ಕೋವಿಡ್ : 3.8 ಕೋಟಿ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ

ವಾಷಿಂಗ್ಟನ್, ಅ 10- ಜಾಗತಿಕ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 3.68 ಕೋಟಿ ದಾಟಿದ್ದು, ಸಾವಿನ ಸಂಖ್ಯೆ ಶನಿವಾರ 10,66,800 ತಲುಪಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಒಟ್ಟು ಪ್ರಕರಣಗಳ ಸಂಖ್ಯೆ 3,67,91,842ರಷ್ಟಿದ್ದು, ಸಾವಿನ ಸಂಖ್ಯೆ 10,66,861 ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯದ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಕೇಂದ್ರ (ಸಿಎಸ್‌ಎಸ್‌ಇ) ತನ್ನ ಇತ್ತೀಚಿನ ನವೀಕೃತ ಮಾಹಿತಿಯಲ್ಲಿ ತಿಳಿಸಿದೆ.

ಸಿಎಸ್ಎಸ್ಇ ಮಾಹಿತಿಯಂತೆ, ಅಮೆರಿಕದಲ್ಲಿ ವಿಶ್ವದ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳು ಕ್ರಮವಾಗಿ 76,60,123 ಮತ್ತು 2,13,588ರಷ್ಟು ವರದಿಯಾಗಿವೆ.

ಪ್ರಕರಣಗಳಲ್ಲಿ ಭಾರತ, ಎರಡನೇ ಸ್ಥಾನದಲ್ಲಿದೆ. ಒಟ್ಟು 69,06,151 ಪ್ರಕರಣಗಳು ಮತ್ತು ಸಾವಿನ ಸಂಖ್ಯೆ 1,06,490ರಷ್ಟಿದೆ.

ಪ್ರಕರಣಗಳು ಹೆಚ್ಚಿರುವ ಇತರ ದೇಶಗಳ ಪೈಕಿ ಬ್ರೆಜಿಲ್ (50,55,888), ರಷ್ಯಾ (12,65,572), ಕೊಲಂಬಿಯಾ (8,94,300) ಮತ್ತು ಅರ್ಜೆಂಟೀನಾ (8,71,468) ಸೇರಿವೆ ಎಂದು ಸಿಎಸ್ಎಸ್ಇ ಅಂಕಿಅಂಶಗಳು ತಿಳಿಸಿವೆ.

ಬ್ರೆಜಿಲ್ ಸದ್ಯ, 1,49,639 ಸಾವು ಪ್ರಕರಣಗಳೊಂದಿಗೆ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ.

20,000 ಕ್ಕಿಂತ ಹೆಚ್ಚು ಸಾವುಗಳು ವರದಿಯಾಗಿರುವ ದೇಶಗಳ ಪೈಕಿ ಮೆಕ್ಸಿಕೊ (83,497), ಯುನೈಟೆಡ್ ಕಿಂಗ್ ಡಮ್ (42,769), ಇಟಲಿ (36,111), ಪೆರು (33,098), ಸ್ಪೇನ್ (32,929), ಫ್ರಾನ್ಸ್ (32,601) ಮತ್ತು ಇರಾನ್ (28,098) ಸೇರಿವೆ.

Leave A Reply

Your email address will not be published.

error: Content is protected !!