INDIA COVID-19 Statistics

11,063,491
Confirmed Cases
Updated on 26/02/2021 7:11 AM
155,950
Total active cases
Updated on 26/02/2021 7:11 AM
156,861
Total deaths
Updated on 26/02/2021 7:11 AM
Friday, February 26, 2021

INDIA COVID-19 Statistics

11,063,491
Total confirmed cases
Updated on 26/02/2021 7:11 AM
155,950
Total active cases
Updated on 26/02/2021 7:11 AM
156,861
Total deaths
Updated on 26/02/2021 7:11 AM
10,750,680
Total recovered
Updated on 26/02/2021 7:11 AM
Home National New Delhi ರೈತರ ಪ್ರತಿಭಟನೆಯಲ್ಲಿ ಗಲಭೆ ಸೃಷ್ಟಿಸಿ ಗುಂಡು ಹಾರಿಸುವ ಪೋಲೀಸರ ಸಂಚು ಬಯಲು

ರೈತರ ಪ್ರತಿಭಟನೆಯಲ್ಲಿ ಗಲಭೆ ಸೃಷ್ಟಿಸಿ ಗುಂಡು ಹಾರಿಸುವ ಪೋಲೀಸರ ಸಂಚು ಬಯಲು

ಹೊಸದಿಲ್ಲಿ, 23- ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿರುವ ರೈತರ ಹೋರಾಟ ತಡೆಯಲು ಹರಿಯಾಣಾ ಪೊಲೀಸರು ಪ್ರತಿಭಟನೆ ಸ್ಥಳದಲ್ಲಿ ಗಲಭೆ ಸೃಷ್ಟಿಸಿ ರೈತರ ಮೇಲೆ ಗುಂಡು ಹಾರಿಸಲು ಖಾಸಗಿ ವ್ಯಕ್ತಿಗಳನ್ನು ನಿಯೋಜಿಸಿದ್ದು, ಅಂಥ ಒಬ್ಬ ವ್ಯಕ್ತಿಯನ್ನು ರೈತರು ಹಿಡಿದಿದ್ದಾರೆ.

ಪೊಲೀಸರು ನಾಲ್ಕು ರೈತರ ಫೋಟೋ ಕೊಟ್ಟು ಇವರನ್ನು ಹತ್ಯೆ ಮಾಡಲು ಸೂಚಿಸಿದ್ದರು. ಗಣರಾಜ್ಯೋತ್ಸವ ದಿನದಂದು ಪ್ರತಿಭಟನೆ ಮಾಡುತ್ತಿರುವ ರೈತರ ಪರ್ಯಾಯ ಪರೇಡ್ ತಡೆಯುವುದೂ ಪೋಲೀಸರ ಉದ್ದೇಶವಾಗಿತ್ತು.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಹಲವು ದಿನಗಳಿಂದ ರೈತರು ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪೊಲೀಸ್ ಸಮವಸ್ತ್ರ ಧರಿಸಿ ರೈತ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದಲ್ಲದೇ ರ‍್ಯಾಲಿಗೆ ಅಡ್ಡಿಯುಂಟು ಮಾಡುವ ಸಂಚನ್ನು ರೂಪಿಸಿದ್ದರು. ವ್ಯಕ್ತಿಯೊಬ್ಬನನ್ನು ರೈತರೇ ಹಿಡಿದು, ಅವರ ಸಂಚನ್ನು ಅವನಿಂದಲೇ ಪತ್ರಿಕಾಗೋಷ್ಟಿಯಲ್ಲಿ ಹೇಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಈ ವೇಳೆ ಮಾತನಾಡಿದ ಬಂಧಿತ ಆರೋಪಿ, ಸಂಚು ರೂಪಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದು, ಹರಿಯಾಣದ ರಾಯ್ ಪೊಲೀಸ್ ಠಾಣೆಯ ಪೋಲೀಸರು ಈ ಯೋಜನೆ ಕಾರ್ಯಗೊತಗೊಳಿಸಲು ನಮಗೆ ತರಬೇತಿ ನೀಡಿದ್ದಾರೆ ಎಂದು ಆರೋಪಿಸಿದ್ದಾನೆ.

