INDIA COVID-19 Statistics

11,063,491
Confirmed Cases
Updated on 26/02/2021 7:11 AM
155,950
Total active cases
Updated on 26/02/2021 7:11 AM
156,861
Total deaths
Updated on 26/02/2021 7:11 AM
Friday, February 26, 2021

INDIA COVID-19 Statistics

11,063,491
Total confirmed cases
Updated on 26/02/2021 7:11 AM
155,950
Total active cases
Updated on 26/02/2021 7:11 AM
156,861
Total deaths
Updated on 26/02/2021 7:11 AM
10,750,680
Total recovered
Updated on 26/02/2021 7:11 AM
Home State Bengaluru ಸಚಿವರಿಗೆ ಖಾತೆ ಹಂಚಿಕೆ,10 ಸಚಿವರ ಖಾತೆ ಬದಲಾವಣೆ

ಸಚಿವರಿಗೆ ಖಾತೆ ಹಂಚಿಕೆ,10 ಸಚಿವರ ಖಾತೆ ಬದಲಾವಣೆ

ಬೆಂಗಳೂರು,ಜ 21- ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ ಜೊತೆಗೆ 10 ಸಚಿವರ ಖಾತೆಗಳನ್ನು ಬದಲಾವಣೆ ಮಾಡುವ ಮೂಲಕ ಪ್ರಬಲ ಖಾತೆಗಳ ಮೇಲೆ ಕಣ್ಣಿಟ್ಟಿದ್ದ ಪ್ರಮುಖರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಶಾಕ್ ನೀಡಿದ್ದಾರೆ.

ಜನವರಿ 13 ರಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 7 ಜನ ಸಚಿವರಿಗೆ ಬೆಂಗ ಳೂರು ನಗರಾಭಿವೃದ್ದಿ,ಇಂಧನ ಸೇರಿದಂತೆ ಪ್ರಮುಖ ಖಾತೆ ಗಳನ್ನು ಹಂಚಿಕೆ ಮಾಡುತ್ತಾರೆಂಬ ಭರವಸೆ ಹೊಂದಿದ್ದರು.ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಬಳಿ ಇರುವ ಪ್ರಮುಖ ಖಾತೆಗಳನ್ನು ಬಿಟ್ಟು ಕೊಡದೆ ಹಾಲಿ ಸಚಿವರ ಖಾತೆಗಳನ್ನೆ ಅದಲು ಬದಲು ಮಾಡಿ ಎಲ್ಲರ ಮೇಲೆ ತಮ್ಮ ಹಿಡಿತ ಮತ್ತು ಪ್ರಭಾವ ಹೇರುವ ಪ್ರಯತ್ನ ನಡೆಸಿದ್ದಾರೆ

ನಿನ್ನೆ ಸಂಜೆ ಖಾತೆ ಹಂಚಿಕೆ ಪಟ್ಟಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ರಾಜಭವನಕ್ಕೆ ರವಾನಿಸಿದ್ದರು.ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ,ಹಲ ವಾರು ಸಚಿವರ ಖಾತೆ ಬದ ಲಾವಣೆ ಮಾಡುವ ಮೂಲಕ ಬಿಜೆಪಿಯಲ್ಲಿ ಭಿನ್ನಮತ,ಅಸಮಾಧಾನಕ್ಕೆ ಕಾರಣವಾಗಿದೆ.ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡು ರಾಜ್ಯಭವನಕ್ಕೆ ರವಾನಿಸಿರುವ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಯಾರಿಗೆ ಯಾವ ಖಾತೆ,ಯಾರ ಖಾತೆಗಳು ಬದಲಾಗಿವೆ :
ಉಮೇಶ್ ಕತ್ತಿ – ಆಹಾರ ಮತ್ತು ನಾಗರಿಕ ಪೂರೈಕೆ ಈ ಖಾತೆ ಮೊದಲು ಕೆ. ಗೋಪಾಲಯ್ಯಬಳಿ ಇತ್ತು
ಅಂಗಾರ- ಮೀನುಗಾರಿಕೆ ಬಂದರು,ಒಳನಾಡು ಜಲ ಸಾರಿಗೆ ಇಲಾಖೆ ಹಂಚಿಕೆ.ಈ ಖಾತೆ ಹಿಂದೆ ಕೋಟಾ ಶ್ರೀನಿವಾಸ ಪೂಜಾರಿ ಬಳಿ ಇತ್ತು.
ಬಸವರಾಜ ಬೊಮ್ಮಾಯಿ-ಗೃಹ ಸಚಿವರಿಗೆ ಹೆಚ್ಚುವರಿಯಾಗಿ ಕಾನೂನು, ಸಂಸದೀಯ ವ್ಯವಹಾರ ಹಂಚಿಕೆ ಈ ಹಿಂದೆ ಜೆ.ಸಿ.ಮಾಧುಸ್ವಾಮಿ ಬಳಿ ಇತ್ತು.

