ಹೊಸದಿಲ್ಲಿ, ಜ 20- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ರೈತರು ನಡೆಸಲಿರುವ ಟ್ರ್ಯಾಕ್ಟರ್ ಮೆರವಣಿಗೆಗೆ ಅನುಮತಿ ನೀಡುವ ಬಗ್ಗೆ ಸುಪ್ರೀಮ ಕೋರ್ಟ ಬುಧವಾರ ಅಭಿಪ್ರಾಯ ವ್ಯಕ್ತಪಡಿಸಿದ್ದು
ಈ ಟ್ರಾಕ್ಟರ್ ಮೆರವಣಿಗೆ ಬಗ್ಗೆ ತಾವು ಯಾವುದೇ ಆದೇಶಗಳನ್ನು ಜಾರಿ ಮಾಡುವುದಿಲ್ಲ ಎಂದು ಕೋರ್ಟ ಸ್ಪಷ್ಟಪಡಿಸಿದೆ.
ಈ ಟ್ರಾಕ್ಟರ್ ಮೆರವಣಿಗೆಗೆ ಅವಕಾಶ ನೀಡಬೇಕೇ ಅಥವಾ ಬೇಡವೇ ? ಎಂಬುದನ್ನು ಪೊಲೀಸರು ನಿರ್ಧರಿಸಬೇಕು ಎಂದು ಸ್ಪಷ್ಟಪಡಿಸಿದೆ.
ಗಣರಾಜ್ಯೋತ್ಸವದಂದು ಟ್ರಾಕ್ಟರ್ ಮೆರವಣಿಗೆಗೆ ರೈತ ಸಂಘಗಳು ಕರೆ ನೀಡಿವೆ. ಈ ಮೆರವಣಿಗೆಗೆ ಅನುಮತಿ ನೀಡಬೇಕೆಂದು ರೈತರು ಸುಪ್ರೀಮ ಕೋರ್ಟ ಮೆಟ್ಟಿಲು ಏರಿದ್ದರು.
ಆದರೆ ಈ ಬಗ್ಗೆ ಬುಧವಾರ ಸುಪ್ರೀಂ ಕೋರ್ಟ , ಕೇಂದ್ರ ಸರ್ಕಾರ ಸಲ್ಲಿಸಿದ ಮನವಿಗಳು, ರೈತ ಸಂಘಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿ, ಈ ಸಂದರ್ಭದಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ಯಾವುದೇ ರ್ಯಾಲಿಯಾಗಲಿ ಅಥವಾ ಮೆರವಣಿಗೆಗಳಿಗೆ ಅನುಮತಿಸಬೇಕೇ? ಬೇಡವೇ ? ಎಂಬ ವಿಷಯದಲ್ಲಿ ಆದೇಶ ನೀಡುವುದು ಅನ್ಯಾಯವೆಂದು ನಾವು ಪರಿಗಣಿಸುತ್ತೇವೆ. ಇದನ್ನು ಪೊಲೀಸ್ ಇಲಾಖೆ ನಿರ್ಧರಿಸಬೇಕಾದ ವಿಷಯ. ಅನುಮತಿಸಬೇಕೇ? ಅಥವಾ ಬೇಡವೇ ? ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆ. ಈ ಕುರಿತು ನಾವು ಯಾವುದೇ ಆದೇಶಗಳನ್ನು ನೀಡುವುದಿಲ್ಲ ”ಎಂದು ಸುಪ್ರೀಮ ಕೋರ್ಟ ತಿಳಿಸಿದೆ.