ರಾಮದುರ್ಗ, 19- ತಂದೆ ಮತ್ತು ತಾಯಿ ತಮ್ಮ ಇಬ್ಬರು ಮಕ್ಕಳಿಗೆ ಕ್ರಿಮಿನಾಶಕ ದ್ರಾವಣ ಕುಡಿಸಿ ತಾವೂ ಕುಡಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ರಾಮದುರ್ಗ ಪಟ್ಟಣದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.
ಪ್ರವೀಣ ರಮೇಶ ಶೆಟ್ಟರ (37) ಮತ್ತು ಅವರ ಪತ್ನಿ ರಾಜೇಶ್ವರಿ (27) ತಮ್ಮ ಮಕ್ಕಳಾದ ಅಮೃತಾ (8), ಅದ್ವಿಕ (6) ಅವರಿಗೆ ಮೊದಲು ಕ್ರಿಮಿನಾಶಕದ ದ್ರಾವಣ ಕುಡಿಸಿ ನಂತರ ತಾವೂ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಶಾಸಕ ಮಹಾದೇವಪ್ಪ ಯಾದವಾಡ, ಸಿ.ಪಿ.ಐ ಶಶಿಕಾಂತ ವರ್ಮಾ ಭೇಟಿ ನೀಡಿ ಪರಿಶೀಲಿಸಿದರು.
ತನಿಖೆ ನಡೆಯುತ್ತಿದೆ.