“ಯುವರತ್ನ” ಚಿತ್ರೀಕರಣ ಮುಕ್ತಾಯ

ಬೆಂಗಳೂರು, ಅ 13- ಪುನೀತ ರಾಜಕುಮಾರ ನಟನೆಯ ಯುವರತ್ನ ಸಿನಿಮಾ ಚಿತ್ರೀಕರಣ ಮುಗಿಸಿದೆ. ಲಾಕ್‌ಡೌನ್‌ನಿಂದ ಕೊನೆಯ ಹಂತದ ಶೂಟಿಂಗ್ ಸ್ಥಗಿತಗೊಳಿಸಿದ್ದ ಚಿತ್ರತಂಡ ಈಗ ಸಂಪೂರ್ಣವಾಗಿ ಮುಗಿಸಿದೆ.

ಕೊನೆಯ ದಿನದ ಚಿತ್ರೀಕರಣದಲ್ಲಿ ನಟ ಪುನೀತ ರಾಜಕುಮಾರ ಮತ್ತು ನಾಯಕಿ ಸಯೇಶಾ ಸೈಗಲ್ ಭಾಗಿಯಾಗಿದ್ದರು.

ಈ ವೇಳೆ ಚಿತ್ರದ ನಿರ್ಮಾಪಕ ವಿಜಯ ಕಿರಗಂದೂರ, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ ಗೌಡ ಸಹ ಪಾಲ್ಗೊಂಡಿದ್ದರು. ಈ ಸಂತಸವನ್ನು ನಿರ್ದೇಶಕ ಸಂತೋಷ ಆನಂದ‌ರಾಮ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟ ಪುನೀತ ಸರ್ ಗೆ, ವಿಜಯ ಸರ್ ಗೆ, ವೆಂಕಟ ಸರ್ ಗೆ, ಶಿವು ಸರ್ ಗೆ ನನ್ನ ಡೈರೆಕ್ಷನ್ ತಂಡಕ್ಕೆ ಹಾಗು ಹೊಂಬಾಳೆ ಕುಟುಂಬಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ನನ್ನ ತಂಡ ನನ್ನ ಶಕ್ತಿ” ಎಂದು ಟ್ವೀಟ್ ಮಾಡಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾತ್ರ ಬಾಕಿಯಿದ್ದು, ಆದಷ್ಟು ಬೇಗ ಮುಗಿಸಿ ತೆರೆಗೆ ಬರಲು ಸಜ್ಜಾಗಲಿದೆ.

Leave A Reply

Your email address will not be published.

error: Content is protected !!