ನವದೆಹಲಿ, 28- ವಿಧಾನಸಭೆ ಚುನಾವಣೆಯಲ್ಲಿ ಸೋತು ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡಿರುವ ಎಚ್. ವಿಶ್ವನಾಥ ಅವರಿಗೆ “ಸಚಿವ ಸ್ಥಾನ ನೀಡುವಂತಿಲ್ಲ” ಎಂಬ ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪುನ್ನು ಸುಪ್ರೀಮ ಕೋರ್ಟ ಪುರಸ್ಕರಿಸಿದೆ. ಹೀಗಾಗಿ ಸಚಿವರಾಗುವ ಅವರ ಕನಸು ಭಗ್ನವಾಗಿದೆ.
ಸರಕಾರ ಅವರಿಗೆ ಸಚಿವ ಸ್ಥಾನ ನೀಡಲು ಉದ್ದೇಶಿಸಿತು, ಇದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಿದ್ದರು. ರಾಜ್ಯ ಹೈಕೋರ್ಟ್ ಹೆಚ್ ವಿಶ್ವನಾಥ್ ಅವರು ನಾಮನಿರ್ದೇಶನಗೊಂಡು ಸದಸ್ಯರಾಗಿರುವವರು. ಅವರು ಜನರಿಂದ ಆಯ್ಕೆಯಾಗಿಲ್ಲ. ಹೀಗಾಗಿ ಮಂತ್ರಿಯಾಗಲು ಅರ್ಹರಲ್ಲ ಎಂಬುದಾಗಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಅವರು, ಸುಪ್ರೀಮ ಕೋರ್ಟ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಮ ಕೋರ್ಟ ಕೂಡ ಹೈಕೋರ್ಟ ಆದೇಶವನ್ನು ಎತ್ತಿ ಹಿಡಿದಿದ್ದು, ವಿಶ್ವನಾಥ ಮಂತ್ರಿಯಾಗಲು ಅರ್ಹರಲ್ಲ ಎಂಬುದಾಗಿ ತಿಳಿಸಿ, ವಿಶ್ವನಾಥ ಅರ್ಜಿಯನ್ನು ವಜಾಗೊಳಿಸಿದೆ.