INDIA COVID-19 Statistics

11,046,432
Confirmed Cases
Updated on 24/02/2021 8:30 PM
153,257
Total active cases
Updated on 24/02/2021 8:30 PM
156,742
Total deaths
Updated on 24/02/2021 8:30 PM
Thursday, February 25, 2021

INDIA COVID-19 Statistics

11,046,432
Total confirmed cases
Updated on 24/02/2021 8:30 PM
153,257
Total active cases
Updated on 24/02/2021 8:30 PM
156,742
Total deaths
Updated on 24/02/2021 8:30 PM
10,736,433
Total recovered
Updated on 24/02/2021 8:30 PM
Home Editorial ಕಪ್ಪು ಬಿಳುಪು

ಕಪ್ಪು ಬಿಳುಪು

ಆರ್.ಎಲ್. ಸ್ಟೀವನ್ಸನ್ ಪ್ರಸಿದ್ಧ ಕತೆಗಾರ. ಬಹಳ ಜನರಿಗೆ ಆತ ಬರೆದ ‘ಟ್ರೆಜರ್ ಐಲೆಂಡ್’ ಗೊತ್ತು. ಅದೊಂದು ರಂಜನೀಯ ಮಕ್ಕಳ ಸಾಹಸ ಕತೆ. ಆದರೆ ಆತನೇ ಬರೆದ ‘ಡಾಕ್ಟರ್ ಜೆಕಿಲ್ ಆಯಂಡ್ ಮಿಸ್ಟರ್ ಹೈಡ್’ ಹೆಚ್ಚು ಮನೋಜ್ಞ ಕೃತಿ. ಪ್ರತಿ ಮನುಷ್ಯನ ಒಳಗೂ ಕೆಟ್ಟ ಸ್ವಭಾವ ಇರುತ್ತದೆ. ಆದರೆ ಸಮಾಜದ ದೃಷ್ಟಿಗೆ ಅದು ಬೀಳದಂತೆ ಆತ ಬಚ್ಚಿಟ್ಟುಕೊಂಡಿರುತ್ತಾನೆ. ಆದರೆ ಮನುಷ್ಯನ ಕೆಡುಕಿನ ಸ್ವಭಾವ ತೀರಾ ಹೆಚ್ಚಿದಾಗ ಏನಾಗುತ್ತದೆ ಎನ್ನುವುದಕ್ಕೆ ಈ ಕತೆ ಸಾಕ್ಷಿ. ಪ್ರಸಿದ್ಧ ವೈದ್ಯನೊಬ್ಬ ತನ್ನ ಕೆಟ್ಟ ಕೆಲಸಗಳನ್ನು ಮಾಡಲು ಹೊಸ ಉಪಾಯ ಕಂಡುಕೊಳ್ಳುತ್ತಾನೆ. ಅದಕ್ಕಾಗಿ ಎರಡು ರಾಸಾಯನಿಕ ಸಿದ್ಧ ಮಾಡುತ್ತಾನೆ. ಒಂದನ್ನು ಕುಡಿದರೆ ಆತ ವೈದ್ಯನಿಂದ ಸಾಮಾನ್ಯ ಕುರೂಪಿ ಮನುಷ್ಯ ಆಗುತ್ತಾನೆ. ಅದೇ ಕುರೂಪಿ ಮನುಷ್ಯ ಇನ್ನೊಂದು ದ್ರಾವಣ ಸೇವಿಸಿದರೆ ಮತ್ತೆ ವೈದ್ಯ ಆಗುತ್ತಾನೆ. ಹೀಗೆ ವೇಷಾಂತರ ಹೊಂದಿ ಆತ ಕೊಲೆ, ಅತ್ಯಾಚಾರ ಮಾಡುತ್ತಿರುತ್ತಾನೆ. ಆದರೆ ಇದಕ್ಕೊಂದು ಅಂತ್ಯ ಬರುತ್ತದೆ. ಒಂದು ಹಂತದಲ್ಲಿ ಆತ ಹೈಡ್ ಆದವನು, ಮತ್ತೆ ವೈದ್ಯ ಆಗಿ ಬದಲಾಗಲು ಆಗದೇ ಸಿಕ್ಕಿ ಬೀಳುತ್ತಾನೆ.

