ಮಾಧ್ಯಮಗಳ ವಿಶ್ವಾಸಾರ್ಹತೆ

ಡಂಗೂರದ ಮೂಲಕ ಸುದ್ದಿ ಪ್ರಸಾರ ಬಹುದೊಡ್ಡ ಸಾಧನ ಆಗಿದ್ದ ನಮ್ಮ ದೇಶದಲ್ಲಿ ಪತ್ರಿಕೆ ಬಂದುದು ತಡವಾಗಿ. ಅವು ಬಂದ ಮೇಲೂ ಹೆಚ್ಚಿನ ಬೇಡಿಕೆ ಇರಲಿಲ್ಲ. ಅನಕ್ಷರತೆ ಇದಕ್ಕೆ ಕಾರಣ, ಬಡತನ ಮತ್ತೊಂದು ಕಾರಣ. ಆಗ ಹೆಚ್ಚು ಜನಪ್ರಿಯ ಆದದ್ದು ರೇಡಿಯೋ. ಅದು ಅನಕ್ಷರಸ್ಥರಿಗÀೂ ಸರಳವಾಗಿ ಸಂವಹನ ಮಾಡಲು ಸಾಧ್ಯ ಇತ್ತು. ಆದರೆ ರೇಡಿಯೋ ಇದ್ದಿದ್ದು ಸರ್ಕಾರದ ಆಧೀನದಲ್ಲಿ. ಆದರೂ ಬಹಳ ಕಾಲ ರೇಡಿಯೋ ನಿಷ್ಪಕ್ಷಪಾತ ನಿಲುವಿಗೆ ಹೆಸರಾಗಿತ್ತು. ಎಪ್ಪತ್ತರ ನಂತರ ಆ ನಿಲುವಿಗೆ ಸ್ವಲ್ಪ ಭಂಗ ಬಂದಿದ್ದನ್ನು ಕಾಣುತ್ತೇವೆ. ಆದರೂ ರೇಡಿಯೋದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿದ್ದು ಮನರಂಜನಾ ವಾಹಿನಿಗಳೇ ಹೊರತು, ಸುದ್ದಿ ಮತ್ತು ವಿಚಾರ ಪ್ರಸಾರದ ಕಾರ್ಯಕ್ರಮಗಳಲ್ಲ. ಇದರ ನಡುವೆ ರೇಡಿಯೋದಲ್ಲಿ ನಿರ್ದಿಷ್ಟ ಸಮಯಕ್ಕೆ ಪ್ರಸಾರ ಆಗುವ ಸುದ್ದಿ ಕೇಳುವ ಅಭ್ಯಾಸ ಮನೆಗಳ ಹಿರಿಯರಲ್ಲಿ ಇತ್ತು. ಆಗಲೂ ರೇಡಿಯೋ ಶ್ರೀಮಂತರ ಸ್ವತ್ತೇ ಆಗಿತ್ತು. ಟ್ರಾನಿಸ್ಟರ್ ಬಂದ ನಂತರ ಯುವ ಪೀಳಿಗೆಗೆ ಹೆಚ್ಚು ಇಷ್ಟ ಎನಿಸಿತು. ಆದರೆ ಅವರೆಲ್ಲ ಕಿವಿಗೊಡುತ್ತ ಇದ್ದುದು ಮನರಂಜನಾ ಕಾರ್ಯಕ್ರಮಗಳಿಗೆ.