ಪತ್ರಿಕಾಗೋಷ್ಠಿಯಲ್ಲಿ ಕುಳಿತು ಮಾತನಾಡಿದ ಆರೋಪಿ, ತಮ್ಮ ತಂಡಕ್ಕೆ ಎರಡು ಸ್ಥಳಗಳಲ್ಲಿ ಶಸ್ತ್ರಾಸ್ತ್ರಗಳನ್ನು ನೀಡಲಾಗಿದೆ. ರ‍್ಯಾಲಿ ಸಂದರ್ಭದಲ್ಲಿ ರೈತರ ಗುಂಪುಗಳನ್ನು ಚದುರಿಸಲು ಪೊಲೀಸ್ ಸಮವಸ್ತ್ರ ಧರಿಸಿ ಯೋಜನೆ ರೂಪಿಸಲಾಗಿತ್ತು. ಮಾತ್ರವಲ್ಲದೇ ನಾಲ್ವರು ರೈತರ ಫೋಟೋಗಳನ್ನು ನೀಡಿ ಅವರ ಮೇಲೆ ಗುಂಡು ಹಾರಿಸುವಂತೆ ನಿರ್ದೇಶನ ನೀಡಲಾಗಿತ್ತು ಎಂದಿದ್ದಾನೆ.

ಕಳೆದ ಹಲವು ದಿನಗಳಿಂದ ರೈತರು ಕೇಂದ್ರದ ಮೂರು ಹೊಸ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಮತ್ತು ಸರ್ಕಾರ ನಡುವಿನ ಹಲವು ಸುತ್ತಿನ ಮಾತುಕತೆಗಳು ಕೂಡ ವಿಫಲವಾಗಿದೆ. ಏತನ್ಮಧ್ಯೆ ಜ.26 ರಂದು ರೈತರು ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಉದ್ದೇಶಿಸಿದ್ದಾರೆ. ಆದರೆ ರೈತರ ಹೋರಾಟ ತಡೆಯಲು ಎಂಥೆಂಥ ಕುಯುಕ್ತಿ ಬಳಸಲಾಗುತ್ತಿದೆ.

ಸಿಂಘು ಗಡಿಯಲ್ಲಿ ತಡರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡರು, ವ್ಯಕ್ತಿಯೊಬ್ಬನನ್ನು ಮಾಧ್ಯಮಗಳ ಮುಂದೆ ಹಾಜರುಪಡಿಸಿದರು. ಈ ವ್ಯಕ್ತಿ ಟ್ರ್ಯಾಕ್ಟರ್ ಜಾಥಾ ಸಂದರ್ಭದಲ್ಲಿ, ರೈತ ಮುಖಂಡರ ಮೇಲೆ ಪೊಲೀಸ್ ಸಮವಸ್ತ್ರದಲ್ಲಿ ಲಾಠಿ ಚಾರ್ಜ್ ನಡೆಸಿ, ಹಿಂಸಾಚಾರಕ್ಕೆ ಸಂಚು ರೂಪಿಸಿದ್ದ ಎಂದು ಆರೋಪಿಸಿದರು.

ಈ ಮುಖವಾಡದ ವ್ಯಕ್ತಿಯು ಪ್ರತಿಭಟನೆಯ ಸ್ಥಳದಲ್ಲಿ ಅಲೆದಾಡುತ್ತಿರುವುದನ್ನು ನಾವು ಗಮನಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತನ್ನ ಯೋಜನೆಯನ್ನು ಬಹಿರಂಗಪಡಿಸಿದ್ದಾನೆ ಎಂದು ರೈತರು ಹೇಳಿದರು.

