ನವದೆಹಲಿ, ಜ 16 – ಕೊರೋನ ಮಹಾಮಾರಿಯಿಂದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಬಹುನಿರೀಕ್ಷಿತ ಲಸಿಕಾ ವಿತರಣಾ ಅಭಿಯಾನಕ್ಕೆ ಚಾಲನೆ ದೊರಕಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿ, ಲಸಿಕೆ ಜತೆಗೆ ವೈಯಕ್ತಿಕ ಶಿಸ್ತು ಬಹಳ ಅಗತ್ಯ ಎಂದೂ ಎಚ್ಚರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೋ ವಿನ್ ಆಪ್ ಉದ್ಘಾಟಿಸುವ ಮೂಲಕ 3 ಕೋಟಿ ಮಂದಿಗೆ ಮೊದಲ ಹಂತದ ಲಸಿಕೆ ನೀಡಲಾಗುವುದು .
ದೇಶದಲ್ಲಿ ಹೊಸ ಭಾಷ್ಯ ಬರೆಯಲಾಗಿದ್ದು, ಲಸಿಕೆ ಜತೆ ಶಿಸ್ತು ಸಹ ಅಗತ್ಯ ಎಂದು ಎಚ್ಚರಿಸಿದ ಪ್ರಧಾನಿ , ಪ್ರತಿಯೊಬ್ಬ ನಾಗರಿಕರು ಸೋಂಕಿನ ಬಗ್ಗೆ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದೂ ಹೇಳಿದರು.
ಮೊದಲ ದಿನ ದೇಶದ 3006 ಕೇಂದ್ರಗಳಲ್ಲಿ 3 ಲಕ್ಷ ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಮುಂದಿನ 3-4 ತಿಂಗಳಲ್ಲಿ ಸುಮಾರು 30 ಕೋಟಿ ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು. ಕಡಿಮೆ ಅವಧಿಯಲ್ಲಿ ಲಸಿಕೆ ತಯಾರು ಮಾಡಿದ ವಿಜ್ಞಾನಿ ಸಮುದಾಯವನ್ನು ಅಭಿನಂದಿಸಿದ್ದಾರೆ. ಯಾವುದೇ ಕಾರಣಕ್ಕೂ ಲಸಿಕೆ ಕುರಿತು ದುರುದ್ದೇಶದ, ಅಪಪ್ರಚಾರದ ವದಂತಿಗಳಿಗೆ ಜನತೆ ಕಿವಿಗೊಡಬೇಡಿ ಎಂದೂ ಪ್ರಧಾನಿ ಮನವಿ ಮಾಡಿದರು.