ಇದು ಒಂದು ಸಾಂಕೇತಿಕ ಕೃತಿ. ನಮ್ಮಲ್ಲಿ ಒಂದೇ ತಂದೆ ತಾಯಿಯ ಇಬ್ಬರು ಮಕ್ಕಳಲ್ಲಿ ಒಬ್ಬ ಕೆಟ್ವ, ಮತ್ತೊಬ್ಬ ಒಳ್ಳೆಯವ ಆಗಿರುವುದು ಕಂಡಿದ್ದೇವೆ. ಕನ್ನಡದ ಸಿನಿಮಾ ‘ಕಪ್ಪು ಬಿಳುಪು’ ಇದಕ್ಕೊಂದು ಉದಾಹರಣೆ. ಆದರೆ ಸಮಾಜದಲ್ಲಿ ಮುಖವಾಡ ತೊಟ್ಟು ಬದುಕುವ ಅದೆಷ್ಟು ಜನರನ್ನು ನಾವು ಕಾಣುತ್ತೇವೆ.

ಅಂಥದೊಂದು ಪ್ರಸಂಗ ಈ ನಮ್ಮ ಪ್ರಸಿದ್ಧ ಪತ್ರಕರ್ತನದ್ದು. ಆತ ಇಡೀ ದೇಶದ ಉದ್ಧಾರಕ್ಕೆ ಜನಿಸಿದವನು ಎಂಬಂತೆ ಬೊಬ್ಬಿಡುತ್ತಾ ಇರುತ್ತಾನೆ. ಆದರೆ ಒಳಗೇ ಆತನ ಉದ್ದೇಶ ಸಾಧನೆ ಬೇರೆಯೇ ಇರುತ್ತದೆ. ಅದನ್ನು ಸಾಬೀತುಗೊಳಿಸುವ ವಾಟ್ಸಪ್ ಸಂದೇಶಗಳು ಪುಂಖಾನುಪುಂಕವಾಗಿ ಬಯಲಾಗಿವೆ. ಪುಲ್ವಾಮಾ ಸ್ಫೋಟದಲ್ಲಿ ನಲವತ್ತಕ್ಕೂ ಹೆಚ್ಚು ಸೈನಿಕರು ಸತ್ತರೆ, ಈತ ತಾನು ಬೆಂಬಲಿಸುವ ಪಕ್ಷ ಇದರಿಂದಾಗಿ ಕೆಲವೇ ದಿನಗಳಲ್ಲಿ ನಡೆಯಲಿದ್ದ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಸಂಭ್ರಮಿಸುತ್ತಾನೆ. ಬಾಲಾಕೋಟ ಮೇಲೆ ನಡೆದ ದಾಳಿಗೆ ಮೂರು ದಿನ ಮುನ್ನವೇ ಅತೀ ಗೌಪ್ಯ ಈ ವಿಷಯ ಈತನಿಗೆ ಗೊತ್ತಾಗಿ ಅದನ್ನು ಆಪ್ತರಲ್ಲಿ ಹಂಚಿಕೊಳ್ಳುತ್ತಾನೆ. ತನ್ನ ವಾಹಿನಿ ಅತ್ಯುತ್ತಮ ಎಂದ ಬಿಂಬಿಸುವ ಟಿಆರ್‍ಪಿ ಮಾಹಿತಿ ತಿದ್ದಲು ಲಕ್ಷಾಂತರ ಹಣ ಸಂದಾಯ ಮಾಡಿದ ವ್ಯಕ್ತಿ ಈತ. ಇದಕ್ಕೂ ಮುಂಚೆ, ಗುತ್ತಿಗೆದಾರರೊಬ್ಬನಿಂದ ಕೆಲಸ ಮಾಡಿಸಿಕೊಂಡು, ಆತನಿಗೆ ಹಣ ಪಾವತಿಸದೇ ಆತ ಮತ್ತು ಆತನ ತಾಯಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾದ ವ್ಯಕ್ತಿ ಈತನೇ. ಅದೇ ಸಮಯಕ್ಕೆ ಸಿನಿಮಾ ನಟನೊಬ್ಬನ ಮರಣಕ್ಕೆ ಸಂಭವಿಸಿದಂತೆ ದಿನಗಟ್ಟಲೇ ಕೃತಕ ಸಂತಾಪ ಸೂಚಿಸುತ್ತಾ ಬೊಬ್ಬಿಡುತ್ತಿದ್ದ ವ್ಯಕ್ತಿ ಕೂಡ ಈತನೇ. ಬಿಳುಪು ಬಿಳುಪಾಗಿ ತೋರುವ ವ್ಯಕ್ತಿಯ ಕಪ್ಪು ಮುಖ ಹೀಗೂ ಇರುತ್ತದೆ ಎಂದು ತಿಳಿದಾಗ ಎಂಥ ಸೋಜಿಗ ಅನಿಸುತ್ತದೆ ಅಲ್ಲವೇ!.

