ಬೆಂಗಳೂರು, ಜ 21- ಖಾತೆ ಮರುಹಂಚಿಕೆ ಬಗ್ಗೆ ದೊಡ್ಡ ಮಟ್ಟದ ಅಸಮಾಧಾನ ಏನೂ ಇಲ್ಲ ಎಂದು ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.
ವಿಧಾನಸೌಧಲ್ಲಿ ಮಾತನಾಡಿದ ಅವರು, ಖಾತೆ ಮರುಹಂಚಿಕೆಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಸಮಾಧಾನ ಇದ್ದರೆ ಅವರನ್ನೇ ಕೇಳಿ. ಅಂತಹ ದೊಡ್ಡಮಟ್ಟದ ಅಸಮಾಧಾನ ಯಾವುದೂ ಇಲ್ಲ ಎಂದರು.
ನಾನು ರಾಜ್ಯದ ಮಂತ್ರಿಯಾಗಿ ಆತ್ಮಸಾಕ್ಷಿಯಾಗಿ ಸಂತೋಷವಾಗಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ. ನಾನು ಈ ಹಿಂದೆ 13 ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಮಂತ್ರಿ ಸ್ಥಾನ ನನಗೆ ಹೊಸದೇನೂ ಅಲ್ಲ ಎಂದು ಕತ್ತಿ ತಿಳಿಸಿದರು.