ಜನವರಿ 26ರ ರೈತರ ಜಾಥಾ ಮುಂದೆ ಹೋಗದಂತೆ ತಡೆಯಲು ನಾವು ಯೋಜಿಸಿದ್ದೆವು ಮತ್ತು ಅವರು ನಿಲ್ಲದಿದ್ದರೆ, ನಾವು ಮೊದಲು ಗಾಳಿಯಲ್ಲಿ ಗುಂಡು ಹಾರಿಸಲು ಯೋಜಿಸಿದ್ದೆವು. ನಂತರ ನಮ್ಮ ಇತರ ತಂಡದ ಸದಸ್ಯರು ಹಿಂದಿನಿಂದ ಗುಂಡು ಹಾರಿಸುವವರಿದ್ದರು. ಇದರಿಂದಾಗಿ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ರೈತರು ಗುಂಡು ಹಾರಿಸುತ್ತಿದ್ದಾರೆ ಎಂದು ಭಾವಿಸುತ್ತಾರೆ ಎಂದು ಬಂಧಿತ ವ್ಯಕ್ತಿ ತಮ್ಮ ಸಂಚನ್ನು ವಿವರಿಸಿದ್ದಾನೆ.

ಹರಿಯಾಣದ ರಾಯ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಈ ಯೋಜನೆ ಕಾರ್ಯಗತಗೊಳಿಸಲು ನಮಗೆ ತರಬೇತಿ ನೀಡಿದ್ದಾರೆ ಎಂದು ಆರೋಪಿ ಹೇಳಿರುವುದಾಗಿಯೂ ವರದಿಯಾಗಿದೆ.
ಕಳೆದ ಎರಡು ದಿನಗಳಿಂದ ಇಬ್ಬರು ಯುವತಿಯರು ಸೇರಿದಂತೆ ಹತ್ತು ಜನರು ಸಕ್ರಿಯರಾಗಿದ್ದು, ರೈತರು ಬೀಡು ಬಿಟ್ಟಿರುವ ಪ್ರದೇಶಗಳಲ್ಲಿ ಓಡಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಬಂಧಿತ ವ್ಯಕ್ತಿ ತಿಳಿಸಿದ್ದಾನೆ.

ಜ. 26ರಂದು 50- 60 ಜನರು ಪರೇಡ್‌ನಲ್ಲಿ ಪೊಲೀಸ್‌ ವೇಷದಲ್ಲಿ, ಕೆಲವರು ರೈತರಂತೆ ಪಾಲ್ಗೊಂಡು ಗಲಭೆ ಸೃಷ್ಟಿಸುವ ಉದ್ದೇಶವಿತ್ತು. ಗಾಳಿಯಲ್ಲಿ ಗುಂಡು ಹಾರಿಸುವುದು, ಲಾಠಿ ಚಾರ್ಜ್‌ ಮಾಡುವುದು ಯೋಜನೆಯ ಭಾಗವಾಗಿತ್ತು ಎಂಬ ಆಘಾತಕಾರಿ ಅಂಶವನ್ನು ಯುವಕನು ಹೊರಹಾಕಿದ್ದಾನೆ.

ಈ ಹಿಂದೆ ಕರ್ನಾಲ್‌ನಲ್ಲಿ ನಡೆದ ರೈತ ಹೋರಾಟದಲ್ಲಿ ಭಾಗಿಯಾಗಿ, ರೈತರ ಮೇಲೆ ದಾಳಿ ಮಾಡಿದ್ದಾಗಿ ಒಪ್ಪಿಕೊಂಡಿರುವ ಯುವಕ, ಹಣಕ್ಕಾಗಿ ಈ ಕೆಲಸ ಒಪ್ಪಿಕೊಂಡಿದ್ದು, ನಾನು ಯಾವುದೇ ಸಂಘಟನೆಗೆ ಸೇರಿದವನಲ್ಲ. ನನ್ನ ಗುರುತು ಬಹಿರಂಗ ಪಡಿಸಬೇಡಿ, ನನ್ನ ಕುಟುಂಬವನ್ನು ಕೊಲ್ಲುವ ಬೆದರಿಕೆಯನ್ನು ಒಡ್ಡಲಾಗಿದೆ ಎಂದು ಮನವಿ ಮಾಡಿದ್ದಾನೆ.