ಅದರಂತೆ ನಮ್ಮ ನೆರೆಯ ಆಂಧ್ರದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಾಗ ಜನರೆಲ್ಲ ಆತಂಕಕ್ಕೆ ಗುರಿ ಆಗಿದ್ದು ನೆನಪಿರಬಹುದು. ಕಳೆದ ವಾರವಷ್ಟೇ ನಡೆದ ಈ ಘಟನೆ ಹಿಂದೆ ಇರುವ ವ್ಯಕ್ತಿಗಳು ಯಾರು ಎಂದು ತಿಳಿದರೆ ಯಾರಾದರೂ ಬೆಚ್ಚಿ ಬೀಳಬೇಕಾಗುತ್ತದೆ. ಆ ರಾಜ್ಯದ ಪೊಲೀಸ ವರಿಷ್ಠರು ದಾಳಿ ಮಾಡಿದವರನ್ನು ಬಂಧಿಸಿ, ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಬಿಜೆಪಿ ಮತ್ತು ಟಿಡಿಪಿ ಕಾರ್ಯಕರ್ತರು ಇದನ್ನೆಲ್ಲ ಮಾಡಿದ್ದಾರೆಂದು ಬಯಲಾಗಿದೆ. ಅಧಿಕಾರಕ್ಕಾಗಿ ನಮ್ಮ ದೇವಾಲಯಗಳ ಮೇಲೆಯೇ ದಾಳಿ ಮಾಡಿ, ನಮ್ಮ ನಮ್ಮ ನಡುವೆಯೇ ಬೆಂಕಿ ಹಚ್ಚುವ ಈ ಜನರಿಗೆ ಅಧಿಕಾರ ಸಿಕ್ಕಾಗ ಏನೇನು ಮಾಡಬಹುದು ಎಂದು ಎಲ್ಲರಿಗೂ ತಿಳಿದ ವಿಷಯ. ಅದಕ್ಕಾಗಿ ಯಾವ ಕೊಲೆ, ಸುಲಿಗೆ, ದರೋಡೆಗೂ ಹೇಸದ ಜನರ ಕುರಿತೇ ಆರ್.ಎಲ್. ಸ್ಟೀವನ್ಸನ್ ಶತಮಾನದ ಹಿಂದೆ ಕತೆ ಬರೆದು ಎಚ್ಚರಿಸಿದ್ದಾನೆ

ಈಗಲಾದರೂ ಜನ ಕಪ್ಪು ಮನಸ್ಸಿನ ಬಿಳಿ ವ್ಯಕ್ತಿಗಳನ್ನು ಗುರುತಿಸಿ ಏನೇನು ಮಾಡಬೇಕೋ ಅದನ್ನು ಮಾಡಿದರೆ ಮಾತ್ರ ನಾವು ಬಚಾವು ಮತ್ತು ನಮ್ಮ ದೇಶ ಸುರಕ್ಷಿತ.