ಜೆ.ಸಿ.ಮಾಧುಸ್ವಾಮಿಗೆ -ವೈದ್ಯಕೀಯ ಶಿಕ್ಷಣ,ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಂಚಿಕೆ ಈ ಮೊದಲು ಡಾ.ಸುಧಾಕರ್ ಬಳಿಕ ವೈದ್ಯಕೀಯ ಶಿಕ್ಷಣ,ಸಿ.ಟಿ.ರವಿ ರಾಜೀನಾಮೆಯಿಂದ ಮುಖ್ಯಮಂತ್ರಿ ಬಳಿ ಇದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಹಂಚಿಕೆ ಮಾಡಿದ್ದಾರೆ.
ಸಿಸಿ ಪಾಟೀಲ ಖಾತೆ ಬದಲಾವಣೆ ಮಾಡಿದ್ದು ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆಯನ್ನು ಹಂಚಿಕೆ ಮಾಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಬಳಿ ವಾರ್ತಾ ಇಲಾಖೆ ಖಾತೆ ಇತ್ತು.

ಅರವಿಂದ ಲಿಂಬಾವಳಿ -ಅರಣ್ಯ ಖಾತೆ ಹಂಚಿಕೆ ಮಾಡಲಾಗಿದೆ.ಈ ಮೊದಲು ಆನಂದ್ ಸಿಂಗ್ ಬಳಿ ಈ ಖಾತೆ ಇತ್ತು.ಬೆಂಗಳೂರು ನಗರಾಭಿವೃದ್ದಿ,ಗೃಹ, ಬೇರೆ ಖಾತೆ ಮೇಲೆ ಕಣ್ಣಿಟ್ಟಿದ್ದ ಲಿಂಬಾವಳಿಗೆ ನೀಡಿದ್ದಾರೆ.

ಮುರಗೇಶ್ ನಿರಾಣಿಗೆ-ಗಣಿ ಮತ್ತು ಭೂ ವಿಜ್ಞಾನ ಖಾತೆ ಹಂಚಿಕೆ ಮಾಡಲಾಗಿದೆ.ಈ ಹಿಂದೆ ಸಿ.ಸಿ.ಪಾಟೀಲ್ ಬಳಿಕ ಖಾತೆ ಇತ್ತು.
ಎಂಟಿಬಿ ನಾಗರಾಜ್ ಗೆ-ಅಬಕಾರಿ ಇಲಾಖೆ ಹಂಚಿಕೆ ಮಾಡಿದ್ದಾರೆ.ಎಚ್.ನಾಗೇಶ್ ರಾಜೀನಾಮೆಯಿಂದ ಖಾಲಿ ಯಾಗಿದ್ದ ಖಾತೆಯನ್ನು ಇವರಿಗೆ ನೀಡಲಾಗಿದೆ.

ಕೋಟಾ ಶ್ರೀನಿವಾಸ ಪೂಜಾರಿ- ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ.ಸಚಿವ ರಾಮುಲುಗೆ ನೀಡಿದ್ದ ಒಬಿಸಿ ಖಾತೆಯನ್ನು ವಾಪಸ್ ಪಡೆದು ತಮ್ಮ ಬಳಿಯೇ ಹೊಂದಿದ್ದ ಸಿಎಅದನ್ನು ಕೋಟಾ ಶ್ರೀನಿವಾಸ ಪೂಜಾರಿಗೆ ಮೀನುಗರಿಕೆ ಬದಲಾಗಿ ನೀಡಿದ್ದಾರೆ.