ಸುಮಾರು ಒಂದೂವರೆ ತಿಂಗಳಿಂದ ರೈತರು ಚಳಿ, ಮಳೆ–ಗಾಳಿ ಲೆಕ್ಕಿಸದೆ ಮೂರೂ ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಮತ್ತು ಸರ್ಕಾರದ ನಡುವೆ 11 ಸುತ್ತಿನ ಸಂಧಾನ ಮಾತುಕತೆಗಳು ನಡೆದಿವೆ. ಈ ಮಧ್ಯೆ, ಜನವರಿ 26ರಂದು ಟ್ರ್ಯಾಕ್ಟರ್ ಜಾಥಾ ನಡೆಸಿ ಪ್ರತಿಭಟನೆ ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ.

LEAVE A REPLY

Please enter your comment!
Please enter your name here

State

ತಹಸೀಲ್ದಾರ ಕೊಲೆ ಯತ್ನ : ತಂದೆ, ಮಗ ಬಂಧನ

ಜಮಖಂಡಿ: 25- ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ತಹಶೀಲ್ದಾರ ನಾಗಪ್ಪ ಬಿರಾಡಿಯವರನ್ನು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದ ತಂದೆ ಹಾಗು ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ ಕಿತ್ತೂರು ಹಾಗು ಬಸವರಾಜ ಕಿತ್ತೂರು ಬಂಧಿತರು....

ಬೆಳಗಾವಿಗೆ ಬಂದವು ಮೂರು ಸಿಂಹಗಳು

ಬೆಳಗಾವಿ: 25- ಇಲ್ಲಿನ ಭೂತರಾಮನಹಟ್ಟಿ ಬಳಿಯ ರಾಣಿ ಚನ್ನಮ್ಮಾ ಪ್ರಾಣಿ ಸಂಗ್ರಹಾಲಯಕ್ಕೆ ಗುರುವಾರ ಮೂರು ಸಿಂಹಗಳು ಬಂದಿವೆ. ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಹಿಂದಿನ ಸರ್ಕಾರದಲ್ಲಿ ಅರಣ್ಯ...

ತೈಲ ದರ ಹೆಚ್ಚಳ ವಿರೋಧಿಸಿ ನಾಳೆ ರಾಜ್ಯಾದ್ಯಂತ ಲಾರಿ ಸಂಚಾರ ಬಂದ್

ಬೆಂಗಳೂರು: ಫೆ 25- ಜಿಎಸ್ ಟಿ, ಇಂಧನ ದರ ಏರಿಕೆ, ಇ-ವೇ ಬಿಲ್ ವಿರೋಧಿಸಿ ವರ್ತಕರ ಸಂಘಟನೆ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಲಾರಿ ಸಂಚಾರ ಬಂದ್ ಆಗಲಿದೆ...

11 ತಿಂಗಳಲ್ಲಿ ಮೊದಲ ಬಾರಿಗೆ ಕೊರೋನಾ ಇಲ್ಲ

ಬೆಳಗಾವಿ: 22- ಕಳೆದ ಮಾರ್ಚ ತಿಂಗಳಲ್ಲಿ ದೇಶಕ್ಕೆ ಒಕ್ಕರಿಸಿದ ಕೊರೋನಾ ಮಹಾಮಾರಿ ಬೆಳಗಾವಿ ಜಿಲ್ಲೆಯನ್ನೂ ಇನ್ನಿಲ್ಲದಂತೆ ಕಾಡಿತ್ತು. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ದಿನವೊಂದಕ್ಕೆ ಸರಾಸರಿ 500 ರ ಗಡಿ ದಾಟುತ್ತಿದ್ದ ಸೋಂಕಿತರ...