LEAVE A REPLY

Please enter your comment!
Please enter your name here

State

11 ತಿಂಗಳಲ್ಲಿ ಮೊದಲ ಬಾರಿಗೆ ಕೊರೋನಾ ಇಲ್ಲ

ಬೆಳಗಾವಿ: 22- ಕಳೆದ ಮಾರ್ಚ ತಿಂಗಳಲ್ಲಿ ದೇಶಕ್ಕೆ ಒಕ್ಕರಿಸಿದ ಕೊರೋನಾ ಮಹಾಮಾರಿ ಬೆಳಗಾವಿ ಜಿಲ್ಲೆಯನ್ನೂ ಇನ್ನಿಲ್ಲದಂತೆ ಕಾಡಿತ್ತು. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ದಿನವೊಂದಕ್ಕೆ ಸರಾಸರಿ 500 ರ ಗಡಿ ದಾಟುತ್ತಿದ್ದ ಸೋಂಕಿತರ...

ವಿವಾಹ ಸಮಾರಂಭಗಳಿಗೆ ಕಾವಲು; ದಂಡ ಬೀಳುತ್ತೆ ಹುಷಾರ್…!!

ಬೆಂಗಳೂರು: ಫೆ 22 - ಕೋವಿಡ್ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಆರೋಗ್ಯ ಇಲಾಖೆ ಇನ್ನುಮುಂದೆ ವಿವಾಹ ಸಮಾರಂಭಗಳಿಗೆ ಮಾರ್ಷಲ್ ಗಳನ್ನು ನಿಗಾವಹಿಸಲು ನೇಮಕ ಮಾಡಲಿದ್ದು ನಿಯಮ ಮೀರಿದರೆ ಸ್ಥಳದಲ್ಲೇ ದಂಡ ಬೀಳಲಿದೆ ಎಂದು...

ಒಡೆಯಿತು ಸಹನೆಯ ಕಟ್ಟೆ; ಯತ್ನಾಳ ಉಚ್ಚಾಟಿಸಲು ಯಡಿಯೂರಪ್ಪ ಆಗ್ರಹ

ಬೆಂಗಳೂರು: 22- ಪಕ್ಷದ ಆದೇಶ ಹಾಗು ಶಿಸ್ತು ಉಲ್ಲಂಘಿಸಿ ತಮ್ಮ ಹಾಗೂ ಕುಟುಂಬದ ವಿರುದ್ದ ಟೀಕೆ ಮಾಡುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಉಚ್ಛಾಟಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಆಗ್ರಹಿಸಿ ಈ...

ಮಾದಕ ವಸ್ತು ಮಾರಾಟ: ಮಹಾರಾಷ್ಟ್ರ ವ್ಯಕ್ತಿ ಬಂಧನ

ಬೆಳಗಾವಿ: 22- ಇತ್ತೀಚೆಗೆ ಮಾದಕ ವಸ್ತು ಮತ್ತು ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ದಾಳಿ ಮಾಡುತ್ತಿರುವ ಬೆಳಗಾವಿ ಸಿಸಿಬಿ ಪೊಲೀಸರು ಗಾಂಜಾ ಮಾರಾಟ ಮಾಡಲು ಮಹಾರಾಷ್ಟ್ರದಿಂದ ಆಗಮಿಸಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ಅವನಿಂದ...

National

ಮುಂಬೈ ಹೋಟೆಲ್ ನಲ್ಲಿ ಸಂಸದ ಮೋಹನ ದೇಲ್ಕರ ಆತ್ಮಹತ್ಯೆ?