ಡಾ.ಸುಧಾಕರ್ ಗೆ-ಆರೋಗ್ಯ ಇಲಾಖೆ ಖಾತೆಯನ್ನು ಉಳಿಸಿ ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣವನ್ನು ಹಿಂಪಡೆದು ಜೆ.ಸಿ.ಮಾಧುಸ್ವಾಮಿಗೆ ಹಂಚಿಕೆ ಮಾಡಿದ್ದಾರೆ

ಆನಂದ್ ಸಿಂಗ್ – ಪ್ರವಾಸೋದ್ಯಮ, ಹಾಗೂ ಪರಿಸರ ಇಲಾಖೆ ಹಂಚಿಕೆ ಮಾಡಲಾಗಿದಅವರ ಬಳಿ ಇದ್ದ ಖಾತೆಯನ್ನು ಅರವಿಂದ ಲಿಂಬಾವಳಿಗೆ ಹಂಚಿಕೆ ಮಾಡಿದ ಹಿನ್ನಲೆಯಲ್ಲಿ ಸಿ.ಟಿ.ರವಿ ರಾಜೀನಾಮೆಯಿಂದ ಖಾಲಿ ಇದ್ದ ಪ್ರವಾಸೋದ್ಯಮ ಹಾಗೂ ತಮ್ಮ ಬಳಿಕ ಇದ್ದ ಪರಿಸರ ಇಲಾಖೆಯನ್ನು ಹಂಚಿಕೆ ಮಾಡಿದ್ದಾರೆ.

ಸಿ.ಪಿ.ಯೋಗೀಶ್ವರ್ – ಸಣ್ಣ ನೀರಾವರಿ ಇಲಾಖೆ ಹಂಚಿಕೆ ಮಾಡಿದ್ದಾರೆ.ಜೆ.ಸಿ.ಮಾಧುಸ್ವಾಮಿ ಬಳಿ ಇದ್ದ ಖಾತೆಯನ್ನು ಯೋಗೀಶ್ವರ್ ಹಂಚಿಕೆ ಮಾಡಿದ್ದಾರೆ.

ಪ್ರಭು ಚೌವ್ಹಾಣ್- ಪಶು ಸಂಗೋಪನೆ ಇಲಾಖೆ ಮುಂದುವರೆಸಿ ಅಲ್ಪಸಂಖ್ಯಾತ ಮತ್ತು ವಕ್ಫ್ ಖಾತೆಯನ್ನು ಹಿಂಪಡೆದಿದ್ದಾರೆ.

ಅರಬೈಲು ಶಿವರಾಂ ಹೆಬ್ಬಾರ್ ;ಕಾರ್ಮಿಕ ಇಲಾಖೆ ಖಾತೆ ಉಳಿದ ಸಕ್ಕರೆ ಖಾತೆಯನ್ನು ಹಿಂಪಡೆದು ಗೋಪಾಲಯ್ಯ ಹಂಚಿಕೆ ಮಾಡಲಾಗಿದೆ.
ಆರ್.ಶಂಕರ್- ಪೌರಾಡಳಿತ,ರೇಷ್ಮೆ ಇಲಾಖೆಯನ್ನು ಹಂಚಿಕೆ ಮಾಡಲಾಗಿದೆ.ಈ ಎರಡು ಖಾತೆಗಳು ನಾರಾಯಣಗೌಡರ ಬಳಿ ಇತ್ತು.ಅವನ್ನು ಹಿಂಪಡೆದು ಇವರಿಗೆ ನೀಡಲಾಗಿದೆ.

ಗೋಪಾಲಯ್ಯ –ತೋಟಗಾರಿಕೆ ಇಲಾಖೆ,ಸಕ್ಕರೆ ಖಾತೆಯನ್ನು ಆಹಾರ ನಾಗರೀಕ ಸರಬರಾಜು ಬದಲಾಗಿ ನೀಡಲಾಗಿದೆ.

