ಬೆಳಗಾವಿ, 25- ತನ್ನ ಎರಡನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸ್ಟಾರ್ ಏರ್ ಬೆಳಗಾವಿ ಮತ್ತು ನಾಸಿಕ್ ನಡುವೆ ತಡೆರಹಿತ ವಿಮಾನಯಾನ ಸೇವೆಯನ್ನು ಸೋಮವಾರದಿಂದ ಪ್ರಾರಂಭಿಸಿದೆ.
ಬೆಳಗಾವಿಯಿಂದ ಸೋಮವಾರ, ಶುಕ್ರವಾರ ಮತ್ತು ಭಾನುವಾರ ವಾರದಲ್ಲಿ ಮೂರು ಬಾರಿ ಸೇವೆ ನೀಡಲಿದ್ದು ಪ್ರಾರಂಭಿಕ ಪ್ರಯಾಣ ದರ 1999 ರೂಪಾಯಿ ಇದೆ.
ಸಂಜಯ ಘೋಡಾವತ್ ಸಮೂಹದ ಅಧ್ಯಕ್ಷರಾದ ಸಂಜಯ ಘೋಡಾವತ್ ಮತ್ತು ಸ್ಟಾರ್ ಏರ್ ನ ನಿರ್ದೇಶಕ ಶ್ರೆನಿಕ್ ಘೋಡಾವತ್ ಅವರು ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಹೊಸ ಮಾರ್ಗದ ಬಗ್ಗೆ ಪ್ರತಿಕ್ರಿಯಿಸಿದ ಸ್ಟಾರ್ ಏರ್ನ ನಿರ್ದೇಶಕ ಶ್ರೇಣಿಕ್ ಘೋಡಾವತ್, “ಸಂಜಯ ಘೋಡಾವತ್ ಗ್ರೂಪ್ ಮತ್ತು ಸ್ಟಾರ್ ಏರ್ ಹಲವು ವರ್ಷಗಳಿಂದ ಬೆಳಗಾವಿ ಮತ್ತು ಹುಬ್ಬಳ್ಳಿ ಪ್ರದೇಶದ ಜನರಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದೆ. ಬೆಳಗಾವಿಯನ್ನು ಹೆಚ್ಚು ಭಾರತೀಯ ನಗರಗಳೊಂದಿಗೆ ಸಂಪರ್ಕಿಸಲು ಇದು ನಿಜವಾಗಿಯೂ ನಮಗೆ ಸಂತೋಷವನ್ನು ನೀಡುತ್ತದೆ. ಇದು ಖಂಡಿತವಾಗಿಯೂ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಬೆಳಗಾವಿಗೆ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ವೃದ್ಧಿಸುತ್ತದೆ.
ಜೊತೆಯಲ್ಲಿ, ಪ್ರಮುಖ ಯಾತ್ರಾಸ್ಥಳವಾದ ಶಿರಡಿಗೆ ನಾಸಿಕ್ ಸಮೀಪದಲ್ಲಿವುದರಿಂದ, ಸ್ಟಾರ್ ಏರ್ ಸೇವೆಯು ಬೆಳಗಾವಿ ಮತ್ತು ಪಕ್ಕದ ಜಿಲ್ಲೆಗಳಿಂದ ಲಕ್ಷೋಪಲಕ್ಷ ಪ್ರವಾಸಿಗರನ್ನು ಆಕರ್ಷಿಸಲು ನೆರವಾಗುತ್ತದೆ ಮತ್ತು ಆಧ್ಯಾತ್ಮಿಕ ರಾಜಧಾನಿ ಮಹಾರಾಷ್ಟ್ರಕ್ಕೆ ಪ್ರಯಾಣಿಸಲು ನೆರವಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ನಾಸಿಕ್ ಮತ್ತು ಪಕ್ಕದ ಪ್ರದೇಶಗಳ ಪ್ರವಾಸಿಗರಿಗೆ ಕೊಲ್ಹಾಪುರ, ಹುಬ್ಬಳ್ಳಿ ಮತ್ತು ಗೋವಾಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಇದು ಬೆಳಗಾವಿಯಿಂದ ಎರಡು ಗಂಟೆಗಳ ಪ್ರಯಾಣದ ದೂರಲ್ಲಿದೆ ಎಂದರು.
