ಕೋವಿಡ್ ಪ್ರಕರಣ 66,85.083ಕ್ಕೆ ಏರಿಕೆ; ಚೇತರಿಕೆ ದರ ಶೇ 84.70

ನವದೆಹಲಿ, ಅ 06 ಕಳೆದ 24 ಗಂಟೆಗಳಲ್ಲಿ ಭಾರತವು 61,267 ಕೋವಿಡ್ ಪ್ರಕರಣಗಳ ಹೊಸ ಏರಿಕೆ ದಾಖಲಿಸಿದ್ದು, ದೇಶದ ಮೊತ್ತ 67 ಲಕ್ಷದ ಸಮೀಪದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಮಂಗಳವಾರ ಬೆಳಿಗ್ಗೆ ತಿಳಿಸಿವೆ.

ಪ್ರಸ್ತುತ, ರಾಷ್ಟ್ರದ ಒಟ್ಟು ಪ್ರಕರಣಗಳ ಸಂಖ್ಯೆ 66,85,083 ಆಗಿದೆ. ಅಲ್ಲದೆ, 75,787ರಷ್ಟು ಗುಣಪಡಿಸಿದ ಅಥವಾ ಆಸ್ಪತ್ರೆಗಳಿಂದ ಬಿಡುಗಡೆಯಾದ ಪ್ರಕರಣಗಳನ್ನು ಅದೇ ಅವಧಿಯಲ್ಲಿ ನೋಂದಾಯಿಸಿದ್ದು, ಒಟ್ಟು ಚೇತರಿಕೆ ಸಂಖ್ಯೆ 56,62,490 ಕ್ಕೆ ತಲುಪಿದೆ.

ಕಳೆದೊಂದು ದಿನದಲ್ಲಿ ಕೋವಿಡ್ ಸೋಂಕಿನಿಂದ 884 ಸಾವುಗಳು ಸಂಭವಿಸಿದ್ದು, ಇದುವರೆಗಿನ ಸಾವಿನ ಸಂಖ್ಯೆ 1,03,569 ಕ್ಕೆ ತಲುಪಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಕಳೆದ 24 ಗಂಟೆಗಳಲ್ಲಿ 10,89,403 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಸೋಮವಾರದವರೆಗೆ ಪರೀಕ್ಷಿಸಿದ ಒಟ್ಟು ಸಂಚಿತ ಮಾದರಿಗಳು 8,10,71,797 ರಷ್ಟಿದೆ.

ಏತನ್ಮಧ್ಯೆ, ಮಹಾರಾಷ್ಟ್ರವು ದೇಶದಲ್ಲೇ ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿ ಮುಂದುವರೆದಿದೆ. ಜಾಗತಿಕವಾಗಿ, ಅಮೆರಿಕ ಹೆಚ್ಚು ಸೋಂಕಿಗೆ ಒಳಗಾಗಿದೆ. ನಂತರದ ಸ್ಥಾನಗಳಲ್ಲಿ ಭಾರತ ಮತ್ತು ಬ್ರೆಜಿಲ್ ದೇಶಗಳಿವೆ.

Leave A Reply

Your email address will not be published.

error: Content is protected !!