National

ಇಂಧನ ಬೆಲೆ ಇಳಿಸುವದು ಸೂಕ್ತ : ಆರ್ ಬಿ ಆಯ್

ಮುಂಬಯಿ: 25- ಹೆಚ್ಚುತ್ತಿರುವ ಇಂಧನ ಬೆಲೆಗಳು ಜೀವನ ವೆಚ್ಚ-ಹೆಚ್ಚಿಸುವ ಅಂಶವನ್ನು ಹೊಂದಿವೆ ಮತ್ತು ಇದರಿಂದ ಆರ್ಥಿಕತೆಯ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ ಶಕ್ತಿಕಾಂತ...

“ಮೋದಿ ಉದೋಗ ನೀಡಿ ಇಲ್ಲ ಖುರ್ಚಿ ಬಿಡಿ ” 60 ಲಕ್ಷ ಟ್ವಿಟ್, ವಿಶ್ವದಾಖಲೆ

ಹೊಸದಿಲ್ಲಿ: 25- ಭಾರತದಾದ್ಯಂತ ಯುವಜನರು ನಿರುದ್ಯೋಗದ ವಿರುದ್ಧ ಸಿಡಿದೆದ್ದಿದ್ದು, ಉದ್ಯೋಗಕ್ಕಾಗಿ ದನಿಯೆತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಟ್ವಿಟರ್ ದಾಳಿ ನಡೆಸಿರುವ ಯುವಜನತೆ ಉದ್ಯೋಗ ಕೊಡಿ ಎಂದು ತಾಕೀತು...

ರೈತರಿಗೆ ಬೆಂಬಲ ನೀಡಿದ್ದ ಶಾಸಕನ ಮನೆ ಮೇಲೆ ಐಟಿ ದಾಳಿ

ಹೊಸದಿಲ್ಲಿ, 25- ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದ ಹರಿಯಾಣದ ಪಕ್ಷೇತರ ಶಾಸಕ ಬಲ‌ರಾಜ ಕುಂಡು ಅವರ ಮನೆ, ಕಛೇರಿ ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳ ಮೇಲೆ ಐಟಿ ದಾಳಿ ನಡೆಸಲಾಗಿದೆ. ರೋಹ್ಟಕ್‌ನಲ್ಲಿರುವ ಅವರ ಸಹೋದರರು,...

9, 10, 11ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಉತ್ತೀರ್ಣ

ಚೆನ್ನೈ: ಫೆ 25 - ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಾರ್ಷಿಕ ಪರೀಕ್ಷೆಯಿಲ್ಲದೆಯೇ ರಾಜ್ಯದ 9, 10, 11ನೇ ತರಗತಿ ವಿದ್ಯಾರ್ಥಿಗಳು ಉತ್ತೀರ್ಣರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮತ್ತು...

International

ಧ್ವಂಸಗೊಂಡ ಹಿಂದೂ ದೇವಾಲಯ ಕೂಡಲೇ ನಿರ್ಮಾಣಕ್ಕೆ ಪಾಕ್ ಕೋರ್ಟ ಆದೇಶ

ಇಸ್ಲಾಮಾಬಾದ: 9- ದುಷ್ಕರ್ಮಿಗಳಿಂದ ಧ್ವಂಸಗೊಂಡಿರುವ ಶತಮಾನಗಳ ಇತಿಹಾಸ ಹೊಂದಿದ್ದ ಹಿಂದೂ ದೇವಾಲಯವನ್ನು ಕೂಡಲೇ ಪುನರ್ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಪಾಕಿಸ್ತಾನ ಸುಪ್ರೀಮ ಕೋರ್ಟ ಆದೇಶಿಸಿದೆ. ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಸಮಯದ ಬಗ್ಗೆ...

ಕೋವಿಡ್ ರೋಗಿಗಳಿಗೆ ಕ್ಷಯರೋಗದ ಅಪಾಯವಿದೆ : ರಶಿಯಾ

ಮಾಸ್ಕೊ, ಫೆ 08- ಕೊರೋನಾ ವೈರಸ್ ಸೋಂಕಿಗೆ ಒಳಗಾದ ರೋಗಿಗಳಿಗೆ ಕ್ಷಯರೋಗ ಬರುವ ಸಾಧ್ಯತೆ ಹೆಚ್ಚು ಎಂದು ರಷ್ಯಾದ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. "ಕೋವಿಡ್ -19 ನಿಂದ ಬಳಲಿದ ನಂತರ ಅನೇಕ ರೋಗಿಗಳು ಶ್ವಾಸಕೋಶದಲ್ಲಿ...

