ಬೆಂಗಳೂರು, ಜ 19- ರೋಮ್ಯಾಂಟಿಕ್ ಕಾಮಿಡಿ ಹಾಗೂ ಸಸ್ಪೆನ್ಸ ಕಥೆ ಹೊಂದಿರುವ ‘ಲಡ್ಡು’ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ. ಹೊಸಬರ ವಿಭಿನ್ನ ಪ್ರಯತ್ನವಾದ ಈ ಚಿತ್ರಕ್ಕೆ ಆರ್.ರಮಾನಂದ ಆ್ಯಕ್ಷನ್ ಕಟ್ ಹೇಳಿದ್ದು, ಐವರು ಯುವಕರು ಹಾಗೂ ಒಬ್ಬ ಯುವತಿಯ ಸುತ್ತ ನಡೆಯುವ ಘಟನೆಗಳನ್ನು ಒಳಗೊಂಡಿದೆ.
ಈಗಾಗಲೇ ವೈರಲ್ ಆಗಿರುವ ಟ್ರೈಲರ್ ಚಿತ್ರದ ಮೇಲಿನ ಭರವಸೆಯನ್ನು ಹೆಚ್ಚಿಸಿದ್ದು
ಇದೇ ಮೊದಲ ಬಾರಿಗೆ ಮೇಘನಾ ವಿ. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಹರ್ಷಿತ, ನವೀನ, ಸಮೀರ ನಗರದ, ಮಧು ಮತ್ತು ವಿಶಾಲ ಐವರು ನಾಯಕರಾಗಿ, ಬಿಂದುಶ್ರೀ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ
ಪಾರು ಖ್ಯಾತಿಯ ಪವಿತ್ರಾ ಬಿ. ನಾಯಕ, ಮಂಜುಳಾ ರೆಡ್ಡಿ, ರಾಕ್ಲೈನ್ ಸುಧಾಕರ ಬಣ್ಣ ಹಚ್ಚಿದ್ದಾರೆ.
ಮೂರು ಹಾಡುಗಳಿಗೆ ನಂದು ತಿಪ್ಪು ಸಂಗೀತ ಸಂಯೋಜನೆ ಮಾಡಿದ್ದು, ಪುರುಷೋತ್ತಮ ಕ್ಯಾಮೆರಾ ಕೆಲಸ ನಿಭಾಯಿಸಿದ್ದಾರೆ. ನಿಖಿಲ ಸಂಭಾಷಣೆ ರಚಿಸಿದ್ದಾರೆ.