ರಿಯಾ ಚಕ್ರವರ್ತಿ, ಸಹೋದರನಿಗೆ ಅ.20ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಮುಂಬೈ, ಅ 6- ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಾಜಪೂತ್‌ ಪ್ರಕರಣ ಮತ್ತು ಮಾದಕ ದ್ರವ್ಯಗಳ ಪ್ರಕರಣದ ಆರೋಪಿಗಳಾದ ನಟಿ ರಿಯಾ ಚಕ್ರವರ್ತಿ ಮತ್ತು ಸಹೋದರ ಶೌಹಿಕ್‌ ಅವರ ನ್ಯಾಯಾಂಗ ಬಂಧನವನ್ನು ಅ.20ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶ ನೀಡಿದೆ.

ಪ್ರಕರಣದ 20 ಆರೋಪಿಗಳ ಪೈಕಿ 14 ಆರೋಪಿಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ರಿಯಾ ಮತ್ತು ಇತರರು ಬಾಂಬೆ ಹೈಕೋರ್ಟ್‌ನಲ್ಲಿ ಕೂಡ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ವಾದ-ಪ್ರತಿವಾದ ಪೂರ್ಣಗೊಂಡಿದ್ದು, ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.

Leave A Reply

Your email address will not be published.

error: Content is protected !!