ಕಲಬುರಗಿ, ಜ.26 – ಕೃಷಿ ಕಾಯಿದೆಗಳ ವಾಪಸಾತಿ ವಿಷಯ ಪ್ರತಿಷ್ಠೆಯನ್ನಾಗಿಸದಂತೆ ಕೇಂದ್ರಕ್ಕೆ ರಾಜ್ಯ ಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಬೇಕು. ಈ ವಿಷಯವನ್ನು ಸಂಸತ್ ನ ಸ್ಥಾಯಿ ಸಮಿತಿಗೆ ರವಾನಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಧಿಕಾರದಲ್ಲಿರುವವರು ಪ್ರಜಾತಂತ್ರ ವ್ಯವಸ್ಥೆಗೆ, ಸಂವಿಧಾನಕ್ಕೆ ಹಾಗೂ ಸಂಸತ್ತಿಗೆ ಗೌರವ ಕೊಡಬೇಕು ಎಂದು ಅವರು ಟ್ವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.