ಬೆಳಗಾವಿ, 27- ಸೋಮವಾರ ಸುಮಾರು 10.ಕಿ.ಮೀ ಗಳಿಗೂ ಅಧಿಕ ಮಾರ್ಗದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ ಶೋ ನಡೆಯಿತು.
ದಾರಿಯುದ್ದಕ್ಕೂ ಅಪಾರ ಜನಸ್ತೋಮ ಸಾಗರೋಪಾದಿಯಲ್ಲಿ ನೆರೆದು ಪ್ರಧಾನಮಂತ್ರಿಗಳನ್ನು ಹರ್ಷೋದ್ಘಾರಗಳಿಂದ ಸ್ವಾಗತಿಸಿದರು.
ಪ್ರಮುಖ ವೃತ್ತಗಳಲ್ಲಿ ಪುಷ್ಪಾರ್ಚನೆಗೈದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಲಕ್ಷಾಂತರ ಜನರು ಜಯಕಾರ ಹಾಕಿದರು.