ದೇಶದಲ್ಲಿ ಎರಡನೇ ಹಂತದ ಸ್ಪುಟ್ನಿಕ್ ವಿ ಕ್ಲಿನಿಕಲ್ ಟ್ರಯಲ್ಸ್ ..?

ನವದೆಹಲಿ,ಅ 17- ಭಾರತದಲ್ಲಿ ರಷ್ಯಾದ ಕೋವಿಡ್ -19 ಲಸಿಕೆಯ ಎರಡನೇ ಕ್ಲಿನಿಕಲ್ ಟ್ರಯಲ್ಸ್ ಮತ್ತೆ ಆರಂಭಗೊಳ್ಳುವ ಅವಕಾಶ ಇದೆ ಎಂದು ಸ್ಪುಟ್ನಿಕ್ ವಿ ತಿಳಿಸಿದೆ. ಲಸಿಕೆಯ ಪ್ರಯೋಗಗಳನ್ನು ನಡೆಸಲು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಗೆ ಅನುಮತಿ ನೀಡಬೇಕೆಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿ.ಡಿ.ಎಸ್.ಸಿ.ಓ.)ಗೆ ತಜ್ಞರ ತಂಡ ಶುಕ್ರವಾರ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.

ಹೈದರಾಬಾದ್ ಗೆ ಸೇರಿದ ಔಷಧಿ ಸಂಸ್ಥೆಯೊಂದಿಗೆ ಎರಡು ಹಾಗೂ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮತಿ ಕೋರಿ ಈ ತಿಂಗಳ 13 ರಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಮರು ಅರ್ಜಿ ಸಲ್ಲಿಸಿತು.

ಇದಕ್ಕೂ ಮೊದಲು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಕಾರಣ ಪರಿಷ್ಕೃತ ಪ್ರೋಟೋಕಾಲ್‌ನೊಂದಿಗೆ ಮುಂದೆಬಂದಿದೆ. ಎರಡನೇ ಹಂತದಲ್ಲಿ ನೂರು ಮಂದಿ, ಮೂರನೇ ಹಂತದ ಪ್ರಯೋಗಗಳಲ್ಲಿ 1,400 ಸ್ವಯಂಸೇವಕರು ಪ್ರಯೋಗಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. ಚರ್ಚೆಗಳ ನಂತರ ನಂತರ, ಸಂಭಾವ್ಯ ಲಸಿಕೆಯ ಎರಡನೇ ಹಂತದ ಪ್ರಯೋಗವನ್ನು ಅನುಮೋದಿಸಲು ಎಸ್‌ಇಸಿ ಶಿಫಾರಸು ಮಾಡಿದೆ.

Leave A Reply

Your email address will not be published.

error: Content is protected !!