ಕೆ.ಸಿ.ನಾರಾಯಣ ಗೌಡರಿಗೆ- ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಹಜ್ ಮತ್ತು ವಕ್ಫ್ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

ಬಹುತೇಕ ವಲಸಿಗ ಸಚಿವರಿಗೆ ನೀಡಲಾಗಿದ್ದ ಖಾತೆಗಳನ್ನು ಹಿಂಪಡೆದು ನೂತನ ಸಚಿವರಿಗೆ ಹಂಚಿಕೆ ಮಾಡಲಾಗಿದೆ.ಮೊದಲ ಬಾರಿ ಸಚಿವರಾದ ವಲಸಿಗರ ಖಾತೆಗಳನ್ನು ಎರಡನೆ ಹಂತದಲ್ಲಿ ಸಚಿವರಾದ ವಲಸಿಗರಿಗೆ ನೀಡುವ ಮೂಲಕ ಅವರವರಲ್ಲಿಯೇ ಕಿತ್ತಾಟಕ್ಕೆ ಅವಕಾಶ ಕಲ್ಪಿಸಿದ್ದಾರೆ.ಮೂಲ ಬಿಜೆಪಿಗರಲ್ಲಿ ಗೃಹ ಸಚಿವ ಬಸವಾರ್ ಬೊಮ್ಮಾಯಿಗೆ ಮಾತ್ರ ಹೆಚ್ಚುವರಿ ಖಾತೆ ಲಭ್ಯವಾದೆ.ಉಳಿದಂತೆ ಪ್ರಮುಖ ಮೂಲ ಬಿಜೆಪಿ ಸಚಿವರ ಖಾತೆಗಳನ್ನು ಬದಲಾವಣೆ ಮಾಡಿಲ್ಲ.

ಜೆ.ಸಿ.ಮಾಧುಸ್ವಾಮಿಹಾಗೂ ಕೆ.ಸಿ.ನಾರಾಯಣಗೌಡ,ಗೋಪಾಲಯ್ಯ ಅವರ ಖಾತೆಗಳನ್ನು ಸಂಪೂರ್ಣ ಬದಲಾಗಿರುವುದು ವಿಶೇಷ

LEAVE A REPLY

Please enter your comment!
Please enter your name here

State

ತಹಸೀಲ್ದಾರ ಕೊಲೆ ಯತ್ನ : ತಂದೆ, ಮಗ ಬಂಧನ

ಜಮಖಂಡಿ: 25- ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ತಹಶೀಲ್ದಾರ ನಾಗಪ್ಪ ಬಿರಾಡಿಯವರನ್ನು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದ ತಂದೆ ಹಾಗು ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ ಕಿತ್ತೂರು ಹಾಗು ಬಸವರಾಜ ಕಿತ್ತೂರು ಬಂಧಿತರು....

ಬೆಳಗಾವಿಗೆ ಬಂದವು ಮೂರು ಸಿಂಹಗಳು

ಬೆಳಗಾವಿ: 25- ಇಲ್ಲಿನ ಭೂತರಾಮನಹಟ್ಟಿ ಬಳಿಯ ರಾಣಿ ಚನ್ನಮ್ಮಾ ಪ್ರಾಣಿ ಸಂಗ್ರಹಾಲಯಕ್ಕೆ ಗುರುವಾರ ಮೂರು ಸಿಂಹಗಳು ಬಂದಿವೆ. ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಹಿಂದಿನ ಸರ್ಕಾರದಲ್ಲಿ ಅರಣ್ಯ...

ತೈಲ ದರ ಹೆಚ್ಚಳ ವಿರೋಧಿಸಿ ನಾಳೆ ರಾಜ್ಯಾದ್ಯಂತ ಲಾರಿ ಸಂಚಾರ ಬಂದ್

ಬೆಂಗಳೂರು: ಫೆ 25- ಜಿಎಸ್ ಟಿ, ಇಂಧನ ದರ ಏರಿಕೆ, ಇ-ವೇ ಬಿಲ್ ವಿರೋಧಿಸಿ ವರ್ತಕರ ಸಂಘಟನೆ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಲಾರಿ ಸಂಚಾರ ಬಂದ್ ಆಗಲಿದೆ...