ನವದೆಹಲಿ: ಫೆ 22 - ದಾದ್ರಾ ಮತ್ತು ನಗರ ಹವೇಲಿ ಸಂಸದ ಮೋಹನ ದೇಲ್ಕರ ಮುಂಬೈನ ಹೋಟೆಲ್ ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೋಹನ್...

ಡಾ. ವರವರ ರಾವ್ ಗೆ ಕೊನೆಗೂ ಜಾಮೀನು

ಮಂಬೈ: ಫೆ 22 - ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯಾಗಿರುವ 81 ವರ್ಷದ ತೆಲುಗು ಕವಿ ಡಾ. ವರವರ ರಾವ್ ಅವರಿಗೆ ವೈದ್ಯಕೀಯ ಆಧಾರದ ಮೇಲೆ ಬಾಂಬೆ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು...

ಮಹದಾಯಿ ವಿವಾದ; ಮೇಲುಸ್ತುವಾರಿ ಸಮಿತಿ ರಚನೆಗೆ ಸುಪ್ರೀಮ ಕೋರ್ಟ ಸೂಚನೆ

ನವದೆಹಲಿ: ಫೆ 22- ಮಹದಾಯಿ ನದಿ ನೀರು ಹಂಚಿಕೆಯ ಮೇಲುಸ್ತುವಾರಿಗೆ ಸಮಿತಿ ರಚಿಸಲು ಸುಪ್ರೀಮ ಕೋರ್ಟ ಸೂಚನೆ ನೀಡಿದೆ. ಕರ್ನಾಟಕ ಸರ್ಕಾರ ಮಲಪ್ರಭಾದ ನೀರಿನ ಹರಿವನ್ನು ತಿರುಗಿಸುತ್ತಿದೆ ಎಂದು ಗೋವಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ...

ಮುಂಬೈಯಲ್ಲಿ ಇವೇನಾ ಅಚ್ಛೆ ದಿನ್ ಬ್ಯಾನರ್

ಮುಂಬೈ, 22- ದೇಶದಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ದರಕ್ಕೆ ತಲುಪಿರುವದರಿಂದ ಶಿವಸೇನೆಯ ಯುವ ವಿಭಾಗವಾದ ಯುವಸೇನೆಯು ಸೋಮವಾರ ಮುಂಬೈ ನಗರದ ಹಲವಾರು ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್, ಡಿಸೆಲ್ ದರ ಬರೆದು ಇದೇನಾ...

International

ಧ್ವಂಸಗೊಂಡ ಹಿಂದೂ ದೇವಾಲಯ ಕೂಡಲೇ ನಿರ್ಮಾಣಕ್ಕೆ ಪಾಕ್ ಕೋರ್ಟ ಆದೇಶ

ಇಸ್ಲಾಮಾಬಾದ: 9- ದುಷ್ಕರ್ಮಿಗಳಿಂದ ಧ್ವಂಸಗೊಂಡಿರುವ ಶತಮಾನಗಳ ಇತಿಹಾಸ ಹೊಂದಿದ್ದ ಹಿಂದೂ ದೇವಾಲಯವನ್ನು ಕೂಡಲೇ ಪುನರ್ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಪಾಕಿಸ್ತಾನ ಸುಪ್ರೀಮ ಕೋರ್ಟ ಆದೇಶಿಸಿದೆ. ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಸಮಯದ ಬಗ್ಗೆ...

ಕೋವಿಡ್ ರೋಗಿಗಳಿಗೆ ಕ್ಷಯರೋಗದ ಅಪಾಯವಿದೆ : ರಶಿಯಾ

ಮಾಸ್ಕೊ, ಫೆ 08- ಕೊರೋನಾ ವೈರಸ್ ಸೋಂಕಿಗೆ ಒಳಗಾದ ರೋಗಿಗಳಿಗೆ ಕ್ಷಯರೋಗ ಬರುವ ಸಾಧ್ಯತೆ ಹೆಚ್ಚು ಎಂದು ರಷ್ಯಾದ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. "ಕೋವಿಡ್ -19 ನಿಂದ ಬಳಲಿದ ನಂತರ ಅನೇಕ ರೋಗಿಗಳು ಶ್ವಾಸಕೋಶದಲ್ಲಿ...