ಬಂಗಾರದ ನಾಲಿಗೆಯ “ಮಮ್ಮಿ”

ಕೈರೋ, 3- ಸತ್ತ ನಂತರ ಮತ್ತೊಂದು ಜೀವನವಿದೆ ಎಂದು ನಂಬಿದ್ದ ಪುರಾತನ ಕಾಲದ ಈಜಿಪ್ತ ನಾಗರಿಕರು ಕೆಡಬಾರದೆಂದು ಶವಗಳಿಗೆ ದ್ರಾವಣ ಹಚ್ಚಿಡುತ್ತಿದ್ದರು. ಹಾಗೆಯೇ ಅವರ ಮತ್ತೊಂದು ಜೀವನಕ್ಕೆ ಬೇಕಾಗುತ್ತದೆಯೆಂದು ಸಾಕಷ್ಟು ಚಿನ್ನವನ್ನು ಶವ...

ಆಂಗ್ ಸಾನ್ ಸೂಕಿ ಬಂಧನ, ಮ್ಯಾನ್ಮಾರ್ ನಲ್ಲಿ ತುರ್ತು ಪರಿಸ್ಥಿತಿ

ಮಾಸ್ಕೋ ಫೆಬ್ರವರಿ 1 - ಮ್ಯಾನ್ಮಾರ್‌ನ ರಾಜಕೀಯ ನಾಯಕಿ ಆಂಗ್ ಸಾನ್ ಸೂಕಿ ಹಾಗೂ ಅಧ್ಯಕ್ಷ ವಿನ್ ಮೈಂಟ್ ಅವರನ್ನು ಬಂಧಿಸಲಾಗಿದೆ ಎಂದು ರಾಯಿಟರ್ಸ್ ವರದಿ ಸೋಮವಾರ ಮಾಡಿದೆ. ದೇಶದ ಆಡಳಿತ ಪಕ್ಷದ ಇತರ...

Entertainment

ಇಂದು ಧಾರವಾಡದಲ್ಲಿ ಬೆಳವಡಿ ಮಲ್ಲಮ್ಮ ನಾಟಕ

ಧಾರವಾಡ: 14- ಹುಬ್ಬಳ್ಳಿಯ ಜೀವಿ ಕಲಾ ಬಳಗದ ಅಧ್ಯಕ್ಷರಾದ ಗದಿಗೆಯ್ಯಾ ಹಿರೇಮಠ ಅವರು ರಚಿಸಿ ನಿರ್ದೇಶಿಸಿದ ಐತಿಹಾಸಿಕ " ಸಮರ ಸಿಂಹಿಣಿ ಬೆಳವಡಿ ಮಲ್ಲಮ್ಮ" ನಾಟಕವು ರವಿವಾರ ದಿ ೧೪- ೨ -೨೦೨೧ ರಂದು ಪ್ರದರ್ಶನಗೊಳ್ಳಲಿದೆ. ಬೆಳವಡಿಯ ನೇತಾಜಿ ತರುಣ...

ಮಾರುಕಟ್ಟೆ ಗಿಜಿಗುಡುವಾಗ ಚಿತ್ರಮಂದಿರವೇಕೆ ಖಾಲಿ?

ಬೆಂಗಳೂರು, ಫೆ 03- “ಬಸ್ ಫುಲ್, ಮಾರ್ಕೆಟ್ ಗಿಜಿ ಗಿಜಿ ಆದರೆ ಚಿತ್ರ ಮಂದಿರಗಳೇಕೆ ಭಣಗುಡಬೇಕು” ಎಂದು ನಟ ಧ್ರುವ ಸರ್ಜಾ ಮಾಡಿರುವ ಟ್ವೀಟ್ ಗೆ ಕನ್ನಡ ಚಿತ್ರರಂಗದ ಬಹುತೇಕ ನಟ, ನಿರ್ದೇಶಕರು...

