ಅತಿ ವೇಗದ ಎಸೆತದ ಬಗ್ಗೆ ಗೊತ್ತಿರಲಿಲ್ಲ!

ದುಬೈ, ಅ.15-
ಪಂದ್ಯ ಮುಕ್ತಾಯವಾಗುವವರೆಗೂ ತಮ್ಮ ಸಾಧನೆ ಕುರಿತು ತಿಳಿದಿರಲಿಲ್ಲ ಎಂದು ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಎಸೆತವನ್ನು ಎಸೆದ ದಕ್ಷಿಣ ಆಫ್ರಿಕಾದ ವೇಗಿ ಆ್ಯನ್ರಿಚ್ ನೋರ್ಜೆ ಹೇಳಿದ್ದಾರೆ.

ಬುಧವಾರ ನಡೆದ ಐಪಿಎಲ್ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಜೋಸ್ ಬಟ್ಲರ್ ಗೆ 26 ವರ್ಷದ ನೋರ್ಜೆ ಎಸೆದ 3ನೇ ಓವರ್ ನ 5ನೇ ಎಸೆತವೂ 156.2 ಕಿ.ಮೀ ವೇಗದಿಂದ ಕೂಡಿತ್ತು. ಇದು ಟೂರ್ನಿಯಲ್ಲಿಯೇ ಅತಿ ವೇಗದ ಎಸೆತವಾಗಿದೆ. ಈ ಮೂಲಕ ತಮ್ಮದೇ ದೇಶದ ಡೇಲ್ ಸ್ಟೇನ್ (154.4 ಕಿ.ಮೀ.) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

” ಅಪೂರ್ವ ಸಾಧನೆ ಬಗ್ಗೆ ನಾನು ಕೇಳಿದೆ. ಆದರೆ ಬೌಲಿಂಗ್ ಮಾಡಿದ ಸಮಯದಲ್ಲಿ ಈ ಬಗ್ಗೆ ನನಗೆ ತಿಳಿದಿರಲಿಲ್ಲ, ” ಎಂದು ಡೆಲ್ಲಿ ತಂಡದ ಸಹ ಆಟಗಾರ ಶಿಖರ್ ಧವನ್ ಗೆ ನೋರ್ಜೆ ಹೇಳಿರುವ ವಿಡಿಯೋವನ್ನು ಐಪಿಎಲ್ ಟಿ20. ಕಾಮ್. ಹಂಚಿಕೊಂಡಿದೆ. ಜತೆಗೆ ಕಠಿಣ ಪರಿಶ್ರಮದಿಂದಾಗಿ ಇಂತಹ ಸಾಧನೆ ಹೊರಹೊಮ್ಮಿದೆ ಎಂದು ದಕ್ಷಿಣ ಆಫ್ರಿಕಾ ವೇಗಿ ಹೇಳಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!