ಅಂಪೈರ್‌ ವಿರುದ್ಧ ಎಂಎಸ್‌ ಧೋನಿ ನಡತೆ ಖಂಡಿಸಿದ ಅಭಿಮಾನಿಗಳು

ದುಬೈ, ಅ 14- ಸನ್‌ರೈಸರ್ಸ್ ಹೈದರಾಬಾದ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ಪಂದ್ಯದ ಬಳಿಕ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ವೈಡ್‌ ವಿಚಾರವಾಗಿ ಎಂಎಸ್ ಧೋನಿ ಅಂಪೈರ್‌ ಮೇಲೆ ತೋರಿದ ನಡತೆಯನ್ನು ಬಲವಾಗಿ ಖಂಡಿಸಿದ್ದಾರೆ ಹಾಗೂ ಸಿಎಸ್‌ಕೆ ಫ್ರಾಂಚೈಸಿಯನ್ನು ರದ್ದು ಮಾಡಿ ಎಂದೆಲ್ಲಾ ಜರಿದಿದ್ದಾರೆ.

ಮಂಗಳವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 29ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್, ನಿಗದಿತ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 167 ರನ್‌ಗಳನ್ನು ದಾಖಲಿಸಿತು. ಬಳಿಕ ಗುರಿ ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್‌ ನಿಗದಿತ 20 ಓವರ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡು 147 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ 20 ರನ್‌ಗಳಿಂದ ಸಿಎಸ್‌ಕೆ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು.

ಆದರೆ, ಸನ್‌ರೈಸರ್ಸ್ ಹೈದರಾಬಾದ್‌ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಎಂಎಸ್‌ ಧೋನಿ ಹಾಗೂ ಅಂಪೈರ್‌ ನಡುವೆ ಈ ಘಟನೆ ನಡೆದಿತ್ತು. 18ನೇ ಓವರ್‌ನಲ್ಲಿ 19 ರನ್‌ಗಳನ್ನು ಗಳಿಸಿದ್ದ ಎಸ್ಆರ್‌ಎಚ್‌, ಕೊನೆಯ ಎರಡು ಓವರ್‌ಗಳಲ್ಲಿ 27 ರನ್‌ಗಳ ಅಗತ್ಯವಿತ್ತು, 19ನೇ ಓವರ್‌ನ ಮೊದಲನೇ ಎಸೆತದಲ್ಲಿ ಮೂರು ರನ್‌ಗಳನ್ನು ಗಳಿಸಿತ್ತು.

ಶಾರ್ದೂಲ್‌ ಠಾಕೂರ್ ಅವರ ಎರಡನೇ ಎಸೆತ ತುಂಬಾ ವೈಡ್‌ ಇತ್ತು, ಆದರೆ ಅಂಪೈರ್‌ ರೀಫೆಲ್‌ ವೈಡ್‌ ನೀಡಲಿಲ್ಲ. ಮೊದಲನೇ ಬಾರಿ ಕೈ ವೈಡ್‌ ಸಿಗ್ನಲ್‌ ಅರ್ಧ ನೀಡಿದ್ದರು, ಆದರೆ, ಎಂಎಸ್‌ ಧೋನಿ ಕೋಪದ ಮುಖವನ್ನು ನೋಡಿದ ಬಳಿಕ, ತಮ್ಮ ನಿರ್ಧಾರವನ್ನು ಬದಲಿಸಿದರು. ಅಂತಿಮವಾಗಿ ವೈಡ್‌ ಎಂದು ಘೋಷಿಸಿದರು. ಇದರಿಂದ ಎಂಎಸ್‌ ಧೋನಿ ಅಂಪೈರ್‌ ವಿರುದ್ಧ ಬೆದರಿಸುವ ಹಾಗೆ ವರ್ತಿಸಿದ್ದರು.

ಅಂತಿಮವಾಗಿ ಚೆನ್ನೈ ಸೂಪರ್‌ ಕಿಂಗ್ಸ್ ಪಂದ್ಯವನ್ನು ಸುಲಭವಾಗಿ ಗೆಲುವು ಸಾಧಿಸಿತು. ಮೂರು ಬಾರಿ ಚಾಂಪಿಯನ್ಸ್ 20 ರನ್‌ಗಳಿಂದ ಗೆಲುವು ಪಡೆಯುವ ಮೂಲಕ ಜಯದ ಹಳಿಗೆ ಮರಳಿತು. ಚೆನ್ನೈ ಸೂಪರ್ ಕಿಂಗ್ಸ್‌ಗೆ ಇದು ಮೂರನೇ ಗೆಲುವಾಯಿತು. ಎಂಟು ಪಂದ್ಯಗಳಿಂದ ಆರು ಅಂಕಗಳನ್ನು ಕಲೆ ಹಾಕಿರುವ ಸಿಎಸ್‌ಕೆ ಪಾಯಿಂಟ್ಸ್ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ.

ಧೋನಿ ವಿರುದ್ಧ ಅಭಿಮಾನಿಗಳ ಆಕ್ರೋಶ:
ಎಂಎಸ್‌ ಧೋನಿ ಪಂದ್ಯದ ಗೆಲುವಿನೊಂದಿಗೆ ಖುಷಿಯಾಗಿರಬಹುದು, ಆದರೆ ಅಭಿಮಾನಿಗಳು ಮಾತ್ರ ಧೋನಿ ನಡೆದುಕೊಂಡ ರೀತಿಯ ಬಗ್ಗೆ ಖುಷಿ ಇಲ್ಲ. 19ನೇ ಓವರ್‌ನಲ್ಲಿ ಅಂಪೈರ್‌ ವೈಡ್‌ ನೀಡುವ ನಿರ್ಧಾರದಲ್ಲಿ ಎಂಎಸ್‌ ಧೋನಿ ನಡೆದುಕೊಂಡ ಹಾದಿಯ ಬಗ್ಗೆ ಅಭಿಮಾನಿಗಳು ಪಂದ್ಯದ ಬಳಿಕ ಟ್ವಿಟರ್‌ನಲ್ಲಿ ಖಂಡಿಸಿದ್ದಾರೆ. ಕೆಲ ಅಭಿಮಾನಿಗಳು ಎಂಎಸ್‌ ಧೋನಿ, ಅಂಪೈರ್‌ ಅನ್ನು ಬೆದರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ಸಿಎಸ್‌ಕೆ ಫ್ರಾಂಚೈಸಿಯನ್ನು ಬ್ಯಾನ್‌ ಮಾಡಿ ಎಂದೆಲ್ಲ ದೂರಿದ್ದಾರೆ.

Leave A Reply

Your email address will not be published.

error: Content is protected !!