ಬಂಗಾರದ ನಾಲಿಗೆಯ “ಮಮ್ಮಿ”

ಕೈರೋ, 3- ಸತ್ತ ನಂತರ ಮತ್ತೊಂದು ಜೀವನವಿದೆ ಎಂದು ನಂಬಿದ್ದ ಪುರಾತನ ಕಾಲದ ಈಜಿಪ್ತ ನಾಗರಿಕರು ಕೆಡಬಾರದೆಂದು ಶವಗಳಿಗೆ ದ್ರಾವಣ ಹಚ್ಚಿಡುತ್ತಿದ್ದರು. ಹಾಗೆಯೇ ಅವರ ಮತ್ತೊಂದು ಜೀವನಕ್ಕೆ ಬೇಕಾಗುತ್ತದೆಯೆಂದು ಸಾಕಷ್ಟು ಚಿನ್ನವನ್ನು ಶವ...

ಆಂಗ್ ಸಾನ್ ಸೂಕಿ ಬಂಧನ, ಮ್ಯಾನ್ಮಾರ್ ನಲ್ಲಿ ತುರ್ತು ಪರಿಸ್ಥಿತಿ

ಮಾಸ್ಕೋ ಫೆಬ್ರವರಿ 1 - ಮ್ಯಾನ್ಮಾರ್‌ನ ರಾಜಕೀಯ ನಾಯಕಿ ಆಂಗ್ ಸಾನ್ ಸೂಕಿ ಹಾಗೂ ಅಧ್ಯಕ್ಷ ವಿನ್ ಮೈಂಟ್ ಅವರನ್ನು ಬಂಧಿಸಲಾಗಿದೆ ಎಂದು ರಾಯಿಟರ್ಸ್ ವರದಿ ಸೋಮವಾರ ಮಾಡಿದೆ. ದೇಶದ ಆಡಳಿತ ಪಕ್ಷದ ಇತರ...

Entertainment

ಇಂದು ಧಾರವಾಡದಲ್ಲಿ ಬೆಳವಡಿ ಮಲ್ಲಮ್ಮ ನಾಟಕ

ಧಾರವಾಡ: 14- ಹುಬ್ಬಳ್ಳಿಯ ಜೀವಿ ಕಲಾ ಬಳಗದ ಅಧ್ಯಕ್ಷರಾದ ಗದಿಗೆಯ್ಯಾ ಹಿರೇಮಠ ಅವರು ರಚಿಸಿ ನಿರ್ದೇಶಿಸಿದ ಐತಿಹಾಸಿಕ " ಸಮರ ಸಿಂಹಿಣಿ ಬೆಳವಡಿ ಮಲ್ಲಮ್ಮ" ನಾಟಕವು ರವಿವಾರ ದಿ ೧೪- ೨ -೨೦೨೧ ರಂದು ಪ್ರದರ್ಶನಗೊಳ್ಳಲಿದೆ. ಬೆಳವಡಿಯ ನೇತಾಜಿ ತರುಣ...

ಮಾರುಕಟ್ಟೆ ಗಿಜಿಗುಡುವಾಗ ಚಿತ್ರಮಂದಿರವೇಕೆ ಖಾಲಿ?

ಬೆಂಗಳೂರು, ಫೆ 03- “ಬಸ್ ಫುಲ್, ಮಾರ್ಕೆಟ್ ಗಿಜಿ ಗಿಜಿ ಆದರೆ ಚಿತ್ರ ಮಂದಿರಗಳೇಕೆ ಭಣಗುಡಬೇಕು” ಎಂದು ನಟ ಧ್ರುವ ಸರ್ಜಾ ಮಾಡಿರುವ ಟ್ವೀಟ್ ಗೆ ಕನ್ನಡ ಚಿತ್ರರಂಗದ ಬಹುತೇಕ ನಟ, ನಿರ್ದೇಶಕರು...

