ಸಿದ್ದು ಕನಮಡಿ ಕೊಲೆ ಪ್ರಕರಣ : ಮತ್ತ ಐವರು ಆರೋಪಿಗಳ ಬಂಧನ

ಗೋಕಾಕ ಮೇ.13-ದಲಿತ ಮುಖಂಡ ಇಲ್ಲಿಯ ಸಿದ್ದು ಕನಮಡಿ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿದ್ದು ದಿ. 11ರಂದು ಮೂವರನ್ನು, ದಿ. 12 ಹಾಗೂ 13ರಂದು ಒಬ್ಬೊಬ್ಬರನ್ನು ಪೋಲೀಸರು ಬಂಧಿಸಿದ್ದಾರೆ.
ದಿ. 11ರಂದು ರವಿ ಚೂನನ್ನವರ, ವಿನೋದ ಹೊಸಮನಿ, ಕಿರಣ ದೊಡ್ಡಣ್ಣವರ ಹಾಗೂ ದಿ. 12ರಂದು ಕೇದಾರಿ ಜಾಧವ ಮತ್ತು ದಿ. 13ರಂದು ಸುನೀಲ ಮುರ್ಕಿಭಾಂವಿ ಎಂಬವನನ್ನು ಹಾಗೂ ಈ ಮೊದಲು ಮೂವರನ್ನು ಬಂಧಿಸಲಾಗಿದೆ.
ರಾಮದುರ್ಗ ಡಿವೈಎಸ್‍ಪಿ ಎಸ್.ಎ.ಪಾಟೀಲ ಅವರ ನೇತೃತ್ವದಲ್ಲಿ ಸಿಪಿಐ ಗೋಪಾಲ ರಾಠೋಡ, ಪಿಎಸ್‍ಐ ಎ.ಟಿ.ಅಮ್ಮಿನಭಾಂವಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here