ಜ. 24ರಂದು ವರುಣ ಧವನ್-ನತಾಶಾ ಮದುವೆ

ಮುಂಬೈ, ಜ 15 - ಖ್ಯಾತ ನಿರ್ಮಾಪಕ, ನಿರ್ದೇಶಕ ಡೇವಿಡ್ ಧವನ ಪುತ್ರ ನಟ ವರುಣ ಧವನ್ ಅವರು ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೇ...

‘ಲಂಕಾಸುರ’ ಚಿತ್ರಕ್ಕೆ ಚಾಲನೆ

ಬೆಂಗಳೂರು, ಜ 15 - ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮದಂದು ವಿನೋದ ಪ್ರಭಾಕರ ಹಾಗೂ ಲೂಸ್ ಮಾದ ಅಭಿನಯದ ‘ಲಂಕಾಸುರ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ...

Sports

ಭಾರತಕ್ಕೆ 317 ರನ್ ಜಯ

ಚೆನ್ನೈ, ಫೆ 16- ಭಾರತದ ಬಲಿಷ್ಠ ಸ್ಪಿನ್ ಕೋಟೆಯನ್ನು ಭೇದಿಸುವಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ವಿಫಲವಾಗಿದ್ದು, ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಪಡೆ 1-1 ರಿಂದ ಸಮಬಲ ಸಾಧಿಸಿದೆ. ನಿರೀಕ್ಷೆಯಂತೆ ಮಂಗಳವಾರ ಭಾರತ...

ಗೆಲುವಿನ ಹೊಸ್ತಿಲಲ್ಲಿ ಭಾರತ

ಚೆನ್ನೈ: ಫೆ 15 - ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅವರ ಶತಕ ಹಾಗೂ ನಾಯಕ ವಿರಾಟ ಕೊಹ್ಲಿ ಅವರ ಅರ್ಧ ಶತಕದ ನೆರವಿನಿಂದ ಭಾರತ ನೀಡಿದ 482 ರನ್ ಗೆಲುವಿನ ಗುರಿ...

ಚೆನ್ನೈ ತಲುಪಿದ ಇಂಗ್ಲೆಂಡ್ ಕ್ರಿಕೆಟ್ ತಂಡ

ನವದೆಹಲಿ, ಜ.24 - ಫೆಬ್ರವರಿ 5 ರಿಂದ ಭಾರತ ವಿರುದ್ಧದ ಟೆಸ್ಟ್ ಸರಣಿಗಾಗಿ ವೇಗದ ಬೌಲರ್ ಜೋಫ್ರಾ ಆರ್ಚರ್, ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಬ್ಯಾಟ್ಸ್‌ಮನ್ ರೋರಿ ಬರ್ನ್ಸ್ ಮತ್ತು ಜೊನಾಥನ್ ಟ್ರಾಟ್ ಸೇರಿದಂತೆ...

ರಹಾನೆ ಮತ್ತು ಇತರ ಆಟಗಾರರಿಗೆ ಕ್ವಾರಂಟೈನ್ ವಿನಾಯಿತಿ

ನವದೆಹಲಿ, ಜ.21- ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಗೆದ್ದು ಗುರುವಾರ ಬೆಳಿಗ್ಗೆ ಮುಂಬೈಗೆ ಮರಳಿದ ನಾಯಕ ಅಜಿಂಕ್ಯ ರಹಾನೆ ಮತ್ತು ಇತರ ನಾಲ್ಕು ಭಾರತೀಯ ಆಟಗಾರರಿಗೆ ಮಹಾರಾಷ್ಟ್ರ ಸರ್ಕಾರ ಕ್ವಾರಂಟೈನ್ ನಿಂದ ವಿನಾಯಿತಿ...