11 ತಿಂಗಳಲ್ಲಿ ಮೊದಲ ಬಾರಿಗೆ ಕೊರೋನಾ ಇಲ್ಲ

ಬೆಳಗಾವಿ: 22- ಕಳೆದ ಮಾರ್ಚ ತಿಂಗಳಲ್ಲಿ ದೇಶಕ್ಕೆ ಒಕ್ಕರಿಸಿದ ಕೊರೋನಾ ಮಹಾಮಾರಿ ಬೆಳಗಾವಿ ಜಿಲ್ಲೆಯನ್ನೂ ಇನ್ನಿಲ್ಲದಂತೆ ಕಾಡಿತ್ತು. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ದಿನವೊಂದಕ್ಕೆ ಸರಾಸರಿ 500 ರ ಗಡಿ ದಾಟುತ್ತಿದ್ದ ಸೋಂಕಿತರ...

National

ಇಂಧನ ಬೆಲೆ ಇಳಿಸುವದು ಸೂಕ್ತ : ಆರ್ ಬಿ ಆಯ್

ಮುಂಬಯಿ: 25- ಹೆಚ್ಚುತ್ತಿರುವ ಇಂಧನ ಬೆಲೆಗಳು ಜೀವನ ವೆಚ್ಚ-ಹೆಚ್ಚಿಸುವ ಅಂಶವನ್ನು ಹೊಂದಿವೆ ಮತ್ತು ಇದರಿಂದ ಆರ್ಥಿಕತೆಯ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ ಶಕ್ತಿಕಾಂತ...

“ಮೋದಿ ಉದೋಗ ನೀಡಿ ಇಲ್ಲ ಖುರ್ಚಿ ಬಿಡಿ ” 60 ಲಕ್ಷ ಟ್ವಿಟ್, ವಿಶ್ವದಾಖಲೆ

ಹೊಸದಿಲ್ಲಿ: 25- ಭಾರತದಾದ್ಯಂತ ಯುವಜನರು ನಿರುದ್ಯೋಗದ ವಿರುದ್ಧ ಸಿಡಿದೆದ್ದಿದ್ದು, ಉದ್ಯೋಗಕ್ಕಾಗಿ ದನಿಯೆತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಟ್ವಿಟರ್ ದಾಳಿ ನಡೆಸಿರುವ ಯುವಜನತೆ ಉದ್ಯೋಗ ಕೊಡಿ ಎಂದು ತಾಕೀತು...

ರೈತರಿಗೆ ಬೆಂಬಲ ನೀಡಿದ್ದ ಶಾಸಕನ ಮನೆ ಮೇಲೆ ಐಟಿ ದಾಳಿ

ಹೊಸದಿಲ್ಲಿ, 25- ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದ ಹರಿಯಾಣದ ಪಕ್ಷೇತರ ಶಾಸಕ ಬಲ‌ರಾಜ ಕುಂಡು ಅವರ ಮನೆ, ಕಛೇರಿ ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳ ಮೇಲೆ ಐಟಿ ದಾಳಿ ನಡೆಸಲಾಗಿದೆ. ರೋಹ್ಟಕ್‌ನಲ್ಲಿರುವ ಅವರ ಸಹೋದರರು,...

9, 10, 11ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಉತ್ತೀರ್ಣ

ಚೆನ್ನೈ: ಫೆ 25 - ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಾರ್ಷಿಕ ಪರೀಕ್ಷೆಯಿಲ್ಲದೆಯೇ ರಾಜ್ಯದ 9, 10, 11ನೇ ತರಗತಿ ವಿದ್ಯಾರ್ಥಿಗಳು ಉತ್ತೀರ್ಣರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮತ್ತು...

International

ಧ್ವಂಸಗೊಂಡ ಹಿಂದೂ ದೇವಾಲಯ ಕೂಡಲೇ ನಿರ್ಮಾಣಕ್ಕೆ ಪಾಕ್ ಕೋರ್ಟ ಆದೇಶ

ಇಸ್ಲಾಮಾಬಾದ: 9- ದುಷ್ಕರ್ಮಿಗಳಿಂದ ಧ್ವಂಸಗೊಂಡಿರುವ ಶತಮಾನಗಳ ಇತಿಹಾಸ ಹೊಂದಿದ್ದ ಹಿಂದೂ ದೇವಾಲಯವನ್ನು ಕೂಡಲೇ ಪುನರ್ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಪಾಕಿಸ್ತಾನ ಸುಪ್ರೀಮ ಕೋರ್ಟ ಆದೇಶಿಸಿದೆ. ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಸಮಯದ ಬಗ್ಗೆ...