ಜ. 24ರಂದು ವರುಣ ಧವನ್-ನತಾಶಾ ಮದುವೆ

ಮುಂಬೈ, ಜ 15 - ಖ್ಯಾತ ನಿರ್ಮಾಪಕ, ನಿರ್ದೇಶಕ ಡೇವಿಡ್ ಧವನ ಪುತ್ರ ನಟ ವರುಣ ಧವನ್ ಅವರು ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೇ...

‘ಲಂಕಾಸುರ’ ಚಿತ್ರಕ್ಕೆ ಚಾಲನೆ

ಬೆಂಗಳೂರು, ಜ 15 - ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮದಂದು ವಿನೋದ ಪ್ರಭಾಕರ ಹಾಗೂ ಲೂಸ್ ಮಾದ ಅಭಿನಯದ ‘ಲಂಕಾಸುರ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ...

Sports

ಭಾರತಕ್ಕೆ 317 ರನ್ ಜಯ

ಚೆನ್ನೈ, ಫೆ 16- ಭಾರತದ ಬಲಿಷ್ಠ ಸ್ಪಿನ್ ಕೋಟೆಯನ್ನು ಭೇದಿಸುವಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ವಿಫಲವಾಗಿದ್ದು, ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಪಡೆ 1-1 ರಿಂದ ಸಮಬಲ ಸಾಧಿಸಿದೆ. ನಿರೀಕ್ಷೆಯಂತೆ ಮಂಗಳವಾರ ಭಾರತ...

ಗೆಲುವಿನ ಹೊಸ್ತಿಲಲ್ಲಿ ಭಾರತ

ಚೆನ್ನೈ: ಫೆ 15 - ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅವರ ಶತಕ ಹಾಗೂ ನಾಯಕ ವಿರಾಟ ಕೊಹ್ಲಿ ಅವರ ಅರ್ಧ ಶತಕದ ನೆರವಿನಿಂದ ಭಾರತ ನೀಡಿದ 482 ರನ್ ಗೆಲುವಿನ ಗುರಿ...

ಚೆನ್ನೈ ತಲುಪಿದ ಇಂಗ್ಲೆಂಡ್ ಕ್ರಿಕೆಟ್ ತಂಡ

ನವದೆಹಲಿ, ಜ.24 - ಫೆಬ್ರವರಿ 5 ರಿಂದ ಭಾರತ ವಿರುದ್ಧದ ಟೆಸ್ಟ್ ಸರಣಿಗಾಗಿ ವೇಗದ ಬೌಲರ್ ಜೋಫ್ರಾ ಆರ್ಚರ್, ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಬ್ಯಾಟ್ಸ್‌ಮನ್ ರೋರಿ ಬರ್ನ್ಸ್ ಮತ್ತು ಜೊನಾಥನ್ ಟ್ರಾಟ್ ಸೇರಿದಂತೆ...

ರಹಾನೆ ಮತ್ತು ಇತರ ಆಟಗಾರರಿಗೆ ಕ್ವಾರಂಟೈನ್ ವಿನಾಯಿತಿ

ನವದೆಹಲಿ, ಜ.21- ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಗೆದ್ದು ಗುರುವಾರ ಬೆಳಿಗ್ಗೆ ಮುಂಬೈಗೆ ಮರಳಿದ ನಾಯಕ ಅಜಿಂಕ್ಯ ರಹಾನೆ ಮತ್ತು ಇತರ ನಾಲ್ಕು ಭಾರತೀಯ ಆಟಗಾರರಿಗೆ ಮಹಾರಾಷ್ಟ್ರ ಸರ್ಕಾರ ಕ್ವಾರಂಟೈನ್ ನಿಂದ ವಿನಾಯಿತಿ...