ನವ ಯುಗದ ಹರಾಜು ಸಿದ್ಧಾಂತಕ್ಕಾಗಿ ಒಲಿದ ನೊಬೆಲ್ ಅರ್ಥಶಾಸ್ತ್ರ ಪುರಸ್ಕಾರ

ಸ್ಟಾಕ್‍ಹೋಮ್‍, ಅ 12 – ಹೊಸ ಯುಗದ ಹರಾಜು ಸಿದ್ದಾಂತ ಮತ್ತು ಹರಾಜಿನಲ್ಲಿ ಹೊಸ ವಿಧಾನಗಳು ಪರಿಕಲ್ಪನೆಗಳಿಗಾಗಿ ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದ ಪಾಲ್‍ ಆರ್ ಮಿಲ್‍ಗ್ರೋಮ್‍ ಮತ್ತು ರಾಬರ್ಟ್‍ ಬಿ ವಿಲ್ಸನ್‍ ಅವರಿಗೆ ನೊಬೆಲ್‍ ಅರ್ಥಶಾಸ್ತ್ರ ಪುರಸ್ಕಾರ ಸಂದಿದೆ.

ಪಾಲ್‍ ಆರ್ ಮಿಲ್‍ಗ್ರೋಮ್‍ ಮತ್ತು ರಾಬರ್ಟ್‍ ಬಿ ವಿಲ್ಸನ್‍ ಸೈದ್ಧಾಂತಿಕ ಆವಿಷ್ಕಾರಗಳಿಂದ ಹರಾಜುಗಳ ಪದ್ಧತಿಗಳಲ್ಲಿ ಸುಧಾರಣೆಯಾಗಿದೆ. ಹೊಸ ಯುಗದಲ್ಲಿ ಅಗತ್ಯವಿರುವ ಈ ಮಹತ್ವದ ಕಾರ್ಯವನ್ನು ಪುರಸ್ಕರಿಸಿ ನೊಬೆಲ್‍ ಅವರ ಹೆಸರಿನಲ್ಲಿ ಆರ್ಥಶಾಸ್ತ್ರ ವಿಭಾಗದಲ್ಲಿ ಇಬ್ಬರಿಗೂ ಪ್ರಶಸ್ತಿ ನೀಡುತ್ತಿರುವುದಾಗಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಪ್ರಕಟಣೆ ತಿಳಿಸಿದೆ.

ಪ್ರಶಸ್ತಿ ಪುರಸ್ಕೃತರು 10 ದಶಲಕ್ಷ ಸ್ವೀಡಿಷ್ ಕ್ರೋನರ್ ಅನ್ನು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ. ಇಬ್ಬರೂ ಪ್ರತಿಭಾನ್ವಿತರು ಹರಾಜು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅಧ್ಯಯನ ಮಾಡಿದ್ದಾರೆ. ರೇಡಿಯೋ ತರಂಗಾಂತರಗಳ ಮೂಲಕ ಸಾಂಪ್ರದಾಯಿಕ ರೀತಿಯಲ್ಲಿ ಮಾರಾಟ ಮಾಡಲು ಕಷ್ಟಕರವಾದ ಸರಕು ಮತ್ತು ಸೇವೆಗಳಿಗೆ ಹೊಸ ಹರಾಜು ಸ್ವರೂಪಗಳನ್ನು ವಿನ್ಯಾಸಗೊಳಿಸಲು ಅವರು ತಮ್ಮ ಸೂಕ್ಷ್ಮ ಗ್ರಹಿಕೆಯನ್ನು ಬಳಸಿದ್ದಾರೆ. ಅವರ ಆವಿಷ್ಕಾರಗಳಿಂದ ವಿಶ್ವಾದ್ಯಂತದ ಮಾರಾಟಗಾರರು, ಖರೀದಿದಾರರು ಮತ್ತು ತೆರಿಗೆದಾರರಿಗೆ ಪ್ರಯೋಜನವಾಗಿದೆ ಎಂದು ಅಕಾಡೆಮಿ ತಿಳಿಸಿದೆ.

Leave A Reply

Your email address will not be published.

error: Content is protected !!