ಕೋವಿಡ್ ರೋಗಿಗಳಿಗೆ ಕ್ಷಯರೋಗದ ಅಪಾಯವಿದೆ : ರಶಿಯಾ

ಮಾಸ್ಕೊ, ಫೆ 08- ಕೊರೋನಾ ವೈರಸ್ ಸೋಂಕಿಗೆ ಒಳಗಾದ ರೋಗಿಗಳಿಗೆ ಕ್ಷಯರೋಗ ಬರುವ ಸಾಧ್ಯತೆ ಹೆಚ್ಚು ಎಂದು ರಷ್ಯಾದ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. "ಕೋವಿಡ್ -19 ನಿಂದ ಬಳಲಿದ ನಂತರ ಅನೇಕ ರೋಗಿಗಳು ಶ್ವಾಸಕೋಶದಲ್ಲಿ...

ಬಂಗಾರದ ನಾಲಿಗೆಯ “ಮಮ್ಮಿ”

ಕೈರೋ, 3- ಸತ್ತ ನಂತರ ಮತ್ತೊಂದು ಜೀವನವಿದೆ ಎಂದು ನಂಬಿದ್ದ ಪುರಾತನ ಕಾಲದ ಈಜಿಪ್ತ ನಾಗರಿಕರು ಕೆಡಬಾರದೆಂದು ಶವಗಳಿಗೆ ದ್ರಾವಣ ಹಚ್ಚಿಡುತ್ತಿದ್ದರು. ಹಾಗೆಯೇ ಅವರ ಮತ್ತೊಂದು ಜೀವನಕ್ಕೆ ಬೇಕಾಗುತ್ತದೆಯೆಂದು ಸಾಕಷ್ಟು ಚಿನ್ನವನ್ನು ಶವ...

ಆಂಗ್ ಸಾನ್ ಸೂಕಿ ಬಂಧನ, ಮ್ಯಾನ್ಮಾರ್ ನಲ್ಲಿ ತುರ್ತು ಪರಿಸ್ಥಿತಿ

ಮಾಸ್ಕೋ ಫೆಬ್ರವರಿ 1 - ಮ್ಯಾನ್ಮಾರ್‌ನ ರಾಜಕೀಯ ನಾಯಕಿ ಆಂಗ್ ಸಾನ್ ಸೂಕಿ ಹಾಗೂ ಅಧ್ಯಕ್ಷ ವಿನ್ ಮೈಂಟ್ ಅವರನ್ನು ಬಂಧಿಸಲಾಗಿದೆ ಎಂದು ರಾಯಿಟರ್ಸ್ ವರದಿ ಸೋಮವಾರ ಮಾಡಿದೆ. ದೇಶದ ಆಡಳಿತ ಪಕ್ಷದ ಇತರ...

Entertainment

ಇಂದು ಧಾರವಾಡದಲ್ಲಿ ಬೆಳವಡಿ ಮಲ್ಲಮ್ಮ ನಾಟಕ

ಧಾರವಾಡ: 14- ಹುಬ್ಬಳ್ಳಿಯ ಜೀವಿ ಕಲಾ ಬಳಗದ ಅಧ್ಯಕ್ಷರಾದ ಗದಿಗೆಯ್ಯಾ ಹಿರೇಮಠ ಅವರು ರಚಿಸಿ ನಿರ್ದೇಶಿಸಿದ ಐತಿಹಾಸಿಕ " ಸಮರ ಸಿಂಹಿಣಿ ಬೆಳವಡಿ ಮಲ್ಲಮ್ಮ" ನಾಟಕವು ರವಿವಾರ ದಿ ೧೪- ೨ -೨೦೨೧ ರಂದು ಪ್ರದರ್ಶನಗೊಳ್ಳಲಿದೆ. ಬೆಳವಡಿಯ ನೇತಾಜಿ ತರುಣ...

ಮಾರುಕಟ್ಟೆ ಗಿಜಿಗುಡುವಾಗ ಚಿತ್ರಮಂದಿರವೇಕೆ ಖಾಲಿ?

