ನವದೆಹಲಿ, ಜ 26 – ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ನಡೆದ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿರುವ ಆಮ್ ಆದ್ಮಿ ಪಕ್ಷ, ಪರಿಸ್ಥಿತಿ ಹದಗೆಡಲು ಕೇಂದ್ರ ಸರ್ಕಾರ ಅವಕಾಶ ನೀಡಿರುವುದು ವಿಷಾದನೀಯ ಎಂದಿದೆ.
ತನ್ನ ಹೇಳಿಕೆಯಲ್ಲಿ ಪಕ್ಷ, ಇಂದಿನ ಪ್ರತಿಭಟನೆಯ ಹಿಂಸಾಚಾರವನ್ನು ಬಲವಾಗಿ ಖಂಡಿಸುತ್ತೇವೆ. ಪರಿಸ್ಥಿತಿಯನ್ನು ಹದಗೆಡಲು ಕೇಂದ್ರ ಸರ್ಕಾರ ಅವಕಾಶ ನೀಡಿರುವುದು ವಿಷಾದನೀಯ. ಕಳೆದ ಎರಡು ತಿಂಗಳಿನಿಂದ ಚಳುವಳಿ ಶಾಂತಿಯುತವಾಗಿ ನಡೆಯುತ್ತಿತ್ತು ಎಂದು ಆರೋಪಿಸಿದೆ.
ಇಂದಿನ ಹಿಂಸಾಚಾರವು ಕಳೆದ ಎರಡು ತಿಂಗಳಿನಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಯನ್ನು ದುರ್ಬಲಗೊಳಿಸಿದೆ. ಇಂದು ಹಿಂಸಾಚಾರದಲ್ಲಿ ತೊಡಗಿರುವವರು ಚಳವಳಿಯ ಭಾಗವಾಗಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ ಎಂದಿದೆ.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ನೋಂದಾಯಿಸಲು ಒಂದು ಭಾಗದಷ್ಟು ರೈತರು ದೆಹಲಿಗೆ ಪ್ರವೇಶಿಸಲು ನಿರ್ಧರಿಸಿದಾಗ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದವು.