3.47 ಕೋಟಿ ದಾಟಿದ ಜಾಗತಿಕ ಕೊವಿಡ್ ಪ್ರಕರಣಗಳ ಸಂಖ್ಯೆ

ವಾಷಿಂಗ್ಟನ್, ಅ 4- ಜಾಗತಿಕ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಭಾನುವಾರದ ವೇಳೆಗೆ 3 ಕೋಟಿ 47 ಲಕ್ಷ ದಾಟಿದ್ದು, ಸಾವಿನ ಸಂಖ್ಯೆ 10,31,500 ಕ್ಕಿಂತ ಅಧಿಕವಾಗಿದೆ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಒಟ್ಟು ಪ್ರಕರಣಗಳ ಸಂಖ್ಯೆ 3,47,91,855 ಮತ್ತು ಸಾವಿನ ಸಂಖ್ಯೆ 10,31,528 ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ತನ್ನ ಇತ್ತೀಚಿನ ನವೀಕೃತ ಮಾಹಿತಿಯಲ್ಲಿ ತಿಳಿಸಿದೆ.

ವಿಶ್ವದಲ್ಲೇ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿರುವ ಅಮೆರಿಕದಲ್ಲಿ ಈ ಸಂಖ್ಯೆ ಕ್ರಮವಾಗಿ 73,79,614 ಮತ್ತು 2,09,335ರಷ್ಟಿದೆ. 64,73,544 ಪ್ರಕರಣಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದ್ದರೆ, ದೇಶದಲ್ಲಿ ಸಾವಿನ ಸಂಖ್ಯೆ 1,00,842 ಕ್ಕೆ ಏರಿದೆ ಎಂದು ಸಿಎಸ್ಎಸ್ಇ ತಿಳಿಸಿದೆ.

ಹೆಚ್ಚು ಪ್ರಕರಣಗಳು ವರದಿಯಾಗುವ ಇತರ ದೇಶಗಳ ಪೈಕಿ ಬ್ರೆಜಿಲ್ (48,80,523), ರಷ್ಯಾ (11,98,663), ಕೊಲಂಬಿಯಾ (8,48,147), ಪೆರು (8,21,564) ಮತ್ತು ಅರ್ಜೆಂಟೀನಾ (7,90,818) ಸೇರಿವೆ ಎಂದು ಸಿಎಸ್‌ಎಸ್‌ಇ ಅಂಕಿಅಂಶಗಳು ತಿಳಿಸಿವೆ.

ಬ್ರೆಜಿಲ್, ಸದ್ಯ 1,45,388 ಪ್ರಕರಣಗಳೊಂದಿಗೆ ಎರಡನೇ ಅತಿ ಹೆಚ್ಚು ಸಾವುಗಳು ವರದಿಯಾಗಿರುವ ದೇಶವೆನಿಸಿದೆ.

30,000 ಕ್ಕಿಂತ ಹೆಚ್ಚು ಸಾವುಗಳು ವರದಿಯಾಗಿರುವ ದೇಶಗಳ ಪೈಕಿ ಮೆಕ್ಸಿಕೊ (78,880), ಯುನೈಟೆಡ್‍ ಕಿಂಗ್ ಡಮ್‍ (42,407) ಮತ್ತು ಇಟಲಿ (35,968) ಸೇರಿವೆ.

Leave A Reply

Your email address will not be published.

error: Content is protected !!