3 ಕೋಟಿ 74 ಲಕ್ಷ ಸನಿಹದಲ್ಲಿ ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ

ವಾಷಿಂಗ್ಟನ್, ಅ 12- ಜಾಗತಿಕವಾಗಿ ಕೊವಿಡ್‍ ನ ಪ್ರಕರಣಗಳ ಸಂಖ್ಯೆ ಸೋಮವಾರದ ವೇಳೆಗೆ 3 ಕೋಟಿ 74 ಲಕ್ಷ ಸನಿಹದಲ್ಲಿದ್ದು ಸಾವಿನ ಸಂಖ್ಯೆ 1,075,700ಕ್ಕೆ ತಲುಪಿದೆ ಎಂದು ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.

ಸದ್ಯ ವಿಶ್ವದಾದ್ಯಂತ ಒಟ್ಟು ಪ್ರಕರಣಗಳ ಸಂಖ್ಯೆ 3,73,95,029 ಮತ್ತು ಸಾವಿನ ಸಂಖ್ಯೆ 10,75,750 ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ತನ್ನ ಇತ್ತೀಚಿನ ನವೀಕೃತ ಮಾಹಿತಿಯಲ್ಲಿ ತಿಳಿಸಿದೆ.

ಸಿಎಸ್ಎಸ್ಇ ವರದಿಯಂತೆ, ವಿಶ್ವದ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳು ಅಮೆರಿಕದಲ್ಲಿ ವರದಿಯಾಗಿದ್ದು ಈ ಸಂಖ್ಯೆ ಕ್ರಮವಾಗಿ 77,61,637 ಮತ್ತು 2,14,767 ರಷ್ಟಿದೆ.

ಪ್ರಕರಣಗಳಲ್ಲಿ , 70,53,806 ಸಂಖ್ಯೆಯೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 1,08,334 ಕ್ಕೆ ಏರಿದೆ.

ಸಿಎಸ್ಎಸ್ಇ ಅಂಕಿಅಂಶಗಳಂತೆ ನಂತರದ ಸ್ಥಾನದಲ್ಲಿ ಬ್ರೆಜಿಲ್ (50,94,979), ರಷ್ಯಾ (12,91,687) ಮತ್ತು ಕೊಲಂಬಿಯಾ (9,11,316) ಇವೆ.

ಬ್ರೆಜಿಲ್ ನಲ್ಲಿ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಸಾವುಗಳು ವರದಿಯಾಗಿದ್ದು, ಈ ಸಂಖ್ಯೆ 1,50,488 ರಷ್ಟಿದೆ.

20,000 ಕ್ಕಿಂತ ಹೆಚ್ಚಿನ ಸಾವುಗಳು ಸಂಭವಿಸಿರುವ ದೇಶಗಳ ಪೈಕಿ ಮೆಕ್ಸಿಕೊ (83,781), ಯುನೈಟೆಡ್ ಕಿಂಗ್ ಡಮ್‍ (42,915), ಇಟಲಿ (36,166), ಪೆರು (33,223) ಮತ್ತು ಸ್ಪೇನ್ (32,929) ಸೇರಿವೆ.

Leave A Reply

Your email address will not be published.

error: Content is protected !!