ್ನು ಅಪಹರಿಸಿ ಅವರ ಬ್ಯಾಂಕ್ ಅಕೌಂಟ್ ನಿಂದ 19 ಲಕ್ಷ ರೂಪಾಯಿಯನ್ನು ತಮ್ಮ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆಂದು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು ಎನ್ನಲಾಗಿದೆ.

ಕಲ್ಯಾಣ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಅಶ್ವಿನಿಯವರನ್ನು ಠಾಣೆಗೆ ಕರೆಸಿರುವ ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಅಶ್ವಿನಿ ತನ್ನನ್ನು ಯಾರೂ ಅಪಹರಿಸಿಲ್ಲ. ಪತಿ ಕಲ್ಯಾಣ ಕಿರುಕುಳ ನೀಡುತ್ತಿದ್ದರು ಎಂದು ಕಲ್ಯಾಣ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.

error: Content is protected !!