“ಆರ್ಸಿಎಸ್-ಉಡಾನ್ ಅಡಿಯಲ್ಲಿ ಹೆಚ್ಚು ಹೆಚ್ಚು ಶ್ರೇಣಿ 2 ಮತ್ತು ಶ್ರೇಣಿ 3 ರ ನಗರಗಳನ್ನು ಸಂಪರ್ಕಿಸಲು ನಾವು ಸಂತೋಷಪಡುತ್ತೇವೆ. ಉತ್ಸಾಹಭರಿತ ಪ್ರಯಾಣಿಕರಿಂದ ನಾವು ಪಡೆದ ಅಗಾಧ ಪ್ರತಿಕ್ರಿಯೆ ನಮ್ಮನ್ನು ಪ್ರೋತ್ಸಾಹಿಸುತ್ತಿದೆ” ಇದು ನಿಜವಾಗಿಯೂ ನೈಜ ಭಾರತವನ್ನು ಸಂಪರ್ಕಿಸುವ ನಮ್ಮ ನೀತಿಯನ್ನು ಪ್ರತಿಬಿಂಬಿಸುತ್ತದೆ. ಬಿಲಿಯನ್ ಡಾಲರ್ ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಯೋಜನೆಗೆ ನಾಸಿಕ್ ಪ್ರಮುಖವಾದುದರಿಂದ, ನಮ್ಮ ವಿಮಾನ ಸೇವೆಗಳನ್ನು ನಾಸಿಕ್ಗೆ ಪ್ರಾರಂಭಿಸಲು ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ. ಇದು ಕೈಗಾರಿಕಾ ಚಟುವಟಿಕೆಗಳಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ” ಎಂದು ಸಂಜಯ ಘೋಡಾವತ್ ಹೇಳಿದರು.
ವಾರದಲ್ಲಿ ಮೂರು ಬಾರಿ, ಅಂದರೆ ಸೋಮವಾರ, ಶುಕ್ರವಾರ ಮತ್ತು ಭಾನುವಾರ ಬೆಳಗಾವಿಯಿಂದ ತಡೆರಹಿತ ವಿಮಾನ ಸೇವೆಗಳನ್ನು ನಿರ್ವಹಿಸಲು ಕಂಪನಿ ಯೋಜಿಸಿದೆ. ಇದಲ್ಲದೇ ಫ್ಲೈಟ್ ಸೇವೆ ಆರ್ಸಿಎಸ್-ಉಡಾನ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಕಂಪನಿಯು ಕೇವಲ ರೂ.1999/- ರೂ. ಗಳಲ್ಲಿ ವಿಮಾನ ಸೇವೆ ಒದಗಿಸುತ್ತಿದೆ ಎಂದರು.
ಕಂಪನಿಯ ಅಧಿಕಾರಿಗಳ ಪ್ರಕಾರ, ಸ್ಟಾರ್ ಏರ್ ಅಹಮದಾಬಾದ, ಅಜ್ಮೀರ, ಬೆಳಗಾವಿ, ಬೆಂಗಳೂರು, ದೆಹಲಿ, ಹುಬ್ಬಳ್ಳಿ, ತಿರುಪತಿ, ಇಂದೋರ್, ಕಲಬುರಗಿ, ಮುಂಬೈ ಮತ್ತು ಸೂರತ್ ಸೇರಿದಂತೆ 13 ಸ್ಥಳಗಳಿಗೆ 26 ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತದೆ. ಸ್ಟಾರ್ ಏರ್ ತನ್ನ ಮೊದಲ ಹಾರಾಟದಿಂದ ಇದು ವರೆಗೆ ಸುಮಾರು 1.6 ಲಕ್ಷ ಪ್ರಯಾಣಿಕರು ಹಾರಾಟ ನಡೆಸಿದ್ದಾರೆ ಎಂದು ವಿವರಿಸಿದರು.