ಬೆಂಗಳೂರು, ಫೆ 03- “ಬಸ್ ಫುಲ್, ಮಾರ್ಕೆಟ್ ಗಿಜಿ ಗಿಜಿ ಆದರೆ ಚಿತ್ರ ಮಂದಿರಗಳೇಕೆ ಭಣಗುಡಬೇಕು” ಎಂದು ನಟ ಧ್ರುವ ಸರ್ಜಾ ಮಾಡಿರುವ ಟ್ವೀಟ್ ಗೆ ಕನ್ನಡ ಚಿತ್ರರಂಗದ ಬಹುತೇಕ ನಟ, ನಿರ್ದೇಶಕರು...

ಜ. 24ರಂದು ವರುಣ ಧವನ್-ನತಾಶಾ ಮದುವೆ

ಮುಂಬೈ, ಜ 15 - ಖ್ಯಾತ ನಿರ್ಮಾಪಕ, ನಿರ್ದೇಶಕ ಡೇವಿಡ್ ಧವನ ಪುತ್ರ ನಟ ವರುಣ ಧವನ್ ಅವರು ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೇ...

‘ಲಂಕಾಸುರ’ ಚಿತ್ರಕ್ಕೆ ಚಾಲನೆ

ಬೆಂಗಳೂರು, ಜ 15 - ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮದಂದು ವಿನೋದ ಪ್ರಭಾಕರ ಹಾಗೂ ಲೂಸ್ ಮಾದ ಅಭಿನಯದ ‘ಲಂಕಾಸುರ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ...

Sports

ಭಾರತಕ್ಕೆ 317 ರನ್ ಜಯ

ಚೆನ್ನೈ, ಫೆ 16- ಭಾರತದ ಬಲಿಷ್ಠ ಸ್ಪಿನ್ ಕೋಟೆಯನ್ನು ಭೇದಿಸುವಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ವಿಫಲವಾಗಿದ್ದು, ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಪಡೆ 1-1 ರಿಂದ ಸಮಬಲ ಸಾಧಿಸಿದೆ. ನಿರೀಕ್ಷೆಯಂತೆ ಮಂಗಳವಾರ ಭಾರತ...

ಗೆಲುವಿನ ಹೊಸ್ತಿಲಲ್ಲಿ ಭಾರತ

ಚೆನ್ನೈ: ಫೆ 15 - ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅವರ ಶತಕ ಹಾಗೂ ನಾಯಕ ವಿರಾಟ ಕೊಹ್ಲಿ ಅವರ ಅರ್ಧ ಶತಕದ ನೆರವಿನಿಂದ ಭಾರತ ನೀಡಿದ 482 ರನ್ ಗೆಲುವಿನ ಗುರಿ...

ಚೆನ್ನೈ ತಲುಪಿದ ಇಂಗ್ಲೆಂಡ್ ಕ್ರಿಕೆಟ್ ತಂಡ

ನವದೆಹಲಿ, ಜ.24 - ಫೆಬ್ರವರಿ 5 ರಿಂದ ಭಾರತ ವಿರುದ್ಧದ ಟೆಸ್ಟ್ ಸರಣಿಗಾಗಿ ವೇಗದ ಬೌಲರ್ ಜೋಫ್ರಾ ಆರ್ಚರ್, ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಬ್ಯಾಟ್ಸ್‌ಮನ್ ರೋರಿ ಬರ್ನ್ಸ್ ಮತ್ತು ಜೊನಾಥನ್ ಟ್ರಾಟ್ ಸೇರಿದಂತೆ...

ರಹಾನೆ ಮತ್ತು ಇತರ ಆಟಗಾರರಿಗೆ ಕ್ವಾರಂಟೈನ್ ವಿನಾಯಿತಿ

ನವದೆಹಲಿ, ಜ.21- ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಗೆದ್ದು ಗುರುವಾರ ಬೆಳಿಗ್ಗೆ ಮುಂಬೈಗೆ ಮರಳಿದ ನಾಯಕ ಅಜಿಂಕ್ಯ ರಹಾನೆ ಮತ್ತು ಇತರ ನಾಲ್ಕು ಭಾರತೀಯ ಆಟಗಾರರಿಗೆ ಮಹಾರಾಷ್ಟ್ರ ಸರ್ಕಾರ ಕ್ವಾರಂಟೈನ್ ನಿಂದ ವಿನಾಯಿತಿ...