ತೆಹರಾನ್, ಜನವರಿ 16 – ದಕ್ಷಿಣ ಇರಾನ್ನ ಪ್ರಾಂತ್ಯದ ಹಾರ್ಮೋಜ್ಗನ್ಲ್ಲಿ ಭೂಕಂಪನ ಸಂಭವಿಸಿದ್ದು, ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.5 ಎಂದು ದಾಖಲಾಗಿರುವುದಾಗಿ ರಾಷ್ಟ್ರೀಯ ಭೂಕಂಪನ ಕೇಂದ್ರ ಶನಿವಾರ ತಿಳಿಸಿದೆ.
ಇರಾನಿನ ಭೂಕಂಪಶಾಸ್ತ್ರಜ್ಞರ ಪ್ರಕಾರ, ಭೂಕಂಪನದ ಕೇಂದ್ರ ಬಿಂದು 18 ಕಿಲೋಮೀಟರ್ ಆಳದಲ್ಲಿತ್ತು ಎಂದು ಹೇಳಲಾಗಿದೆ.
ಭೂಕಂಪನದಿಂದ ಯಾವುದೇ ಜೀವ ಹಾನಿ, ಆಸ್ತಿ ಪಾಸ್ತಿಗೆ ಹಾನಿಯಾದ ವರದಿಯಾಗಿಲ್ಲ.
ಅರೇಬಿಯನ್ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್ಗಳ ನಡುವಿನ ಗಡಿಯುದ್ದಕ್ಕೂ ಇರಾನ್ ಭೂಕಂಪನಶೀಲ ಸಕ್ರಿಯ ವಲಯದಲ್ಲಿದೆ ಮತ್ತು ಆಗಾಗ್ಗೆ ಪ್ರಬಲ ಭೂಕಂಪಗಳಿಂದ ಬಳಲುತ್ತಿದೆ. ಕ್ರಿ.ಶ 856 ರಲ್ಲಿ ಸಂಭವಿಸಿದ ಇತಿಹಾಸದ ಅತ್ಯಂತ ಭೀಕರ ಭೂಕಂಪದಲ್ಲಿ ಸುಮಾರು 200,000 ಜನರು ಸಾವನ್ನಪ್ಪಿದ್ದರು .