ರಷ್ಯಾದ ಕೋವಿಡ್ ಲಸಿಕೆಗಾಗಿ ಇಂಟರ್ನೆಟ್ ಮೂಲಕ ಹುಡುಕಾಟ

ಬ್ಯೂನಸ್ ಏರಿಸ್, ಅ 07- ರಷ್ಯಾದ ಸ್ಪುತ್ನಿಕ್ ಕೋವಿಡ್ ಲಸಿಕೆಯ ಪರೀಕ್ಷೆಗಳಲ್ಲಿ ಸ್ವಯಂಪ್ರೇರಣೆಯಿಂದ ಭಾಗವಹಿಸುವವರಿಗಾಗಿ ವೆನಿಜುವೆಲಾದ ಅಧಿಕಾರಿಗಳು ಅಂತರ್ಜಾಲದ ಮೂಲಕ ಹುಡುಕಾಟ ನಡೆಸಿದ್ದಾರೆ ಎಂದು ದೇಶದ ಆರೋಗ್ಯ ಸಚಿವ ಕಾರ್ಲೋಸ್ ಅಲ್ವಾರಾಡೊ ಹೇಳಿಕೆಯನ್ನು ಉಲ್ಲೇಖಿಸಿ ವೆನಿಜುವೆಲಾದ ಸುದ್ದಿ ಸಂಸ್ಥೆ ಎವಿಎನ್ ವರದಿ ಮಾಡಿದೆ.

“ಆಯ್ಕೆ ಪ್ರಕ್ರಿಯೆಯು ಸ್ವಯಂಸೇವಕರಿಗೆ ಹಲವಾರು ಪ್ರಶ್ನೆಗಳನ್ನು ಮತ್ತು ನಂತರದ ಮೌಲ್ಯಮಾಪನವನ್ನು ಹೊಂದಿರುವ ವೆಬ್‌ಸೈಟ್ ಮೂಲಕ ನಡೆಯುತ್ತದೆ. ಪರೀಕ್ಷೆಗೆ ಒಳಪಡುವವರು ಆರೋಗ್ಯವಂತರಾಗಿರಬೇಕು” ಎಂದು ಸಚಿವರು ಹೇಳಿದ್ದಾರೆ.

ಎರಡು ಸಾವಿರ ಸ್ವಯಂಸೇವಕರನ್ನು ಆಯ್ಕೆ ಮಾಡುವ ಯೋಜನೆ ಇದೆ. ವ್ಯಾಕ್ಸಿನೇಷನ್ ನಲ್ಲಿ ಭಾಗವಹಿಸುವವರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಅವರ ತೋಳುಗಳಲ್ಲಿ ಹಚ್ಚೆ ಹೊಂದಿರಬಾರದು ಮತ್ತು ಉಸಿರಾಟದ ಕಾಯಿಲೆಗಳಿರಬಾರದು ಎಂದಿದ್ದಾರೆ.

ಇದಕ್ಕೂ ಮೊದಲು, ವೆನೆಜುವೆಲಾ ಮೂರನೇ ಹಂತದ ಪ್ರಯೋಗಗಳಿಗಾಗಿ ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಬ್ಯಾಚ್ ಅನ್ನು ಪಡೆಯಿತು. ಭವಿಷ್ಯದಲ್ಲಿ, ದೇಶವು ಅದನ್ನು ಸ್ಥಳೀಯವಾಗಿ ಉತ್ಪಾದಿಸಲು ಯೋಜಿಸಿದೆ.

ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ತನ್ನ ಮಗ ಮತ್ತು ಸಹೋದರಿ ಕ್ಲಿನಿಕಲ್ ಪ್ರಯೋಗಗಳಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ.

Leave A Reply

Your email address will not be published.

error: Content is protected !!