ಪತ್ರಿಕೆಗಳು ಆರಂಭ ಆಗುವ ಕಾಲಕ್ಕೆ ತಂತ್ರಜ್ಞಾನ ಹೆಚ್ಚು ಬೆಳೆದಿರಲಿಲ್ಲ. ಶೀಘ್ರ ಮತ್ತು ತೀರಾ ಇತ್ತೀಚಿನ ಸುದ್ದಿಗಳನ್ನು ಸಂಗ್ರಹಿಸಿ ತಂದು ಪ್ರಕಟಿಸುವುದು ಆಗ ಕಷ್ಟಕರ ಆಗಿತ್ತು. ಆದರೆ ಪತ್ರಿಕೆÀಗಳ ಆರಂಭದ ಕಾಲಕ್ಕೆ ಸುದ್ದಿಗಿಂತ ಹೆಚ್ಚಾಗಿ ವಿಚಾರಗಳ ಪ್ರಸಾರ ಮುಖ್ಯ ಉದ್ದೇಶ ಆಗಿತ್ತು. ನಿರ್ದಿಷ್ಟ ನಿಲುವು, ಸಿದ್ಧಾಂತ ಮತ್ತು ಆದರ್ಶಗಳ ಪ್ರತಿಪಾದನೆಗೆ ಪತ್ರಿಕೆಗಳು ಬಳಕೆ ಆಗುತ್ತಿದ್ದವು. ಈ ನಡುವೆ ಅಕ್ಷರಸ್ಥ ಯುವ ಪೀಳಿಗೆ ಹೆಚ್ಚುತ್ತಾ ಹೋದ ಪರಿಣಾಮ ಪತ್ರಿಕೆಗಳ ಪ್ರಸಾರ ಕೂಡ ಹೆಚ್ಚತೊಡಗಿತು. ಆದರೂ ಪತ್ರಿಕೆ ನಡೆಸುವುದು ನಷ್ಟದ ಬಾಬತ್ತು. ಪತ್ರಿಕೆಗಳಲ್ಲಿ ದುಡಿಯುವುದು ಕೇವಲ ಆದರ್ಶವಾಗಿತ್ತೇ ವಿನ: ಹೊಟ್ಟೆ ಹೊರೆಯುವ ಉದ್ಯೋಗ ಖಂಡಿತ ಆಗಿರಲಿಲ್ಲ. ಆಗ ಬಹುಪಾಲು ಪತ್ರಿಕೆಗಳು ವಿಶ್ವಾಸಾರ್ಹತೆ ಉಳಿಸಿಕೊಂಡಿದ್ದವು. ಅವುಗಳಲ್ಲಿ ಮುಂಚೂಣಿಯಲ್ಲಿ ಇದ್ದುದು ‘ದಿ ಹಿಂದೂ’. ಮೊದಲು ಸರ್ಕಾರವನ್ನು ವಿರೋಧಿಸುತ್ತಿದ್ದ ‘ಇಂಡಿಯನ್ ಎಕ್ಷಪ್ರೆಸ್’ ತನ್ನ ಅತಿ ಉತ್ಸಾಹದ ಬರಹಗಳಿಂದಾಗಿ ಗಮನ ಸೆಳೆಯುತ್ತಿತ್ತು. ಇದರ ಜೊತೆಗೆ ಓದಬಾರದ ಪತ್ರಿಕೆಗಳೂ ಬರುತ್ತಿದ್ದವು. ಅಂಥವುಗಳನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಳ್ಳುವುದು ಪೊಲೀಸರಿಗೆ ಒಂದು ಕೆಲಸ ಆಗಿತ್ತು. ಇನ್ನೂ ಸ್ವಲ್ಪ ಮುಂದುವರಿದ ಕಾಲಕ್ಕೆ ಬೆದರಿಕೆ ಒಡ್ಡಿ ಹಣ ವಸೂಲಿಗೆ ಇಳಿದ ಪತ್ರಿಕೆಗಳು, ತೇಜೋವಧೆ ಮಾಡಿ ತೃಪ್ತಿಪಡುವ ಪತ್ರಿಕೆಗಳೂ ಹುಟ್ಟಿಕೊಂಡವು. ಅಂಥವುಗಳನ್ನು ‘ಹಳದಿ’ ಪತ್ರಿಕೆಗಳು ಎಂದು ಕರೆಯಲಾಗುತ್ತಿತ್ತು.

ರಾಜಕೀಯ ಮತ್ತು ಆರ್ಥಿಕ ವಿಚಾರಗಳ ಸ್ಪಷ್ಟ ನಿರೂಪಣೆಯ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ರಿವ್ಯೂ’ ಮತ್ತು ಕಲೆಗೆ ಸಂಬಂಧಿಸಿದ ಮುಲ್ಕ ರಾಜ ಆನಂದ ಸಂಪಾದಕತ್ವದ ‘ಮಾರ್ಗ’ ಪತ್ರಿಕೆಗಳು ಆಗ ಶ್ರೇಷ್ಠ ವಿಚಾರಗಳ ಪ್ರತಿಪಾದನೆ ಪ್ರತೀಕವಾಗಿದ್ದವು. ಆದರೆ ‘ಎಕನಾಮಿಕ್..’ ಪತ್ರಿಕೆ ಚಂದಾದಾರರನ್ನು ನಂಬಿ ನಡೆಯುತ್ತಿದ್ದವು. ದಿನ ಕಳೆದಂತೆ ಚಂದಾದಾರರ ಸಂಖ್ಯ್ಯೆ ಕ್ಷೀಣಿಸಿ, ಮುಚ್ಚುವ ಪರಿಸ್ಥಿತಿ ಬಂದಾಗ ಆಗಿನ ಪಧಾನಿ ನೆಹರೂ ಪತ್ರಿಕೆ ಮುಚ್ಚದೇ ಮುಂದುವರಿಯುವಂತೆ ನೋಡಿಕೊಂಡರು. ‘ಮಾರ್ಗ’ ಪತ್ರಿಕೆÀಗೆ ಟಾಟಾ ಸಮೂಹದ ನೆರವು ಇದ್ದುದರಿಂದ ಅಂಥ ಕಷ್ಟ ಬರಲಿಲ್ಲ.

