ನವದೆಹಲಿ, ಜ 28- ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ಜರುಗಿದ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಪ್ರತಿಭಟನೆ ಗಲಭೆ, ಹಿಂಸಾಚಾರ ಪ್ರಕರಣದ ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ ಶಾ ರಾಜೀನಾಮೆ ನೀಡಬೇಕು ಎಂದು ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಈ ಘಟನೆ ದೇಶಾದ್ಯಂತ, ವಿಶ್ವದಾದ್ಯಂತ ವ್ಯಾಪಕ , ಬಿಸಿ ಚರ್ಚೆಗೆ ಕಾರಣವಾಗಿರುವಾಗಲೇ ಮಮತಾ ಆಗ್ರಹ ಮಾಡಿದ್ದಾರೆ. ಕೇಂದ್ರ ಸರ್ಕಾರ ನೂತನ ಕೃಷಿ ಸುಧಾರಣಾ ಕಾಯಿದೆಯನ್ನು ವಾಪಸ್ ಪಡೆಯಬೇಕು, ಪ್ರಧಾನಿ ಮೋದಿ, ಅಮಿತ್ ಶಾ ಸರಿಯಾಗಿ ಸರ್ಕಾರ ನಡೆಸಬೇಕು, ಅಧಿಕಾರ ನಡೆಸಲು ಆಗದಿದ್ದಲ್ಲಿ ರಾಜೀನಾಮೆ ನೀಡಿ ಹೋಗಬೇಕು ಎಂದೂ ಹೇಳಿದ್ದಾರೆ.
ಅಮಾಯಕ ರೈತರ ಮೇಲೆ ಲಾಠಿ ಪ್ರಹಾರ ನಡೆಸಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಈ ಮಧ್ಯೆ ದೆಹಲಿ ಹಿಂಸಾಚಾರ ಪ್ರಕರಣ ಸಂಬಂಧ ಪೊಲೀಸರು ಒಟ್ಟು 33 ಎಫ್ ಐ ಆರ್ ದಾಖಲಿಸಿದ್ದು, 44 ಮಂದಿಗೆ ಔಟ್ ಲುಕ್ ನೋಟಿಸ್ ನೀಡಿದ್ದಾರೆ, ಇನ್ನೂ ಕೆಲವು ಪ್ರಕರಣಗಳನ್ನು ದೆಹಲಿ ಕ್ರೈಂ ಬ್ರಾಂಚ್ ಗೆ ವರ್ಗಾವಣೆ ಮಾಡಲಾಗಿದೆ.