ನವದೆಹಲಿ, ಜ 26 – ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಮೂಲಕ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ಭುಗಿಲೆದ್ದಿದ್ದರಿಂದ ಸಾರ್ವಜನಿಕ ಸುರಕ್ಷತೆ ಕಾಪಾಡಲು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಮಧ್ಯಾಹ್ನ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.
“ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಮತ್ತು ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ತಪ್ಪಿಸುವ ಹಿತದೃಷ್ಟಿಯಿಂದ, ಅಗತ್ಯ ಮತ್ತು ತ್ವರಿತ, ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ” ಎಂದು ಸಚಿವಾಲಯದ ಆದೇಶ ತಿಳಿಸಿದೆ.
ಆದೇಶದ ಪ್ರಕಾರ, ಸಿಂಗು, ಗಾಜಿಪುರ, ಟಿಕ್ರಿ, ಮುಕರ್ಬಾ ಚೌಕ್ ಮತ್ತು ನಂಗ್ಲೋಯಿ ಮತ್ತು ಎನ್ಸಿಟಿಯಲ್ಲಿ ಅವರ ಪಕ್ಕದ ಪ್ರದೇಶಗಳಲ್ಲಿ ಮದ್ಯಾಹ್ನ 12ರಿಂದ ಮಧ್ಯರಾತ್ರಿ 11.59ರವರೆಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ಪ್ರತಿಭಟನಾಕಾರರು ದೆಹಲಿಯ ಗಡಿಯಲ್ಲಿನ ಭದ್ರತಾ ಸ್ಥಳವನ್ನು ಮುರಿದು ಕೃಷಿ ಕಾನೂನುಗಳ ವಿರುದ್ಧ ಮೆರವಣಿಗೆ ನಡೆಸಲು ಐತಿಹಾಸಿಕ ರಾಜಪತ್ಗೆ ತಲುಪಲು ಪ್ರಯತ್ನಿಸಿದರು.
ವರದಿಗಳ ಪ್ರಕಾರ, ಹೆಚ್ಚಿನ ಜನರು ಗಾಯಗೊಂಡಿದ್ದಾರೆ ಆದರೆ ಅಧಿಕೃತ ಅಂಕಿ ಅಂಶಗಳು ಇನ್ನೂ ಹೊರಬಂದಿಲ್ಲ.