ಎಪ್ಪತ್ತರ ದಶಕದ ನಂತರ ಪತ್ರಿಕೆಗಳ ಸಂಖ್ಯೆ, ಪ್ರಸಾರ ಎರಡೂ ಹೆಚ್ಚಿದವು. ಆದರೆ ಕೀಳು ಮಟ್ಟದ ಟೀಕೆ, ತೇಜೋವಧೆ ಇರುತ್ತಿರಲಿಲ್ಲ. ಏಕೆಂದರೆ ಮಾನನಷ್ಟ ಮೊಕದ್ದಮೆ ಹೂಡಿದರೆ ಅದನ್ನು ಎದುರಿಸುವುದು ಪತ್ರಿಕೆಗಳಿಗೆ ಬಹುದೊಡ್ಡ ಕಷ್ಟ ಆಗಿತ್ತು. ಆದರೆÀ ತೊಂಭತ್ತರ ದಶಕದಲ್ಲಿ ವಿದ್ಯುನ್ಮಾನ ಖಾಸಗಿ ವಾಹಿನಿಗಳ ದಾಂಗುಡಿ ಇಡೀ ಪರಿಸ್ಥಿತಿಗೆ ಬೇರೆÀ ತಿರುವು ತಂದಿತು. ಅದಕ್ಕೂ ಒಂದು ದಶಕಕ್ಕೆ ಮುಂಚೆ ಆರಂಭಗೊಂಡ ಸರ್ಕಾರೀ ಸ್ವಾಮ್ಯದ ‘ದೂರದರ್ಶನ’ ಸಭ್ಯ ಕಾರ್ಯಕ್ರಮಗಳಿಗೆ ಹೆಸರಾಗಿತ್ತು. ಆದರೆ ಖಾಸಗಿ ವಾಹಿನಿಗಳು ಜನಪ್ರಿಯತೆ ದೃಷ್ಟಿಯಿಂದ ಪೈಪೋಟಿಗೆ ಇಳಿದ ಕಾರಣ ಎಲ್ಲ ಹದಗೆಡತೊಡಗಿತು. ಪೈಪೋಟಿಗೆ ಮುಖ್ಯ ಕಾರಣ ಜಾಹೀರಾತು. ಜಾಹೀರಾತು ಬರಬೇಕೆಂದರೆ ವಾಹಿನಿ ಜನಪ್ರಿಯ ಆಗಿರಬೇಕು. ವಾಹಿನಿ ಆರಂಭಿಸುವುದು ಮತ್ತು ನಡೆಸಲು ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಅಗತ್ಯ.

ಉದ್ಯಮಿಗಳು ಅಪಾರ ಪ್ರಮಾಣದ ಹಣ ತೊಡಗಿಸಿ ವಾಹಿನಿಗಳನ್ನು ಆರಂಭಿಸಿದರು. ಅವರಿಗೆ ವಾಹಿನಿ ಲಾಭದಾಯಕ ಆಗಬೇಕು. ಹಾಗೆಯೇ ಸರ್ಕಾರದಿಂದ ಅನುಕೂಲ ಒದಗಿ ಬರಬೇಕು. ಈ ಎರಡೂ ಉದ್ದೇಶಗಳಿಗಾಗಿ ವಾಹಿನಿಗಳು ಪತ್ರಿಕಾ ಧರ್ಮಕ್ಕೆ ವ್ಯತಿರಿಕ್ತವಾಗಿಯೇ ನಡೆದುಕೊಳ್ಳುತ್ತ ಹೋದವು. ಕೇಂದ್ರ ಸರ್ಕಾರವು ವಾಹಿನಿಗಳ ಮತ್ತು ಮಾಧ್ಯಮಗಳ ನಡವಳಿಕೆ ನಿಯಂತ್ರಣಕ್ಕೆ ಬೇರೆ ಬೇರೆ ರೀತಿಯ ಏರ್ಪಾಡುಗಳನ್ನು ಮಾಡಿದೆಯಾದರೂ ಅವುಗಳ ಲೋಪಗಳನ್ನು ಬಳಸಿಕೊಂಡು ಇಲ್ಲವೇ ತಂತ್ರಜ್ಞಾನದ ದುರುಪಯೋಗ ಮಾಡಿಕೊಂಡು ಲಾಭ ಮಾಡಿಕೊಳ್ಳುವುದು ವಾಹಿನಿಗಳಿಗೆ ಸಾಮಾನ್ಯ ಎನಿಸಿದೆ.

ಹಾಗಾಗಿಯೇ ಈ ಹೊತ್ತು ವಾಹಿನಿಗಳ ವಿಶ್ವಾಸಾರ್ಹತೆ (ಕೆಲವೇ ಕೆಲವನ್ನು ಬಿಟ್ಟು) ಪ್ರಶ್ನಾರ್ಹವಾಗಿದೆ. ಪತ್ರಿಕೆಗಳ ಪ್ರಸಾರ, ಜ್ಯೇಷ್ಠತೆ ಆಧÀರಿಸಿ ಅವುಗಳ ಶ್ರೇಣಿ ಗೊತ್ತು ಮಾಡಿ, ಜಾಹೀರಾತು ದರ ನಿಗದಿ ಮಾಡಲಾಗುತ್ತದೆ. ಅದೇ ರೀತಿ ವಾಹಿನಿಗಳ ಜನಪ್ರಿಯತೆ ನಿರ್ಧರಿಸಿ ಜಾಹೀರಾತು ದರ ನಿಗದಿ ಮಾಡುವ ಸಂಸ್ಥೆ ಬಾರ್ಕ. ಈ ಸಂಸ್ಥೆ ವಾಹಿನಿಗಳ ಟೆಲಿವಿಜನ್ ರೇಟಿಂಗ್ ಪಾಯಿಂಟ್ (ಟಿಆರ್‍ಪಿ) ಲೆಕ್ಕ ಹಾಕಲು ದೇಶಾದ್ಯಂತ ಕೆಲವು ಗ್ರಾಹಕರ ಟಿವಿಗಳಿಗೆ ಮೀಟರ್ ಅಳವಡಿಸುತ್ತದೆ. ಆ ಗ್ರಾಹಕರು ವೀಕ್ಷಿಸುವ ವಾಹಿನಿಗಳು, ವೀಕ್ಷಣೆಯ ಅವಧಿ ಅಲ್ಲಿ ದಾಖಲಾಗುತ್ತದೆ. ಇದನ್ನು ಆಧರಿಸಿ ಜನಪ್ರಿಯತೆ ನಿರ್ಧಾರ ಆಗುತ್ತದೆ.

ದೇಶಾದ್ಯಂತ ಮೂವತ್ತರಿಂದ ನಲವತ್ತು ಸಾವಿರ ಇಂಥ ಮಾಪಕ ಅಳವಡಿಸುತ್ತಾರೆ. ಮುಂಬಯಿ ನಗರ ಒಂದರಲ್ಲಿಯೇ ಎರಡು ಸಾವಿರ ಇಂಥ ಮಾಪಕಗಳನ್ನು ಅಳವಡಿಸಲಾಗಿತ್ತು. ಅವುಗಳ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಯೊಂದಕ್ಕೆ ನೀಡಲಾಗಿತ್ತು. ಈ ಸಂಸ್ಥೆ ನಿರ್ದಿಷ್ಟ ವಾಹಿನಿಗಳಿಗೆ ಮಾತ್ರ ಹೆಚ್ಚಿನ ಜನಪ್ರಿಯತೆ ಬರುವಂತೆ ನೋಡಿಕೊಂಡ ವಿಷಯ ಮುಂಬಯಿ ಪೋಲೀಸರ ತನಿಖೆಯಿಂದ ಗೊತ್ತಾಗಿದೆ. ಪತ್ರಕರ್ತರ ಬಗ್ಗೆ ಅಸಹ್ಯ ಅನಿಸುವಂತೆ ವರ್ತಿಸುವ ಇಂಥ ವಾಹಿನಿಗಳ ವಿಶ್ವಾಸಾರ್ಹತೆ ಏನು ಎಂದು ಮುಂಚೆಯೇ ಜನರಿಗೆ ತಿಳಿದಿತ್ತು. ಈಗ ಅದಕ್ಕೆ ಒಂದು ರೀತಿಯ ಅಧಿಕೃತತೆ ಬಂದಿದೆ.

Leave A Reply

Your email address will not be published.

error: Content is protected !!